More

    ಹಾಸ್ಟೆಲ್​ಗಳ ಅವ್ಯವಸ್ಥೆ ಸರಿಹೋಗ್ಬೇಕು

    ಜೇವರ್ಗಿ: ತಮಗಿಷ್ಟ ಬಂದಂತೆ ವರ್ತಿಸುತ್ತಿರುವ ವಸತಿ ನಿಲಯದ ನೌಕರರು ಹಾಗೂ ಅಧಿಕಾರಿಗಳಿಗೆ ಶಾಸಕ ಡಾ.ಅಜಯಸಿಂಗ್ ಚಾಟಿ ಬೀಸಿ, ನಿಮ್ಮಿಂದ ಸಕರ್ಾರಕ್ಕೆ ಕೆಟ್ಟ ಹೆಸರು, ಕೂಡಲೇ ಅವ್ಯವಸ್ಥೆ ಸರಿಹೋಗಬೇಕು ಖಡಕ್ ವಾರ್ನಿಂಗ್ ಕೊಟ್ಟ ಪ್ರಸಂಗ ಶನಿವಾರ ನಡೆಯಿತು.

    ಬೆಳಗ್ಗೆಯೇ ಹೊರವಲಯದ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಅವರು, ಅಡುಗೆ ಕೋಣೆ, ಶೌಚಗೃಹ, ಸ್ನಾನಗೃಹ, ವಸತಿ ಕೋಣೆಯಲ್ಲಿನ ಅವ್ಯವಸ್ಥೆ ಕಂಡು ದಂಗಾದರು. ಅಡುಗೆ ಕೋಣೆಯಲ್ಲಿ ತರಕಾರಿ ಹಾಗೂ ಆಹಾರ ಧಾನ್ಯವಿಲ್ಲ. ಕಡತಗಳನ್ನು ನೋಡಲು ಹೋದರೆ, ಅವು ಮಾಯ. ಇದರಿಂದ ಆಕ್ರೋಶಗೊಂಡ ಶಾಸಕರು ಕೂಡಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹಾಸ್ಟೆಲ್​ಗೆ​ ಬರುವಂತೆ ಸೂಚನೆ ನೀಡಿದರು.


    ಬಿಸಿನೀರಿನ ವ್ಯವಸ್ಥೆ ಇಲ್ಲ, ಕಳಪೆ ಊಟ ಕೊಡುತ್ತಾರೆ. ಎರಡು ವಸತಿ ನಿಲಯಗಳಿದ್ದು, ನೌಕರರು ಬರುವುದೇ ಇಲ್ಲ. 6 ಜನ ಅಡುಗೆ ಸಿಬ್ಬಂದಿಯಿದ್ದು, ಎರಡು ವಸತಿ ನಿಲಯಗಳ ಮಧ್ಯೆ ಕೇವಲ ಮೂವರು ಸಿಬ್ಬಂದಿ ಕರ್ತವ್ಯಕ್ಕೆ ಬರುತ್ತಾರೆ. ನಮಗೆ ಸೌಕರ್ಯ ಕಲ್ಪಿಸಿಕೊಡಿ ಸರ್ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

    ಸಕರ್ಾರ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಸ್ಟೆಲ್​ಗಳನ್ನು ನಿರ್ಮಿಸಿ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಆದರೆ ನೀವೆಲ್ಲರೂ ನಿರ್ಲಕ್ಷೃದಿಂದ ಕೆಲಸ ನಿರ್ವಹಿಸಿ ಸರ್ಕಾರದ ಹೆಸರನ್ನು ಹಾಳು ಮಾಡುತ್ತಿದ್ದೀರಿ. ವಸತಿ ನಿಲಯಗಳಲ್ಲಿನ ವ್ಯವಸ್ಥೆ ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

    ಪ್ರಮುಖರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ವಿಜಯಕುಮಾರ ಹಿರೇಮಠ, ಶಾಂತಪ್ಪ ಕೂಡಲಗಿ, ಲಕ್ಷ್ಮೀಕಾಂತ ಕುಲಕಣರ್ಿ, ರಿಯಾಜ ಪಟೇಲ್ ಮುದಬಾಳ, ಇಮ್ರಾನ್ ಕಾಸರಭೋಸಗಾ, ರಫೀಕ್ ಜಮಾದಾರ ಇದ್ದರು.


    ಸಮಸ್ಯೆ ಮುಕ್ತ ಹಾಗೂ ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಪಣತೊಟ್ಟಿದ್ದು, ಮೊದಲಿಗೆ ವಸತಿನಿಲಯಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಹಾಸ್ಟೆಲ್ಗೂ ಭೇಟಿ ನೀಡಿ, ಸಮಸ್ಯೆ ಆಲಿಸುತ್ತೇನೆ. ಅವ್ಯವಸ್ಥೆ ಸುಧಾರಣೆ ಆಗಬೇಕು, ನಿರ್ಲಕ್ಷೃ ಮುಂದುವರೆದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.
    | ಡಾ.ಅಜಯಸಿಂಗ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts