More

    ಹೆಬ್ಬಳ್ಳದಲ್ಲಿ ಅದ್ದೂರಿ ಪ್ರಸನ್ನಾಂಜನೇಯಸ್ವಾಮಿ ಉತ್ಸವ

    ಎಚ್.ಡಿ.ಕೋಟೆ: ತಾಲೂಕಿನ ಶಾಂತಿಪುರ(ಹೆಬ್ಬಳ್ಳ) ಗ್ರಾಮದಲ್ಲಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನದ 8ನೇ ವಾರ್ಷಿಕೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು.


    ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡು ಎಂಟು ವರ್ಷ ಕಳೆದ ಹಿನ್ನೆಲೆಯಲ್ಲಿ ಜ.23 ರಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.


    ಜ.23 ರಂದು ಬೆಳಗ್ಗೆ 6.30ಕ್ಕೆ ಹನುಮ ಮಾಲ ಧಾರಣೆ ನಡೆಯಿತು. 24 ರಂದು ಪಂಚಾಮೃತ ಅಭಿಷೇಕ ಮತ್ತು ಬೃಂದಾವನ ತುಳಸಿ ಪೂಜೆ ಜರುಗಿತು. ಜ.25 ರಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಆರಾಧನೆ ಮತ್ತು ಪವಮಾನ ಹೋಮ, ಪೂರ್ಣಾಹುತಿ ಹಾಗೂ ಕುಂಭಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಂತಿಪುರ, ಬೋಚಿಕಟ್ಟೆ, ಕೆ.ಜಿ. ಹುಂಡಿ, ಎಚ್.ಡಿ. ಕೋಟೆ ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ದರ್ಶನ ಪಡೆದರು.


    ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ವೀರಗಾಸೆ ಸಮೇತ ಅದ್ದೂರಿ ಉತ್ಸವ ನಡೆಸಲಾಯಿತು. ರಾತ್ರಿ 10 ಗಂಟೆಯಲ್ಲಿ ಹೆಬ್ಬಳ್ಳ ಜಲಾಶಯದಲ್ಲಿ ತೆಪ್ಪೋತ್ಸವ ಜರುಗುವ ಮೂಲಕ ಮೂರು ದಿನಗಳ ಉತ್ಸವಕ್ಕೆ ತೆರೆ ಬಿದ್ದಿತು.

    ಆಂಧ್ರಪ್ರದೇಶದ ಸತ್ಯನಾರಾಯಣ(ಗಾಂಧಿತಾತ) ಮೂರು ದಿನಗಳ ಕಾಲ ಹನುಮಾನ್ ಚಾಲಿಸ ಪಠಣ ಮಾಡಿದರು. ಅರ್ಚಕರಾದ ಬಸವಣ್ಣ ದೀಕ್ಷಿತ್, ರವಿ ನೇತೃತ್ವದಲ್ಲಿ ಹಾಗೂ ಪಟ್ಟಣದ ದೇವರಾಜ ಮೆಡಿಕಲ್ಸ್‌ನ ಮಲ್ಲೇಶ್ವರಿ ನಟರಾಜು, ಗ್ರಾಮಸ್ಥರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts