More

    ಹೆಚ್ಚಳವಾಯ್ತು ವಾಹನಗಳ ಸಂಚಾರ

    ಹುಬ್ಬಳ್ಳಿ: ಲಾಕ್​ಡೌನ್ ಮಧ್ಯೆಯೂ ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬಂದಿತು.

    ಬೈಕ್, ಕಾರುಗಳ ಜೊತೆಗೆ ಆಟೋಗಳ ಓಡಾಟವೂ ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಸವೋದಯ ವೃತ್ತ, ಚನ್ನಮ್ಮ ವೃತ್ತ ಸೇರಿ ಇತರ ಪ್ರದೇಶಗಳಲ್ಲಿ ಗುರುವಾರಕ್ಕಿಂತ ಹೆಚ್ಚಾಗಿತ್ತು.

    ಕಳೆದ 2 ದಿನಗಳಿಂದ ಅನಗತ್ಯವಾಗಿ ಸಂಚರಿಸುವ ವಾಹನಗಳ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ ಎಂದು ಭಾವಿಸಲಾಗಿದೆ. ಬೈಕ್​ನಲ್ಲಿ ಅನಗತ್ಯವಾಗಿ ಸುತ್ತುವವರಿಗೆ ಲಾಠಿ ರುಚಿ ತೋರಿಸುತ್ತಿದ್ದ, ವಾಹನಗಳನ್ನು ಜಪ್ತಿ ಮಾಡುತ್ತಿದ್ದ ಪೊಲೀಸರು 2 ದಿನಗಳಿಂದ ಸ್ವಲ್ಪ ಶಾಂತರಾಗಿದ್ದಾರೆ.

    ಕೈಯಲ್ಲೊಂದು ಚೀಲವನ್ನೋ, ಔಷಧ ಚೀಟಿಯನ್ನೋ ಹಿಡಿದುಕೊಂಡು ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿ ಪ್ರಮುಖ ಭಾಗದಲ್ಲಿ ಕೆಲವರು ಪುನಃ ಪುನಃ ಸುತ್ತು ಹೊಡೆದಿದ್ದು ಕಂಡುಬಂದಿತು.

    ಪಾದಚಾರಿಗಳ ಸಂಖ್ಯೆಯಲ್ಲೂ ಸ್ವಲ್ಪ ಹೆಚ್ಚಳವಾಗಿದೆ. ಬೈಕ್​ನಲ್ಲಿ ಹೋದರೆ ಪೊಲೀಸರು ತಡೆದು ದಾಖಲೆಪತ್ರ ಕೇಳುತ್ತಾರೆ ಎಂಬ ಕಾರಣಕ್ಕೆ ಕೆಲವರು ಸಮೀಪದ ಸ್ಥಳಗಳಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts