More

    ಹದಗೆಟ್ಟ ಹುಬ್ಬಳ್ಳಿ-ಶಿರಸಿ ರಸ್ತೆ ಸಂಚಾರ ದುಸ್ತರ

    ಮುಂಡಗೋಡ: ಪಟ್ಟಣದ ಹೊರವಲಯದ ಹುಬ್ಬಳ್ಳಿ-ಶಿರಸಿ ಮುಖ್ಯ ರಸ್ತೆಯ ಮಹಾಲೆ ಮಿಲ್​ನ ಹತ್ತಿರದ ರಸ್ತೆ ತೀರಾ ಹದಗೆಟ್ಟಿದ್ದು ಬೈಕ್ ಸವಾರರಿಗೆ ಮತ್ತು ವಾಹನ ಚಾಲಕರಿಗೆ ತುಂಬಾ ಕಿರಿಕಿರಿ ಉಂಟಾಗಿದೆ.

    ಈ ಹಿಂದೆ ಆದ ನೆರೆ ಹಾವಳಿಯಿಂದ ಈ ರಸ್ತೆಯು ಕೊಚ್ಚಿಕೊಂಡು ಹೋಗಿತ್ತು. ಲೋಕೋಪಯೋಗಿ ಇಲಾಖೆಯವರು ತಾತ್ಕಾಲಿಕವಾಗಿ ಈ ರಸ್ತೆಯನ್ನು ಅಗೆದು ಮಣ್ಣು ಹಾಕಿ ಸರಿಪಡಿಸಿದ್ದರು. ಆ ನಂತರ ಇತ್ತ ಗಮನ ಹರಿಸಲೇ ಇಲ್ಲ. ನೆರೆ ಹಾವಳಿಯಿಂದ ಹಾನಿಯಾದ ರಸ್ತೆ ಮತ್ತು ಮಿನಿ ಬ್ರಿಜ್ ದುರಸ್ತಿಗೆಂದು ರಾಜ್ಯ ಸರ್ಕಾರವು ಕೋಟಿಗಟ್ಟಲೆ ಅನುದಾನ ನೀಡಿದೆ. ಆದರೆ ಲೋಕೋಪಯೋಗಿ ಇಲಾಖೆ ಐದಾರು ತಿಂಗಳು ಕಳೆದರೂ ಕಣ್ಮುಚ್ಚಿ ಕುಳಿತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

    ನಿರಂತರ ವಾಹನ ಸಂಚಾರದಿಂದ ರಸ್ತೆಯ ಧೂಳಿನಿಂದ ಮನೆಯವರಿಗೆಲ್ಲಾ ಆರೋಗ್ಯ ಸಮಸ್ಯೆ ಬಂದೊದಗಿದೆ. ರಸ್ತೆಗೆ ಮಸಾರಿ ಮಣ್ಣು ಮತ್ತು ಗೊರ್ಚು ಹಾಕಿ ನಂತರ ನೀರು ಹಾಕಲಿಲ್ಲ. ಗುತ್ತಿಗೆದಾರ ನೀರು ಹಾಕಬೇಕಿತ್ತು ಆದರೆ ನಾವೇ ಉಚಿತವಾಗಿ 10 ಟ್ಯಾಂಕರ್ ನೀರು ನೀಡಿದ್ದೇವೆ. ಡಾಂಬರೀಕರಣದ ಬಗ್ಗೆ ಪಿಡಬ್ಲು್ಯಡಿ ಎಇಇಗೆ ಕೇಳಿದರೆ ದಿನಗಳನ್ನು ಮುಂದೂಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದಾರೆ. | ಕಿರಣ ಮಹಾಲೆ ಸ್ಥಳೀಯ ನಿವಾಸಿ

    ರಸ್ತೆ ಧೂಳು ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಡಬಲ್ ಕೋಟ್ ಡಾಂಬರೀಕರಣ ಮಾಡಲಾಗುವುದು. | ದಯಾನಂದ ಬಿ.ಆರ್. ಪಿಡಬ್ಲು್ಯಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts