More

    ಹೂವು ಪೋಣಿಸಿದ ದಾರದಂತೆ ಜೀವನ ನಡೆಸಿ

    ಬಸವಕಲ್ಯಾಣ: ಹೂಗಾರ ಮಾದಯ್ಯ 12ನೇ ಶತಮಾನದಲ್ಲಿ ಬಸವಣ್ಣನವರ ಜತೆಗೂಡಿ ಶರಣರಿಗೆ ಹೂವು ಪೂರೈಸುವ ಕಾಯಕ ಕೈಗೊಂಡಿದ್ದರು. ಅವರ ಆದರ್ಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಎಲ್ಲರೂ ಹೂವು ಪೋಣಿಸಿದ ದಾರದಂತೆ ಬಾಳಬೇಕು ಎಂದು ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.

    ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗ ಮತ್ತು ವಚನ ಟ್ರೇಡಿಂಗ್ ಸಲ್ಯುಷನ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಹಾಗೂ ತಬಲಾ ಸೋಲೋ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶರಣರ ಕಾಯ ಮತ್ತು ಕಾಯಕವೆರಡು ಕೈಲಾಸವೆಂದು ಜನಪದ ಹಾಡಿನ ಮೂಲಕ ಮಾದಯ್ಯನವರನ್ನು ಬಣ್ಣಿಸಿದರು.

    ನೇತೃತ್ವ ವಹಿಸಿದ್ದ ನದಿಸಿನ್ನೂರದ ಶ್ರೀ ಗುರುದೇವರು ಮಾತನಾಡಿ, ಬಸವಣ್ಣನವರ ಸಮಕಾಲೀನರಲ್ಲಿ ಜನ್ಮ ತಾಳಿದ ಹೂಗಾರ ಮಾದಯ್ಯ ಬದುಕು, ಜೀವನ, ಕಾರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದರು.

    ಹಿರಿಯ ಸಾಹಿತಿ ಡಾ.ಸಿದ್ದು ಯಾಪಲಪರವಿ ಮಾತನಾಡಿ, ಈ ದೇಶದಲ್ಲಿ ಅನೇಕ ಮಹಾಶರಣರು ಜನಿಸಿಸಮಾಜಕ್ಕೆ ಪ್ರೇರಣೆ ಕೊಟ್ಟಿದ್ದಾರೆ. ಶರಣ ಮಾದಯ್ಯ ಕಾಯಕದ ಮೂಲಕ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.

    ಕಲ್ಯಾಣ ಕನರ್ಾಟಕ ಹೂಗಾರ ಮಾದಣ್ಣ ಸಮಾಜದ ಅಧ್ಯಕ್ಷ ಬಸವರಾಜ ಹೂಗಾರ ಉದ್ಘಾಟಿಸಿ ಮಾತನಾಡಿ, ಶಿವಶರಣ ಹೂಗಾರ ಮಾದಯ್ಯ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಅವರ ಬಗ್ಗೆ ಸಂಶೋಧನಾ ವಿದ್ಯಾಥರ್ಿಗಳು ಅಧ್ಯಯನ ಮಾಡಲು ವಿಫುಲ ಅವಕಾಶಗಳಿವೆ ಎಂದರು.

    ಬಿಡಿಪಿಸಿ ಅಧ್ಯಕ್ಷ ಅನೀಲಕುಮಾರ ರಗಟೆ ಅಧ್ಯಕ್ಷತೆ ವಹಿಸಿದ್ದರು. ಬೀದರ್ ವಚನ ಟ್ರೇಡಿಂಗ್ ಸಲ್ಯುಷನ್ ವ್ಯವಸ್ಥಾಪಕ ನಿದರ್ೇಶಕ ಅಲ್ಲಮಪ್ರಭು ನಾವದಗೇರೆ, ತಾಲೂಕು ವ್ಯವಸ್ಥಾಪಕ ಪ್ರದೀಪ ವಿಸಾಜಿ, ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ವಿಠ್ಠಲ್ ಹೂಗಾರ, ರೇವಣಪ್ಪ ರಾಯವಾಡೆ, ಸಂಗೀತ ಶಿಕ್ಷಕ ರಾಜಕುಮಾರ ಹೂಗಾರ, ಬನ್ನಪ್ಪ ಪೂಜಾರ, ಲಕ್ಷ್ಮೀಬಾಯಿ ಪಾಟೀಲ್, ಜಗದೇವಿ ಹೂಗಾರ, ವೀರಶೆಟ್ಟಿ ಮಲಶೆಟ್ಟಿ, ಬಸವರಾಜ ತೊಂಡಾರೆ, ಮಲ್ಲಿಕಾಜರ್ುನ ಕುರಕೋಟೆ, ಉದಯಕುಮಾರ ಮುಳೆ, ಮಹಾದೇವಪ್ಪ ಇಜಾರೆ, ಸಿದ್ದಣ್ಣ ಹಂಗರಗಿ ಇತರರಿದ್ದರು. ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು.

    ಮಂತ್ರಮುಗ್ಧಗೊಳಿಸಿದ ತಬಲಾ ಸೋಲೋ:
    ವಾದ್ಯ ಲೋಕದ ಅಪರೂಪದ ಸಾಧಕಿ, ತಬಲಾ ರಾಣಿ ಎಂದೇ ಖ್ಯಾತರಾಗಿರುವ ಕೋಲ್ಕತದ ರಿಂಪಾ ಸಿವಾ 45 ನಿಮಿಷ ನಡೆಸಿಕೊಟ್ಟ ತಬಲಾ ಸೋಲೋ ಕಾರ್ಯಕ್ರಮ ಗಮನ ಸೆಳೆಯಿತು. ವಾದನದ ಮೂಲಕ ನುಡಿಸಿದ ವಿವಿಧ ಪ್ರಕಾರಗಳು ಸಂಗೀತಪ್ರಿಯರನ್ನು ಮಂತ್ರಮುಗ್ಧಗೊಳಿಸಿದವು. ಇದಕ್ಕೂ ಮೊದಲು ಬೀದರ್ನ ಶಿವಾನಿ ವಚನ ಗಾಯನ, ಅಕ್ಕನ ಬಳಗ ಮತ್ತು ನೀಲಮ್ಮನ ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts