More

    ಹೆಸರು ಖರೀದಿಗೆ ಕೇಂದ್ರ ಸರ್ಕಾರ ಅಸ್ತು

    ಹುಬ್ಬಳ್ಳಿ: ಕೇಂದ್ರ ಸರ್ಕಾರವು ರಾಜ್ಯದಲ್ಲಿ ಖರೀದಿ ಕೇಂದ್ರಗಳ ಮೂಲಕ ರೈತರು ಬೆಳೆದ 2021-22ನೇ ಸಾಲಿನ ಮುಂಗಾರು ಹಂಗಾಮಿನ ಹೆಸರುಕಾಳು ಖರೀದಿಯನ್ನು ಕೂಡಲೆ ಆರಂಭಿಸಲು ಮಂಗಳವಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಸರ್ಕಾರ ಘೊಷಿಸಿದ ಬೆಂಬಲ ಬೆಲೆಗಿಂತ ಕನಿಷ್ಠವಾಗಿದೆ. ಕೂಡಲೆ 2021-21ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು ಕಾಳನ್ನು ಕನಿಷ್ಠ ಬೆಂಬಲ ಬೆಲೆಯನ್ವಯ ನೋಂದಾಯಿತ ರೈತರಿಂದ ಖರೀದಿಸಲು ಕೂಡಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. 30,000 ಮೆಟ್ರಿಕ್ ಟನ್ ಹೆಸರುಕಾಳನ್ನು ಬೆಂಬಲ

    ದರದಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿ, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

    ಈ ಬಗ್ಗೆ ರಾಜ್ಯ ಸರ್ಕಾರ ಇದೇ ತಿಂಗಳು ಆ. 18ರಂದು ಕೇಂದ್ರ ಕೃಷಿ ಇಲಾಖೆಗೆ ಪತ್ರ ಬರೆದು, 2021-22ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಮಾರುಕಟ್ಟೆಗೆ ಹೆಸರುಕಾಳು ಬರುತ್ತಿದ್ದು, ಪ್ರತಿ ಕ್ವಿಂಟಾಲ್​ಗೆ 3355 ರೂಪಾಯಿಯಿಂದ 7000 ರೂ. ದರ ಇದೆ. ಇದು ಸರ್ಕಾರ ಘೊಷಿತ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಇರುವುದರಿಂದ ರೈತರಿಗೆ ನಷ್ಟವಾಗುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಹೆಸರುಕಾಳು ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಬೇಗ ಖರೀದಿ ಕೇಂದ್ರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

    ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನನಗೆ ಈ ಬಗ್ಗೆ ಆದೇಶ ಪ್ರತಿ ಕಳುಹಿಸಿದ್ದು, ವಿವರ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ರೈತರ ಸಂಕಷ್ಟಗಳ ಕುರಿತು ರಾಜ್ಯ ಸರ್ಕಾರಕ್ಕೆ ಬೇಗ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆಯಲಾಗಿತ್ತು.

    ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ

    ಜಿಲ್ಲಾಡಳಿತದ ನೇರ ಸಂಪರ್ಕದಲ್ಲಿದ್ದೆ. ಕೇಂದ್ರ ಕೃಷಿ ಸಚಿವರು, ಈ ಬಗ್ಗೆ ಕರ್ನಾಟಕ ರಾಜ್ಯದ ಹೆಸರು ಬೆಳೆ ಬೆಳೆದ ರೈತರ ಸಂಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ಕೇವಲ 4 ದಿನಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ 40,000 ಮೆಟ್ರಿಕ್ ಟನ್ ಹೆಸರುಕಾಳು ಬೆಂಬಲ ದರದಲ್ಲಿ ಖರೀದಿಸಿ 90 ದಿನಗಳಲ್ಲಿ ಸಮಗ್ರ ಪ್ರಕ್ರಿಯೆ ಮುಗಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

    ಕೇಂದ್ರ ನೋಡಲ್ ಏಜೆನ್ಸಿ ಹೆಸರುಕಾಳು ಖರೀದಿ ಪ್ರಕ್ರಿಯೆ ಮುಗಿದ ದಿನದಿಂದ 15 ದಿನಗಳ ಅವಧಿಯಲ್ಲಿ ಖರೀದಿಸಿದ ಹೆಸರುಕಾಳನ್ನು ತೀರುವಳಿ ಮಾಡಬೇಕು. ಸಂಬಂಧಿಸಿದ ಉಗ್ರಾಣಗಳ ರಸೀದಿ ಪಡೆದು ಕೇಂದ್ರ ನೋಡಲ್ ಏಜೆನ್ಸಿಯು

    ರಾಜ್ಯಮಟ್ಟದ ಖರೀದಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕೆಂದೂ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ ಎಂದು ಜೋಶಿ ವಿವರಿಸಿದ್ದಾರೆ.

    ರಾಜ್ಯ ಸರ್ಕಾರ ಕನಿಷ್ಠ 15 ದಿನಗಳ ಅವಧಿಯ ಖರೀದಿಗೆ ಆವರ್ತಕ ನಿಧಿ ಮಂಜೂರು ಮಾಡಿ ಸಂಬಂಧಿಸಿದ ರೈತರ ಆಧಾರ್ ನಂಬರ್ ಜೋಡಣೆ ಆಧಾರಿತ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವ ಕ್ರಮವನ್ನೂ ತುರ್ತಾಗಿ ಮಾಡಲು ಆದೇಶಿಸಲಾಗಿದೆ. ಕಾರಣ ಈ ವಿಷಯದಲ್ಲಿ ತಡಮಾಡದೇ ರಾಜ್ಯ ಸರ್ಕಾರ ಕೂಡಲೆ ಆಯಾ ಜಿಲ್ಲಾಡಳಿತದ ಮೂಲಕ ಖರೀದಿ ಕೇಂದ್ರಗಳನ್ನು ಆರಂಭಿಸಿ ಮುಂದಿನ ಕ್ರಮ ಕೈಗೊಳ್ಳಲು ಸಚಿವ ಜೋಶಿ ಅವರು ರಾಜ್ಯ ಸರ್ಕಾರಕ್ಕೆ ಪ್ರಕಟಣೆ ಮೂಲಕ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts