More

    ಹೆಬ್ಬಾಳ್ಕರ್‌ವಿರುದ್ಧ ಅಧಿಕಾರ ದುರ್ಬಳಕೆ ಆರೋಪ

    ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕರಿಂದ ಅಧಿಕಾರ ದುರ್ಬಳಕೆ ಹಾಗೂ ಅವರ ಪುತ್ರನಿಂದ ಕಾಮಗಾರಿಗಳಿಗೆ ಕಾನೂನು ಬಾಹಿರವಾಗಿ ಚಾಲನೆ ನೀಡುತ್ತಿರುವುದು ಸೇರಿದಂತೆ ಗ್ರಾಮೀಣ ಶಾಸಕಿ ಹಾಗೂ ಪುತ್ರನ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿ ನಿಲಜಿ ಗ್ರಾಪಂ ಸದಸ್ಯರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನಿಲಜಿ ಗ್ರಾಪಂ ಅಧ್ಯಕ್ಷೆ ಸೇರಿದಂತೆ ಸದಸ್ಯರು, ಗ್ರಾಮೀಣ ಶಾಸಕಿ ಹಾಗೂ ಪುತ್ರ ಮೃಣಾಲ್ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಿಭಟನಾಕಾರರು ಮಾತನಾಡಿ, ಕಾನೂನು ಬಾಹಿರವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿರದ ಮೃಣಾಲ್ ಹೆಬ್ಬಾಳ್ಕರ್ ಶಿಂಧೋಳ್ಳಿಯ ಕನಕದಾಸ ನಗರದಲ್ಲಿ ಹಾಗೂ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ, ಕಾನೂನು ಹಾಗೂ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದರು.

    ರಸ್ತೆ ಕಾಮಗಾರಿ ಪ್ರಾರಂಭಿಸಬೇಕಾದರೆ ಕಾಮಗಾರಿಯ ಮಂಜೂರಾತಿ ಪಡೆದುಕೊಳ್ಳಬೇಕು. 5 ಲಕ್ಷ ರೂ.ಗೂ ಅಧಿಕ ಮೊತ್ತದ ಕಾಮಗಾರಿ ಇದ್ದರೆ ಟೆಂಡರ್ ಪ್ರಕ್ರಿಯೆ ನಡೆಯಬೇಕು. ನಂತರ ಕಾಮಗಾರಿಯ ಅನುಮತಿ ಪತ್ರ ಪಡೆದು ಕಾಮಗಾರಿಗೆ ಭೂಮಿಪೂಜೆ ಮಾಡಲು ಅವಕಾಶವಿದೆ. ಆದರೆ , ಈ ಎಲ್ಲ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿ ಸಂವಿಧಾನದಲ್ಲಿ ಯಾವುದೇ ಹುದ್ದೆ ಹೊಂದಿರದ ಶಾಸಕರ ಪುತ್ರ ಮೃಣಾಲ್ ಎಂಬಾತ ಗ್ರಾಪಂ ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೂ ತರದೆ ತಮ್ಮ ತಾಯಿಯ ಅಧಿಕಾರ ದುರ್ಬಳಕೆಯಿಂದ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಆರೋಪಿಸಿದರು.

    ಅಲ್ಲದೇ, ಕಾನೂನು ಬಾಹಿರವಾಗಿ ಚಾಲನೆ ನೀಡುರುವುದರಿಂದ ಗುತ್ತಿಗೆದಾರರು ತೊಂದರೆಗೆ ಸಿಲುಕಿ ಮುಂದೊಂದು ದಿನ ಹಿಂಡಲಗಾ ಗ್ರಾಪಂನ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಶರಣಾದಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಪ್ರತಿಭಟನೆಯಲ್ಲಿ ನಿಲಜಿ ಗ್ರಾಪಂ ಅಧ್ಯಕ್ಷೆ ಮಿಲನ ಮಾತಾರಿ, ಸದಸ್ಯರಾದ ಸತೀಶ ಶಹಾಪುರಕರ್, ಸವಿತಾ ಮುಚ್ಚಂಡಿ, ರೇಖಾ ಶಹಾಪುರಕರ್, ಸಾಗರ ಮುಚ್ಚಂಡಿ, ವೀರಭದ್ರಯ್ಯ ತಳವಾರ, ಸುನೀತಾ ತಳವಾರ, ಪೀರಾಜ ಅನಗೋಳಕರ್, ಬಾಬಾಗೌಡ ಪಾಟೀಲ, ನಂದಿನಿ ನಾಗೇಂದ್ರ ಕುರುಬರ, ಯಲ್ಲಪ್ಪ ಶಹಾಪೂರಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts