More

    ಹಳಿಯಾಳ, ದಾಂಡೇಲಿ ಬಿಡದ ಕರೊನಾ

    ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ 92 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 83 ಜನ ಬಿಡುಗಡೆಯಾಗಿದ್ದಾರೆ.

    ಹಳಿಯಾಳ ಮತ್ತು ದಾಂಡೇಲಿಯಲ್ಲಿ 49, ಕಾರವಾರ- 4, ಅಂಕೋಲಾ-14, ಹೊನ್ನಾವರ- 6, ಮುಂಡಗೋಡ-8, ಶಿರಸಿ-5, ಭಟ್ಕಳ ಮತ್ತು ಜೊಯಿಡಾದಲ್ಲಿ ತಲಾ 2, ಕುಮಟಾ ಮತ್ತು ಯಲ್ಲಾಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.

    ಕಾರವಾರದಲ್ಲಿ 5, ಅಂಕೋಲಾ, ಕುಮಟಾದಲ್ಲಿ ತಲಾ 8, ಭಟ್ಕಳದಲ್ಲಿ 12, ಶಿರಸಿಯಲ್ಲಿ 14, ಹಳಿಯಾಳ ಮತ್ತು ದಾಂಡೇಲಿ ಸೇರಿ 33, ಹೊನ್ನಾವರದಲ್ಲಿ 1, ಮುಂಡಗೋಡಿನಲ್ಲಿ 2 ಜನ ಬಿಡುಗಡೆ ಹೊಂದಿದ್ದಾರೆ.

    ಸೋಂಕಿತರ ಸಂಪರ್ಕದಿಂದ 61 ಜನರಿಗೆ ಕರೊನಾ ಕಾಣಿಸಿಕೊಂಡಿದೆ. ಹೊರ ಊರಿನಿಂದ ಬಂದ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 13 ಜನರಿಗೆ ಜ್ವರದ ಲಕ್ಷಣ(ಐಎಲ್​ಐ)ಇದೆ. 11 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಒಟ್ಟಾರೆ ಸೋಂಕಿತರ ಪೈಕಿ 6 ಸಣ್ಣ ಮಕ್ಕಳು, 11 ಜನ ವೃದ್ಧರಿದ್ದಾರೆ.

    ಮೃತರಿಗಿತ್ತು ಅನ್ಯ ರೋಗ
    ಶುಕ್ರವಾರ ಕರೊನಾದಿಂದ ದಾಂಡೇಲಿಯ 80 ವರ್ಷದ ವೃದ್ಧೆ ಹಾಗೂ ಕಾರವಾರ 87 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರವಾರ ಶಿರವಾಡದ ವೃದ್ಧ ಜು.29 ರಂದು ಕ್ರಿಮ್್ಸ ಆಸ್ಪತ್ರೆ ಸೇರಿದ್ದರು. ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಾಂಡೇಲಿಯ ವೃದ್ಧೆಯನ್ನು ಕಾರವಾರಕ್ಕೆ ಕಳಿಸಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಇಲ್ಲಿಗೆ ಬಂದು ಪರಿಶೀಲಿಸಿದಾಗ ಆಕೆ ಮೃತಪಟ್ಟಿದ್ದರು. ಇಬ್ಬರ ಶವಗಳನ್ನು ಅಂತ್ಯಕ್ರಿಯೆಗಾಗಿ ಸ್ವಂತ ಊರುಗಳಿಗೆ ಕಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts