More

    ಹೈನೋದ್ಯಮದಲ್ಲಿ ಮಹಿಳೆ ಪಾತ್ರ ಅಪಾರ

    ಕೋಲಾರ: ಮಹಿಳೆಯರ ಪರಿಶ್ರಮದಿಂದಾಗಿ ಜಿಲ್ಲೆಯು ಹೈನೋದ್ಯಮದಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ತಿಳಿಸಿದರು.

    ತಾಲೂಕಿನ ಮೇಡಿತಂಬಿಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂ ಉದ್ಘಾಟಿಸಿ ವಾತನಾಡಿ, ಹೈನುಗಾರಿಕೆಯಲ್ಲಿ ತಾಯಂದಿರ ಪಾತ್ರ ಹೆಚ್ಚಿದೆ. ಸಹಕಾರ ರಂಗದಲ್ಲಿ ಮಹಿಳೆಯರು ಎಲೆಮರೆಯ ಕಾಯಂತೆ ಪರಿಶ್ರಮ ಹಾಕುತ್ತಿದ್ದಾರೆ ಎಂದರು.

    ಸಂದ ನೂತನ ಕಟ್ಟಡ ನಿರ್ವಾಣಕ್ಕೆ ಕೋಚಿಮುಲ್‌ನಿಂದ 13.5 ಲಕ್ಷ ರೂ. ಬಿಡುಗಡೆ ವಾಡಿಸಲಾಗುವುದು. ಗಣಕಯಂತ್ರ ಸೌಲಭ್ಯ ಒದಗಿಸಲಾಗುವುದು. ಸಹಕಾರ ಸಂಗಳನ್ನು ಸಮರ್ಥವಾಗಿ ನಡೆಸುವ ಮೂಲಕ ಮಹಿಳೆಯರು ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದರು.
    ಗುಣಮಟ್ಟದ ಹಾಲು ಸಂಗ್ರಹಕ್ಕೆ ಒತ್ತು ನೀಡುವುದು ಅಗತ್ಯ. ಸಂಗಳಲ್ಲಿ ಗುಣಮಟ್ಟಕ್ಕೆ ತಕ್ಕೆಂತೆ ದರ ನೀಡುವುದರಿಂದ ಉತ್ಪಾದಕರಿಗೆ ದರ ಮತ್ತು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಒಕ್ಕೂಟದಿಂದ ವರ್ಷಕ್ಕೆ 2 ಬಾರಿ ಗುಂಪು ವಿಮೆ, ರಾಸುಗಳಿಗೆ ತಪ್ಪದೆ ವಿಮೆ ವಾಡಿಸಬೇಕು. ತಾಲೂಕಿನಲ್ಲಿ ನಿತ್ಯ 1.45 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಗುಣಮಟ್ಟದಲ್ಲಿ ತಾಲೂಕನ್ನು ಪ್ರಥಮ ಸ್ಥಾನಕ್ಕೆ ಕೊಂಡೂಯ್ಯುವ ಅಗತ್ಯವಿದೆ ಎಂದರು.

    ಸಂದ ಅಧ್ಯಕ್ಷೆ ಎಚ್.ಸುನಿತಾ ವಾತನಾಡಿ, ಸಂವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಮಹಿಳೆಯರಿಗಿದೆ. ರಾಸುಗಳ ಸಾಕಾಣೆ, ಸ್ವಚ್ಛತೆ ಕಾಪಾಡುವುದು, ಹಾಲು ಕರೆಯುವುದು ಎಲ್ಲವೂ ಮಹಿಳೆಯರೇ ನಿರ್ವಹಿಸುತ್ತಾರೆ. ಹೆಚ್ಚು ಮಹಿಳೆಯರು ಸದಸ್ಯತ್ವ ಪಡೆಯುವ ಮೂಲಕ ಗ್ರಾಮದ ಸಂ ವಾದರಿಯಾಗಿದೆ ಎಂದರು.

    ಕೋಚಿಮುಲ್‌ನ ಮಹಿಳಾ ನಿರ್ದೇಶಕಿ ಕಾಂತಮ್ಮ ವಾತನಾಡಿ, ಮಹಿಳೆಯರು ನಡೆಸುವ ಸಂದಲ್ಲಿ ಅವ್ಯವಹಾರಗಳಿಗೆ ಆಸ್ಪದ ಇರುವುದಿಲ್ಲ. ಇದಕ್ಕೆ ಹಲವು ನಿದರ್ಶನಗಳಿವೆ. ಮೇಡಿತಂಬಿಹಳ್ಳಿ ಸಂವೂ ಉತ್ತಮ ನಿರ್ವಹಣೆಯ ಮೂಲಕ ಜಿಲ್ಲೆಗೆ ವಾದರಿಯಾಗಲಿ ಎಂದು ಆಶಿಸಿದರು.
    ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಮಹೇಶ್, ಗ್ರಾಪಂ ಸದಸ್ಯ ಎಂ.ಗೋಪಾಲಪ್ಪ, ಕೋಚಿಮುಲ್ ವಿಸ್ತರಣಾಧಿಕಾರಿ ಎಸ್.ನಾಗಪ್ಪ, ಮೇಡಿತಂಬಿಹಳ್ಳಿ ಸಹಕಾರ ಸಂದ ಉಪಾಧ್ಯಕ್ಷೆ ಹೇವಾ, ಸದಸ್ಯರಾದ ಗೀತಾ, ಪಾರ್ವತಮ್ಮ, ಮಜುಳಾ, ಸವಿತಮ್ಮ, ಸಾವಿತ್ರಮ್ಮ, ಜಿ.ವಾಲಾ, ರತ್ನಮ್ಮ, ವಿಮಲಮ್ಮ, ನೀಲಮ್ಮ, ರತ್ನಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts