More

    ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಆಗ್ರಹ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಿನ್ನೀರಿಗೆ ಮುಳಗಡೆಯಾದ ಜಮೀನು, ವಸತಿ ಕಟ್ಟಡ ಕಳೆದುಕೊಂಡ ಲಕ್ಷಾಂತರ ಸಾರ್ವಜನಿಕರು ಸಂತ್ರಸ್ತರಾಗಿದ್ದು, ಭೂಸ್ವಾಧೀನ ಪರಿಹಾರ ಹಾಗೂ ಇತರೆ ವ್ಯಾಜ್ಯಗಳು ಸೇರಿ 10 ಸಾವಿರಕ್ಕೂ ಪ್ರಕರಣಗಳು ಇವೆ. ಅವುಗಳ ಬಗೆ ಹರಿಸಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಬೇಕು ಎಂದು ಬಾಗಲಕೋಟೆ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ವಕೀಲರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
    ಬುಧವಾರ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಮನವಿ ಸಲ್ಲಿಸಿದ ವಕೀಲರು, ಈ ಕುರಿತು ಸರ್ಕಾರ ಗಮನ ಹರಿಸಿ ಕೂಡಲೇ ನ್ಯಾಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
    2013 ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ವಿಶೇಷ ಭೂಸ್ವಾಧೀನಾಧಿಕಾರಿಗಳು ಪರಿಹಾರ ನೀಡಲು ಆದೇಶಿಸಿದ್ದಾರೆ. ಹೆಚ್ಚುವರಿ ಪರಿಹಾರ ನೀಡುವಂತೆ ಸಂತ್ರಸ್ತರು ಪ್ರಕರಣ ದಾಖಲಿಸುತ್ತಿದ್ದಾರೆ. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿವೆ. ಪ್ರಕರಣಗಳ ಇತ್ಯರ್ಥ ಪಡಿಸಲು ಜಿಲ್ಲಾ ನ್ಯಾಯಾಲಯದಲ್ಲಿ ಸಿಬ್ಬಂದಿಗಳು ಇಲ್ಲ. ದಿನ ಕಳೆದಂತೆ ಸರ್ಕಾರವು ಬಡ್ಡಿ ಪಾವತಿಸುವುದು ಹೊರೆಯಾಗುತ್ತದೆ. ಆದ್ದರಿಂದ ಉಚ್ಛ ನ್ಯಾಯಾಲಯವು ಬಾಗಲಕೋಟೆಗೆ ಮೂರು ಹೆಚ್ಚುವರಿ ನ್ಯಾಯಾಲಯ ಮಂಜೂರು ಮಾಡಿದ್ದು, ಅದಕ್ಕೆ ಹಣಕಾಸು ಇಲಾಖೆ ಅನುಮೋದನೆ ಬೇಕಿದೆ. ಕೂಡಲೇ ಸರ್ಕಾರ ಒಪ್ಪಿಗೆ ನೀಡಿ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸಬೇಕು ಎಂದು ನ್ಯಾಯವಾದಿಗಳ ಸಂಘವು ಆಗ್ರಹಿಸಿದೆ.
    ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ನ್ಯಾಯವಾದಿ ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಎಸ್.ಎಸ್.ದೇಸಾಯಿ, ಟಿ.ವಿ.ಚೌಕಿಮಠ, ಎಸ್.ಎ.ಹಾವರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts