More

    ಹಾಲುಮತ ಸಮಾಜದ ಸಮಾವೇಶ ಹಿನ್ನೆಲೆ – ದಾವಣಗೆರೆಯಲ್ಲಿಂದು ಪೂರ್ವಭಾವಿ ಸಭೆ

    ದಾವಣಗೆರೆ : ಹಾಲುಮತ ಸಮಾಜದ ಸಂಘಟನೆ ವೃದ್ಧಿ ಹಾಗೂ ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವ ಹಕ್ಕೊತ್ತಾಯದ ಭಾಗವಾಗಿ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯಿಂದ ಬೆಳಗಾವಿಯಲ್ಲಿ ಅ.3ರಂದು ರಾಷ್ಟ್ರೀಯ ಸಮಾವೇಶ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
    ಶೇ.18ರಷ್ಟಿರುವ ಸಮಾಜವನ್ನು ಒಗ್ಗೂಡಿಸಬೇಕಿದೆ. ಸಮಾವೇಶದಲ್ಲಿ ಸಮಾಜದ ಶಾಸಕರು, ಸಂಸದರು, ಎಂಎಲ್ಸಿ ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಸ್ಟಿ ಸೇರ್ಪಡೆ ಸಂಬಂಧ ದಾಖಲೆ ಕಲೆ ಹಾಕಿ ಸರ್ಕಾರದ ಮುಂದಿಡುವ ಪ್ರಯತ್ನ ನಡೆದಿದೆ ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಕುಮಾರ್ ಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಮಾವೇಶ ಪೂರ್ವಭಾವಿಯಾಗಿ ದಾವಣಗೆರೆಯ ಗುರುಭವನದಲ್ಲಿ ಸೆ.24ರಂದು ಮಧ್ಯಾಹ್ನ 3 ಗಂಟೆಗೆ ಮಾಜಿ ಸಚಿವರಾದ ಎಚ್.ವಿಶ್ವನಾಥ್ ಹಾಗೂ ಎಚ್.ಎಂ. ರೇವಣ್ಣ ನೇತೃತ್ವದಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಸಮಾಜದವರು, ಮುಖಂಡರು ಭಾಗವಹಿಸುವಂತೆ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಕುಮಾರ್ ಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಾಲುಮತ ಸಮಾಜವನ್ನು ಕುರುಬ, ಕುರುಗೊಂಡ, ರಾಜಗೊಂಡ, ಜೇನುಕುರುಬ, ಕಾಡುಕುರುಬ ಇತರೆ ಹೆಸರುಗಳಿಂದ ಬೇರೆ ರಾಜ್ಯಗಳಲ್ಲಿ ಕರೆಯಲಾಗುತ್ತಿದೆ. ದೇಶವಲ್ಲದೆ ಜಗತ್ತಿನಾದ್ಯಂತ ಇರುವ ಸಮಾಜದವರನ್ನು ಸಂಘಟನೆ ಮಾಡುವ ದೃಷ್ಟಿಯಿಂದ ಈ ಸಂಸ್ಥೆ 2009ರಿಂದ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷ 12 ರಾಷ್ಟ್ರಗಳಲ್ಲಿ ಸಮಾಜದವರನ್ನು ಸಂಪರ್ಕ ಮಾಡಲಾಗಿದೆ ಎಂದು ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಎಚ್.ಬಿ.ಗೋಣೆಪ್ಪ, ಎಸ್. ವೆಂಕಟೇಶ್, ಹದಡಿ ಜಿ.ಸಿ.ನಿಂಗಪ್ಪ, ಎಸ್.ಎಸ್. ಗಿರೀಶ್, ಜ್ಞಾನೇಶ್, ರಾಮು, ಎಲ್.ತಿಪ್ಪೇಸ್ವಾಮಿ, ಎಂ.ಮನು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts