More

    ಹುಮನಾಬಾದ್​ನಲ್ಲಿ ಬೇಲ್ ಮೇಲೆ ಬಂದವರ ಅದ್ದೂರಿ ಮೆರವಣಿಗೆ

    ಹುಮನಾಬಾದ್: ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ವಶದಲ್ಲಿದ್ದ ಬಿಎಸ್ಪಿ ರಾಜ್ಯ ಕಾರ್ಯದಶರ್ಿ ಅಂಕುಶ ಗೋಖಲೆ ಸೇರಿ ಐವರನ್ನು ಪಟ್ಟಣದಲ್ಲಿ ಮಂಗಳವಾರ ದಲಿತಪರ ಸಂಘಟನೆ ಹಾಗೂ ಅಭಿಮಾನಿಗಳಿಂದ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.

    ನ್ಯಾಯಾಂಗ ವಶದಲ್ಲಿದ್ದ ಇವರು ಜಾಮೀನಿನ ಮೇಲೆ ಬಂದಿದ್ದಾರೆ. ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೆ ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯುದ್ದಕ್ಕೂ ಅಂಕುಶ ಗೋಖಲೆ ಜತೆಗೆ ಜಮೀಲ್ ಖಾನ್, ರಾಜಕುಮಾರ ಸಿಂಧೆ, ದೇವೀಂದ್ರ ಗದ್ದರ್, ದತ್ತು ವರವಟ್ಟಿ ಮೇಲೆ ಅಭಿಮಾನಿಗಳು ಜೆಸಿಬಿಯಿಂದ ಪುಷ್ಪವೃಷ್ಟಿ ಮಾಡಿದರು.

    ಡಾ.ಬಿ.ಆರ್. ಅಂಬೇಡ್ಕರ್ ಪತ್ರಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಗೋಖಲೆ, ಜಾತಿವಾದಿಗಳ ವಿರುದ್ಧ ನಮ್ಮ ಹೋರಾಟ ನಿರಂತರ ಇರಲಿದೆ. ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿರುವ ಡಾ. ಅಂಬೇಡ್ಕರ್ ಅವರಿಗೆ ಅವಮಾನವಾದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

    ಬಾಬಾಸಾಹೇಬರ ಭಾವಚಿತ್ರಕ್ಕೆ ರಾಯಚೂರಿನಲ್ಲಿ ನ್ಯಾಯಾಧೀಶರು ಅವಮಾನಿಸಿದ್ದನ್ನು ಖಂಡಿಸಿ ಪಕ್ಷದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಹೋಗಿದ್ದಾಗ ತಹಸೀಲ್ದಾರರು ವಿಳಂಬ ಮಾಡಿದರು. ಅಲ್ಲದೆ ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಷಡ್ಯಂತ್ರದಿಂದ ನಮ್ಮ ಬಂಧನವಾಗಿದ್ದು, ಹೆದರುವುದಿಲ್ಲ. ತಹಸೀಲ್ದಾರರನ್ನು ಬಂಧಿಸಿ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

    ಪ್ರಮುಖರಾದ ಚೇತನ ಗೋಖಲೆ, ಗೌತಮ ಪ್ರಸಾದ, ಶಿವಾನಂದ ಕಟ್ಟಿಮನಿ, ಅಂಕುಶ ಪ್ರಸಾದ, ಸತೀಶ ರತ್ನಕರ್, ಗೌತಮ ಚವ್ಹಾಣ್, ಸೋಮು ಡಾಂಗೆ, ಕಾನಿಕ್ ಜಾನವೀರ, ಸಾಗರ ಹಳ್ಳಿಖೇಡ, ಯಶ್ಪಾಲ್, ಸಿದ್ಧಾರ್ಥ ಡಾಂಗೆ, ಸುಶೀಲ್ ಭೋಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts