More

    ಹಿಂದೂ ಮಹಾಗಣಪತಿ ಮೆರವಣಿಗೆ, ಯುವಕರ ಘರ್ಜನೆ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಗಣಪತಿ ಬಪ್ಪ ಮೋರಿಯಾ, ವಂದೇ ಮಾತರಂ, ಭಾರತ ಮಾತಾ ಕೀ ಜೈ, ಜೈ ಶ್ರೀರಾಮ… ಘೋಷಣೆಗಳ ನಾದ ಎಲ್ಲೆಡೆ ಮೊಳಗಿದರೆ, ಮತ್ತೊಂದೆಡೆ ಡೊಳ್ಳು, ಹಲಗೆ, ಡೋಲುಗಳ ಘರ್ಜನೆಯೊಂದಿಗೆ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಮಂಗಳವಾರ ಸಹಸ್ರಾರು ಜನರ ಮಧ್ಯೆ ನಡೆಯಿತು.
    ನಗರದ ಕೋಟೆ ಆವರಣದಲ್ಲಿ ಪ್ರತಿಷ್ಠಾಪಿಸಿದ ೨೧ ದಿನದ ಗಣೇಶ ಮೂರ್ತಿಯನ್ನು ಶೃಂಗರಿಸಿದ ರಥದಲ್ಲಿ ಪ್ರತಿಷ್ಠಾಪಿಸಿದ್ದು, ಮೆರವಣಿಗೆ ಅದ್ದೂರಿ ಚಾಲನೆ ದೊರೆಯಿತು. ಮಣ್ಣಿನ ಗಣಪತಿಗೆ ಸಹಸ್ರಾರು ಯುವಕರು ನಮನಗಳನ್ನು ಸಲ್ಲಿಸಿದರು.
    ಬೆಳಗ್ಗೆ ೧೧ಗಂಟೆಗೆ ಆರಂಭವಾದ ಶೋಭಾಯಾತ್ರೆಯಲ್ಲಿ ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದರೆ ಮತ್ತೊಂದೆಡೆ ಕೇಸರಿ ಶಾಲು ಧರಿಸಿದ ಯುವಕರ ಬೃಹತ್ ಪಡೆಯೂ ಮಾರ್ಗದುದ್ದಕ್ಕೂ ಹೆಜ್ಜೆ ಹಾಕಿತು.
    ನಗರ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು, ಪುರುಷರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಕೋಟೆ ಆವರಣದಿಂದ ಪ್ರಕಾಶ ಟಾಕೀಸ್, ಹುಮನಾಬಾದ್ ಬೇಸ್, ಪೊಲೀಸ್ ಚೌಕ್, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಶ್ರೀಶರಣಬಸವೇಶ್ವರ ಕೆರೆಯ ಕಲ್ಯಾಣಿಯವರೆಗೆ ಅದ್ದೂರಿ ಶೋಭಾಯಾತ್ರೆ, ನಡೆದು ಸಂಪನ್ನಗೊAಡಿತು.ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಶರಣಪ್ಪ ತಳವಾರ, ಸಿದ್ದಾಜಿ ಪಾಟೀಲ್, ನಾಗೇಂದ್ರ ಕಬಾಡೆ, ಅಶ್ವೀನಕುಮಾರ, ಪ್ರಶಾಂತ ಗುಡ್ಡಾ, ಸತೀಶ ಮಾಹೋರ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ರಾಮುರೆಡ್ಡಿ, ರಾಜು ಭವಾನಿ, ಮಣಿಕಂಠ ರಾಠೋಡ್, ವಿಶ್ವನಾಥ ಸಾಲಿಮಠ, ಶ್ರೀಶೈಲ ಮೂಲಗೆ, ಮಲ್ಲಿನಾಥ ಅವರಾದಿ, ನಿತೀಶಕುಮಾರ, ಭಾರ್ಗವಿ, ಶಿವರಾಜ ಸಂಗೋಳಗಿ ಇತರರಿದ್ದರು.

    ದೇಸಿ ಕಲೆಗಳ ಸಮ್ಮಿಲನ: ಮೆರವಣಿಗೆಯುದ್ದಕ್ಕೂ ನಾಸಿಕ ಡೋಲಿನ ಘರ್ಜನೆಗೆ ಕುಣಿದು ಕುಪ್ಪಳಿಸಿದರೆ, ಧಾರವಾಡದ ಜಗ್ಗಲಗಿಯ ಮೇಳ ಹೊಸ ನಾದ ನೀಡಿತು. ಬೀದರ್‌ನ ಪಂಜಾಬಿ ಡೋಲು ಮತ್ತು ನೃತ್ಯದ ತಂಡ ಮೆರವಣಿಗೆಗೆ ಹೊಸ ಸ್ಪರ್ಷ ನೀಡಿತು. ೫೦ಕ್ಕೂ ಹೆಚ್ಚು ಸ್ಥಳೀಯ ಹಲಗೆ ಮೇಳವೂ ದೇಸಿ ಸ್ಪರ್ಷ ನೀಡಿದರೆ, ಡೊಳ್ಳಿನ ತಂಡದ ನಾದ ಎಲ್ಲೆಡೆ ಪಸರಿಸಿತು. ಚಿಟ್ಟಲಗಿ ಮೇಳವೂ ಗತವೈಭವ ಮೆರೆಸಿದರೆ, ಬೃಹತ್ ಸೌಂಡ್‌ಸಿಸ್ಟ್ನಿAದ ಹೊರಹೊಮ್ಮಿದ ಹಿಂದುತ್ವ, ದೇಶಭಕ್ತಿಯ ಗೀತೆಗಳಿಗೆ ಯುವಕರು ಹುಚ್ಚೆದ್ದು ಕುಣಿದು, ಘೋಷಣೆಗಳನ್ನು ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts