More

    ಹರಟೆ ಕೇಂದ್ರಗಳಾಗುತ್ತಿವೆ ಸಮುದಾಯ ಭವನ

    ಹುಕ್ಕೇರಿ: ಯುವಕರಲ್ಲಿ ಸಂಸ್ಕಾರ ಮತ್ತು ಸದ್ಗುಣಗಳನ್ನು ಬೆಳೆಸುವ ಕೇಂದ್ರಗಳಾಗಬೇಕಿದ್ದ ಸಮುದಾಯ ಭವನಗಳು ಹರಟೆ ಕೇಂದ್ರವಾಗುತ್ತಿರುವುದು ವಿಷಾದನೀಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ಯಾದಗೂಡ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಳಿಕಾದೇವಿ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಧಾರ್ಮಿಕ ಚಟುವಟಿಕೆಗಳ ಜತೆಗೆ ಸಮಾಜದ ಸಂಘಟನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನಗಳು ನೆರವಾಗುತ್ತವೆ ಎಂದರು. ಹುಕ್ಕೇರಿ ತಾಲೂಕಿನ 27 ಕೆರೆಗಳಿಗೆ ನೀರು
    ತುಂಬಿಸುವ ಕಾರ್ಯವನ್ನು ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಕೈಗೊಂಡಿದ್ದಾರೆ. ಎರಡು ವರ್ಷಗಳಿಂದ ಮಳೆಗಾಲದಲ್ಲಿ ಹಿರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವುದರ ಜತೆಗೆ ಪ್ರತಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

    ಉಮೇಶ ಕತ್ತಿ ಅವರಿಗೆ ರೈತರ ಕುರಿತು ಅಪಾರ ಕಾಳಜಿ ಎಂದು ಹೇಳಿದರು. ಗ್ರಾಮದ ಬಸವೇಶ್ವರ ವೃತ್ತದಲ್ಲಿ 3.5 ಲಕ್ಷ ರೂ. ವೆಚ್ಚದ ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟಿಸಿದರು. ದ್ಯಾಮವ್ವ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ 5 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.

    ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಗಿರೀಶ ದೇಸಾಯಿ, ತಾಪಂ ಇಒ ಉಮೇಶ ಸಿದ್ನಾಳ, ಬಿಇಒ ಮೋಹನ ದಂಡಿನ, ಸಿಪಿಐ ರಮೇಶ ಛಾಯಾಗೋಳ, ಬಿಸಿಯೂಟ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ, ಗ್ರಾಪಂ ಅಧ್ಯಕ್ಷ ಬಸವರಾಜ ಕಲ್ಲೊಳಿ, ಉಪಾಧ್ಯಕ್ಷೆ ಕವಿತಾ ಗಿಡ್ಡಾಳಿ, ಪರಗೌಡ ಪಾಟೀಲ, ಪ್ರಶಾಂತ ಪಾಟೀಲ, ಶಿವನಗೌಡ ಪಾಟೀಲ, ಕಲಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts