More

    ಹಕ್ಕಿಪಿಕ್ಕಿ ಸಮುದಾಯದವರಿಗೆ ಆರೋಗ್ಯ ಭದ್ರತೆ

    ಶಿಡ್ಲಘಟ್ಟ: ತಾಲೂಕಿನ ವಿವಿಧೆಡೆಯಲ್ಲಿನ ಕೇರ್ ಸೆಂಟರ್, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂಟೇನ್ಮೆಂಟ್ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ ವ್ಯವಸ್ಥೆಗಳನ್ನು, ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

    ಕೊಂಡಪ್ಪಗಾರಹಳ್ಳಿ (ಪುರಭೈರನಹಳ್ಳಿ) ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆರಂಭಿಸಲಾದ ಕರೊನಾ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಔಷಧ, ಆಹಾರ, ನೀರು, ಶುಚಿತ್ವದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

    ಹಕ್ಕಿಪಿಕ್ಕಿ ಸಮುದಾಯದವರಿಗೆ ಸರ್ಕಾರದಿಂದ ದವಸಧಾನ್ಯ ನೀಡುವುದಲ್ಲದೆ ಆರೋಗ್ಯ ಭದ್ರತೆ ಸಹ ನೀಡಲಾಗುವುದು, ಗ್ರಾಮ ಪಂಚಾಯಿತಿಗಳ ಮೂಲಕ ಈಗಾಗಲೇ ದಿನಸಿ ಸಾಮಗ್ರಿಗಳ ನೆರವು ನೀಡಲಾಗಿದೆ. ಅತಂಕ ಪಡುವ ಅಗತ್ಯವಿಲ್ಲ, ಜಿಲ್ಲಾಡಳಿತ ಅಗತ್ಯ ನೆರವು ನೀಡಲಿದೆ ಎಂದು ಭರವಸೆಯಿತ್ತರು.

    ಈ.ತಿಮ್ಮಸಂದ್ರದ ಈಗ್ಲೆಟ್ ಗ್ರಾಮದಲ್ಲಿನ ಕಂಟೇನ್ಮೆಂಟ್ ಪ್ರದೇಶದಲ್ಲಿ 8 ಮಂದಿ ಕಾರ್ಯಪಡೆ ಸದಸ್ಯರು ಜನರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಈ ಪ್ರದೇಶದ ನಿವಾಸಿಗಳಿಗೆ ದಿನಸಿ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಪಿಡಿಒ ತನ್ವೀರ್ ಅಹಮದ್ ಮಾಹಿತಿ ನೀಡಿದರು.
    ಈ.ತಿಮ್ಮಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಟ್ಟ ಡಿಸಿ, ಕೇಂದ್ರದ ಉದ್ಯಾನವನ ಮತ್ತು ಔಷಧ ವನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಎಸ್‌ಪಿ ಮಿಥುನ್ ಕುಮಾರ್, ತಾಪಂ ಇಒ ಬಿ.ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts