More

  ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಟ್ಟು

  ಕೋಲಾರ: ರೈತರ ಜಮೀನನ್ನು ತೆರವುಗೊಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಸಂಯುಕ್ತ ಹೋರಾಟ ಜಿಲ್ಲಾ ಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

  ನಗರದ ಟಮಕ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರು, ಶ್ರೀನಿವಾಸಪುರ ರೈತರನ್ನು ಒಕ್ಕಲೆಬ್ಬಿಸಿ ಸಾವಿರಾರು ಎಕರೆ ಜಮೀನಿನಲ್ಲಿ ರೈತರು ಬೆಳೆದಿದ್ದ ಬಹು ವರ್ಷಗಳ ಮಾವು, ತೆಂಗು, ತರಕಾರಿ ಬೆಳೆಗಳನ್ನು ನಾಶ ಪಡಿಸಿದ್ದಾರೆ. ಇದರಿಂದಾಗಿ ರೈತರು ನಷ್ಟಕ್ಕೆ ಒಳಗಾಗಿದ್ದು, ಅಧಿಕಾರಿಗಳು ರೈತರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಹೈಕೋರ್ಟ್​ ವಕೀಲ ಶಿವ ಪ್ರಕಾಶ್​ ಮಾತನಾಡಿ, ಜಿಲ್ಲಾಧಿಕಾರಿ, ಅರಣ್ಯ ಇಲಾಖಾಧಿಕಾರಿಗಳಿಗೆ ನೆಲದ ಕಾನೂನಿನ ಬಗ್ಗೆ ಅರಿವಿಲ್ಲದಂತೆ ಕಾಣುತ್ತಿದೆ. ಇದರಿಂದಾಗಿ ರೈತರನ್ನು ಅಪರಾಧಿ ಸ್ಥಾನದಲ್ಲಿ ಕಂಡು ಜಮೀನನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಈಗ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲಾಗದೆ ಅರಣ್ಯ ಇಲಾಖಾಧಿಕಾರಿಗಳು ತಲೆ ಮರಿಸಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
  ಚುನಾಯಿತ ನಾಯಕರು ವಿಧಾನಸೌಧದಲ್ಲಿ ರೈತರ ಪರ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. ಉದ್ಯಮಿಗಳು, ಭೂಗಳ್ಳರ ಅಧಿಕಾರಕ್ಕೆ ಬಂದಿದ್ದು, ಅವರ ಕಪಿಮುಷ್ಟಿಯಲ್ಲಿ ಜನತೆ ಸಿಲುಕಿದ್ದಾರೆ. ಸಮಾಜ ಸುಧಾರಣೆಗಾಗಿ ಜಾರಿಗೆ ಬಂದ ಕಾನೂನುಗಳನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡು ಉಳ್ಳವರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
  ಜಿಲ್ಲೆಯಲ್ಲಿರುವ ಅರಣ್ಯ ಜಾಗದಲ್ಲಿ ನೀಲಗಿರಿ ಬೆಳೆಸಲು ದೊಡ್ಡ ಹುನ್ನಾರವಿದೆ, ಇದರಿಂದ ಸರ್ಕಾರಕ್ಕೆ ಆದಾಯ ಬಂದಿಲ್ಲ. ಆದರೆ ಉದ್ಯಮಿಯೊಬ್ಬರು ಬಂಡವಾಳ ಮಾಡಿಕೊಂಡು ಹೋದರು. 1971ರ ಸೆ.13ರಲ್ಲಿ ಅರಣ್ಯ ಒತ್ತುವರಿ ಸಕ್ರಮಗೊಳಿಸಲು ಕಾನೂನು ಜಾರಿಗೊಳಿಸಿದ್ದರು. ಆದರೆ ಈ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಕಾಡುತ್ತಿದೆ ಎಂದರು.
  ಜಿಲ್ಲಾಧಿಕಾರಿ, ಡಿಎ್​ಒ ನೆಲದ ಕಾನೂನು ಅರಿವು ಪಡೆದುಕೊಳ್ಳಬೇಕಿತ್ತು. ಅರಿವಿನ ಕೊರತೆಯಿಂದ ಡಿಎ್​ಒ ಏಕಾಏಕಿಯಾಗಿ ರೈತರನ್ನು ಒಕ್ಕಲೆಬ್ಬಿಸಿ ಬೆಳೆ ತೆರವುಗೊಳಿಸಿದ್ದಾರೆ. ರೈತರನ್ನು ಒತ್ತುವರಿದಾರರು ಎಂದು ಕರೆದಿರುವುದು ವಿಷಾದಕರ. ರೈತರು ಸರ್ಕಾರಿ ಜಾಗ ಅತಿಕ್ರಮಿಸಿಕೊಂಡಿಲ್ಲ, ಕಾನೂನು ಪ್ರಕಾರ ಮಂಜೂರು ಪಡೆದು ವ್ಯವಸಾಯ ಮಾಡುತ್ತಿದ್ದರು ಎಂದರು.
  ಜಿಲ್ಲಾಧಿಕಾರಿ, ಎಸ್ಪಿ, ಏಡುಕೊಂಡಲು ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದ್ದಾರೆ. ಅಧಿಕಾರಿಗಳು ಕಟ್ಟು ಪಾಡುಗಳನ್ನು ಬಿಟ್ಟು ಬೆದರಿಕೆ ಹಾಕುವ ರೀತಿ ಹೇಳಿಕೆ ನೀಡಿದ್ದಾರೆ. ಅಧಿಕಾರದ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ. ಅರಿವಿಲ್ಲದೆ ಉದ್ಧಟ್ಟತನ ತೋರಿರುವ ಏಡುಕೊಂಡಲು ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
  ರೈತರ ಕೂಗು ಸಣ್ಣದಲ್ಲ, ನವಲಗುಂದ ಪ್ರಕರಣದ ವಿಚಾರದಲ್ಲಿ ಅಂದಿನ ಸರ್ಕಾರವನ್ನು ಬುಡಮೇಲು ಮಾಡಿತು, ರೈತರು ಯಾರು ಟಾಟಾ ಬಿರ್ಲಾ ರೀತಿ ಜೀವನ ನಡೆಸುತ್ತಿಲ್ಲ, ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರದಂತೆ ಎಚ್ಚೆತ್ತುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
  ಹೋರಾಟಗಾರ ಗೋಪಾಲ್​ ಮಾತನಾಡಿ, ಅರಣ್ಯ ಇಲಾಖೆಯವರು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈಗಿನ ಡಿಎಫ್​ಒ ಏಡುಕೊಂಡಲು ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಎಷ್ಟು ಮಾಡಿದ್ದಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬಹುಷ ಅವರಿಗೆ ಜಿಲ್ಲೆಯ ಬಗ್ಗೆ ಅರಿವಿಲ್ಲದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಅರಣ್ಯ ಇಲಾಖೆಗೆ ಕಂದಾಯ, ಪೊಲೀಸ್​ ಇಲಾಖೆಯವರು ಸಾಥ್​ ನೀಡಿದ್ದಾರೆ. 1,300 ಎಕರೆ ತೆರವಿನಲ್ಲಿ ದೊಡ್ಡ ಭೂ ಮಾಲೀಕರ ಮಾಹಿತಿ ನೀಡಿಲ್ಲ. ಸಣ್ಣ ರೈತರನ್ನು ಒಕ್ಕಲೆಬ್ಬಿಸಿ 1,30,000 ಮಾವು, ತೆಂಗು ಮರಗಳನ್ನು ನಾಶಪಡಿಸಿದ್ದಾರೆ. ಇಲಾಖೆ ಕಾನೂನು ಪ್ರಕಾರ ತೆರವುಗೊಳಿಸಿರುವುದಾಗಿ ಹೇಳುತ್ತಿದ್ದಾರೆ. ಅರಣ್ಯ ಇಲಾಖೆ ಕಾಯಿದೆಯು ಮರಗಳನ್ನು ನಾಶ ಪಡಿಸಲು ಅವಕಾಶ ನೀಡಿದಿಯ ಎಂದು ಪ್ರಶ್ನಿಸಿದರು.
  ಪ್ರತಿಭಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
  ವಿವಿಧ ಸಂಟನೆಗಳ ಮುಖಂಡರಾದ ಟಿ.ಎಂ.ವೆಂಕಟೇಶ್​, ಪಿ.ಆರ್​.ಸೂರ್ಯನಾರಾಯಣ, ಕೋಟಿಗಾನಹಳ್ಳಿ ಗಣೇಶ್​ಗೌಡ, ಅಬ್ಬಣಿ ಶಿವಪ್ಪ, ಸತೀಶ್​, ಪ್ರಸನ್ನ, ಶ್ರೀರಾಮ್​, ಮುನಿರೆಡ್ಡಿ, ಉಲ್ಜಾರ್​, ಸೈಯದ್​ ಾರೂಕ್​, ಪಾಪತಲ್ಲಿ ಚೌಡರೆಡ್ಡಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts