More

    ಬೆಳಗ್ಗೆ ಹಾಕಿದ ಚುನಾವಣಾ ಬಹಿಷ್ಕಾರ ಬ್ಯಾನರ್ ಮಧ್ಯಾಹ್ನ ತೆರವು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಗರಂ

    ವಿಜಯವಾಣಿ ಸುದ್ದಿಜಾಲ ಬೆಳ್ವೆ
    ಅಮಾಸೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಸುಂಕ ಪರಿಸರದಲ್ಲಿ ಮೂಲಭೂತ ಸೌಕರ್ಯ ವಂಚಿತ ಪರಿಶಿಷ್ಟ ಪಂಗಡ ಕಾಲನಿ ನಿವಾಸಿಗಳು ಅಳವಡಿಸಿದ್ದ ಲೋಕಸಭಾ ಚುನಾವಣಾ ಬಹಿಷ್ಕಾರ ಬ್ಯಾನರನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ತೆರವುಗೊಳಿಸಿದ್ದು, ದಲಿತ ಸಂಘಟನೆ ಇದನ್ನು ವಿರೋಧಿಸಿದೆ.

    ಮೂಲ ಸೌಕರ್ಯ ವಂಚಿತರಾಗಿದ್ದ ಗ್ರಾಮಸ್ಥರು

    ಪರಿಶಿಷ್ಟ ಕಾಲೋನಿ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಕೆರೆಗದ್ದೆ ಸಮೀಪ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಅದೇ ದಿನ ಏಕಾಏಕಿ ಸ್ಥಳಕ್ಕೆ ಆಗಮಿಸಿ ಬ್ಯಾನರ್ ತೆರವುಗೊಳಿಸಿ ತೆರಳಿದ್ದಾರೆ.

    ದಲಿತ ಸಂಘಟನೆ ಆಕ್ರೋಶ

    ದಲಿತ ಸಂಘಟನೆ ಘಟನೆ ಕುರಿತು ಖಂಡಿಸಿದ್ದು, ಗ್ರಾಮದಲ್ಲಿ ಪರವಾನಗಿ ಇಲ್ಲದ ಬ್ಯಾನರ್‌ಗಳ ತೆರವುಗೊಳಿಸುವ ಬದಲು ಅಧಿಕಾರಿಗಳು ಅನ್ಯಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೂಚನೆ ನೀಡದೆ ಬ್ಯಾನರ್ ತೆರವುಗೊಳಿಸಿದ್ದು, ಜತೆಗೆ ನಮ್ಮ ಅಹವಾಲು ಕೇಳುವಷ್ಟೂ ವ್ಯವಧಾನ ಅಧಿಕಾರಿಗಳಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts