More

    ಹುಬ್ಬಳ್ಳಿ-ಜೋಧಪುರ ಶ್ರಮಿಕ ಎಕ್ಸ್​ಪ್ರೆಸ್ ರೈಲು

    ಹುಬ್ಬಳ್ಳಿ:ವಲಸೆ ಕಾರ್ವಿುಕರು, ವಿದ್ಯಾರ್ಥಿಗಳನ್ನು ತವರೂರಿಗೆ ಕಳುಹಿಸುವುದಕ್ಕಾಗಿ ಹುಬ್ಬಳ್ಳಿ-ಜೋಧಪುರ-ಹುಬ್ಬಳ್ಳಿ ಮಧ್ಯೆ 2 ಟ್ರಿಪ್ ಶ್ರಮಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚರಿಸಲಿದೆ. ಮೇ 13 ಮತ್ತು 14 ರಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ಈ ರೈಲು, ಮಾರನೇ ದಿನ ಮಧ್ಯಾಹ್ನ 2.30ಕ್ಕೆ ಜೋಧಪುರ ತಲುಪಲಿದೆ. ಮೇ 14 ಮತ್ತು 15ರಂದು ಸಂಜೆ 6 ಗಂಟೆಗೆ ಜೋಧಪುರದಿಂದ ಹೊರಡುವ ಈ ರೈಲು, ಮಾರನೇ ದಿನ ರಾತ್ರಿ 11.55ಕ್ಕೆ ಹುಬ್ಬಳ್ಳಿ ತಲುಪಲಿದೆ.

    ಈ ರೈಲು ಮಿರಜ್, ಪುಣೆ, ವಾಸಾಯಿ ರೋಡ್, ವಡೋದರಾ, ಪಾಲಂಪುರ ಮಾರ್ಗದ ಮೂಲಕ ಸಂಚರಿಸಲಿದೆ.

    ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳಲು ಜಿಲ್ಲಾಡಳಿತದ ಬಳಿ ಹೆಸರು ನೋಂದಾಯಿಸಿರುವ 1,452 ಜನರನ್ನು ಮೇ 13ರ ಶ್ರಮಿಕ ಎಕ್ಸ್​ಪ್ರೆಸ್ ರೈಲಿನಲ್ಲಿ ಕಳುಹಿಸಲಾಗುತ್ತಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಇರುವ ರ್ಪಾಂಗ್ ಸ್ಥಳದಲ್ಲಿ ಬೆಳಗ್ಗೆ 6 ಗಂಟೆಯಿಂದ ಈ ಎಲ್ಲ ಶ್ರಮಿಕ ವರ್ಗದವರ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ರ್ಪಾಂಗ್ ಪ್ರದೇಶದಲ್ಲಿ 15 ಕೌಂಟರ್​ಗಳನ್ನು ನಿರ್ವಿುಸಲಾಗಿದೆ. ಒಬ್ಬ ವೈದ್ಯರು, ನರ್ಸ್, ಕಂದಾಯ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿಯೊಬ್ಬರ ಆರೋಗ್ಯದ ವರದಿಯನ್ನು ಅವರಿಗೆ ನೀಡಿರುವ ನೋಂದಾಯಿತ ಗುರುತಿನ ಸಂಖ್ಯೆಯಡಿ ದಾಖಲಿಸಲಾಗುವುದು.

    ವಲಸೆ ಕಾರ್ವಿುಕ ರಾಜಸ್ಥಾನಕ್ಕೆ ತೆರಳಿದ ನಂತರ ಆತನಿಗೆ ಕರೊನಾ ಸೋಂಕು ಪಾಸಿಟಿವ್ ಕಂಡುಬಂದಲ್ಲಿ ಈ ಗುರುತಿನ ಸಂಖ್ಯೆಯ ಸಹಾಯದಿಂದ ಆತನ ಹಿಸ್ಟರಿ ಕಂಡುಹಿಡಿಯಲು ಸರಳವಾಗುತ್ತದೆ.

    ಕೌಂಟರ್​ನಲ್ಲಿ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬರುವ ಕಾರ್ವಿುಕರ ಪ್ರವಾಸವನ್ನು ರದ್ದುಗೊಳಿಸಲಾಗುವುದು.

    ಮಾರ್ಗ ಮಧ್ಯದಲ್ಲಿ ರೈಲು ನಿಲುಗಡೆಗೊಳ್ಳುವ ಸ್ಥಳದಲ್ಲಿ ಯಾವುದೇ ಪ್ರಯಾಣಿಕರಿಗೆ ಕೆಳಗೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಈ ಶ್ರಮಿಕ ಎಕ್ಸ್​ಪ್ರೆಸ್ ರೈಲಿಗೆ 24 ಬೋಗಿಗಳನ್ನು ಅಳವಡಿಸಲಾಗಿದೆ. 18 ಬೋಗಿಗಳಲ್ಲಿ ತಲಾ 72 ಜನರು ಪ್ರಯಾಣಿಸಲಿದ್ದಾರೆ. 4 ಬೋಗಿಗಳಲ್ಲಿ ತಲಾ 38 ಜನರು ಹಾಗೂ ರೈಲ್ವೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ. ಇನ್ನುಳಿದ 2 ಬೋಗಿಗಳನ್ನು ಮೀಸಲು ಸ್ಥಿತಿಯಲ್ಲಿ ಇಡಲಾಗಿದೆ. ಒಂದು ವೇಳೆ ಇನ್ನೂ ಹೆಚ್ಚಿನ ಪ್ರಯಾಣಿಕರು ಕೊನೇ ಕ್ಷಣದಲ್ಲಿ ಬಂದಲ್ಲಿ, ಮೀಸಲಿಟ್ಟಿರುವ ಈ ಬೋಗಿಗಳಲ್ಲಿ ಅವರಿಗೆ ಅವಕಾಶ ನೀಡಲಾಗುವುದು.

    ಕಾರ್ವಿುಕರಿಗೆ ಉಪ್ಪಿಟ್ಟು, ಪಲಾವ್ :ಈ ವಲಸೆ ಕಾರ್ವಿುಕರಿಗೆ ಬುಧವಾರ ಬೆಳಗ್ಗೆ ಉಪ್ಪಿಟ್ಟು ಹಾಗೂ ಮಧ್ಯಾಹ್ನ ಪಲಾವ್ ನೀಡಲಾಗುತ್ತದೆ. ರಾತ್ರಿ ಮೀರಜ್​ನಲ್ಲಿ ಊಟ ಹಾಗೂ ಮಾರನೇ ದಿನ ಬೆಳಗ್ಗೆ ಲೋನಾವಾಲಾದಲ್ಲಿ ಉಪಾಹಾರ ಒದಗಿಸಲಾಗುತ್ತದೆ.

    ನಗರದ ಹೊಸ ಬಸ್ ನಿಲ್ದಾಣದಲ್ಲಿನ ಕೌಂಟರ್ ಹಾಗೂ ತಹಸೀಲ್ದಾರ ಕಚೇರಿಯಲ್ಲಿನ ಕೌಂಟರ್​ಗಳಲ್ಲಿ ಧಾರವಾಡ ಜಿಲ್ಲೆಯ ಕಾರ್ವಿುಕರು ರಾಜಸ್ಥಾನಕ್ಕೆ ತೆರಳಲು ಹೆಸರು ನೋಂದಾಯಿಸಿದ್ದರು. ಸೇವಾಸಿಂಧು ಪೋರ್ಟಲ್ ಮೂಲಕವೂ ಕೆಲವರು ಹೆಸರು ನೋಂದಾಯಿಸಿದ್ದರು. ರಾಜಸ್ಥಾನದ ಜೋಧಪುರಕ್ಕೆ ತೆರಳಲು ಪ್ರತಿಯೊಬ್ಬ ವಲಸೆ ಕಾರ್ವಿುಕ ರೈಲ್ವೆ ಶುಲ್ಕ 690 ರೂ. ಪಾವತಿಸಿದ್ದಾರೆ.

    ರಾಜಸ್ಥಾನಕ್ಕೆ ತೆರಳಲು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಾಯಿತರು ಉಳಿದಿದ್ದರೆ ಅಂಥವರು ಬುಧವಾರ ಬೆಳಗ್ಗೆ 6 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದರೆ, ಅನುಕೂಲ ಕಲ್ಪಿಸಿಕೊಡಲಾಗುವುದು.

    – ಶಶಿಧರ ಮಾಡ್ಯಾಳ, ಹುಬ್ಬಳ್ಳಿ ಶಹರ ತಹಸೀಲ್ದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts