More

    ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ

    ಶಿರಹಟ್ಟಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿ ಕೇಂದ್ರಕ್ಕೆ ಶಾಸಕ ರಾಮಣ್ಣ ಲಮಾಣಿ ಚಾಲನೆ ಶನಿವಾರ ನೀಡಿದರು.

    ‘ಅತಿಯಾದ ಮಳೆಯಿಂದ ಹೆಸರು ಬೆಳೆ ಹಾನಿಯಾಗಿ ಬಹುತೇಕ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಕಾಲಕ್ಕೆ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿ ಕೇಂದ್ರ ತೆರೆದಿದ್ದರೆ ರೈತರ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ, ಬಹುತೇಕ ರೈತರು ಈಗಾಗಲೇ ಕೈಗೆಟುಕಿದ ದರದಲ್ಲಿ ಹೆಸರುಕಾಳು ಮಾರಿದ್ದಾರೆ. ಆದಾಗ್ಯೂ ಜಿಲ್ಲೆಯಲ್ಲಿ ಪ್ರಥಮವಾಗಿ ಶಿರಹಟ್ಟಿಯಲ್ಲಿ ಹೆಸರುಕಾಳು ಖರೀದಿ ಕೇಂದ್ರ ಆರಂಭವಾಗಿದ್ದು, ರೈತರು ಪ್ರಯೋಜನ ಪಡೆಯಬೇಕು’ ಎಂದು ಶಾಸಕರು ಹೇಳಿದರು.

    ಸಹಕಾರಿ ಸಂಘದ ಕಾರ್ಯದರ್ಶಿ ಶಿವಣ್ಣ ಅಡರಕಟ್ಟಿ ಮಾತನಾಡಿ, ಸರ್ಕಾರದ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್ ಹೆಸರು ಖರೀದಿಗೆ 7,196 ರೂ. ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಾಲ್ ಹೆಸರುಕಾಳು ಖರೀದಿಸಲಾಗುವುದು ಎಂದರು.

    ಸಂಘದ ಅಧ್ಯಕ್ಷ ರಾಮಣ್ಣ ಡಂಬಳ, ವಿಶ್ವನಾಥ ಕಪ್ಪತ್ತನವರ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ದೇವಪ್ಪ ಲಮಾಣಿ, ವೈ.ಎಸ್. ಪಾಟೀಲ, ಜಾನು ಲಮಾಣಿ, ಆರ್.ಬಿ. ಕಮತ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ರಾಮಣ್ಣ ಕಂಬಳಿ, ರಾಜು ಕಪ್ಪತ್ತನವರ, ಶ್ರೀನಿವಾಸ ಬಾರಬರ, ಜಗದೀಶ ತೇಲಿ, ಚನ್ನವೀರಪ್ಪ ಕಲ್ಯಾಣಿ, ಸಂದೇಶ ಗಾಣಿಗೇರ, ಮಹದೇವ ಗಾಣಿಗೇರ, ರವಿ ಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts