More

    ಹಕ್ಕಿಪಕ್ಕಿ ಜನಾಂಗದವರಿಗೆ ನೆರವು

    ಗೋಕರ್ಣ: ಹೊರ ಜಿಲ್ಲೆಗಳಿಂದ ಗೋಕರ್ಣಕ್ಕೆ ಮರಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಇಲ್ಲಿರುವ ಬೇರೆ ಜಿಲ್ಲೆಯವರು ತವರಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ.

    500 ದಾಟಿದ ಸ್ಥಳೀಯರು: ಗೋಕರ್ಣದ ನಾಲ್ಕು ಗ್ರಾಪಂ ವ್ಯಾಪ್ತಿಯ ನಾಗರಿಕರು ಬೇರೆ ಬೇರೆ ಜಿಲ್ಲೆಗಳಿಂದ ಮರಳಿ ಊರು ಸೇರುುವ ಪ್ರಕ್ರಿಯೆ ನಡೆಯುತ್ತಿದೆ.

    ಬುಧವಾರ ಸಂಜೆ 100 ಜನ ಮತ್ತು ರಾತ್ರಿ 50ಕ್ಕೂ ಹೆಚ್ಚಿನ ಸ್ಥಳೀಯರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದಾರೆ. ಇವರೆಲ್ಲ ಗೋಕರ್ಣ, ಹನೇಹಳ್ಳಿ, ನಾಡುಮಾಸ್ಕೇರಿ ಮತ್ತು ತೊರ್ಕೆ ಗ್ರಾಪಂ ವ್ಯಾಪ್ತಿಯವರಾಗಿದ್ದಾರೆ.

    ಕಳೆದ ಒಂದು ವಾರದಲ್ಲಿ 500ಕ್ಕೂ ಅಧಿಕ ಸ್ಥಳೀಯರು ಅನ್ಯ ಜಿಲ್ಲೆಗಳಿಂದ ಬಂದಿದ್ದಾರೆ. ದಿನದ 24 ಗಂಟೆಯೂ ನಿರಂತರವಾಗಿ ಬೇರೆ ಜಿಲ್ಲೆಗಳಿಂದ ಬರುವವರ ತಪಾಸಣೆಯನ್ನು ಊರ ಪ್ರವೇಶ ದ್ವಾರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗುತ್ತಿದೆ. ಹೊರಗಿನಿಂದ ಬಂದವರಿಗೆಲ್ಲ ಸ್ಕ್ರೀನಿಂಗ್ ತರುವಾಯ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್​ನಲ್ಲಿರಿಸಿದೆ.

    ಹಕ್ಕಿಪಕ್ಕಿ ಜನಾಂಗದವರಿಗೆ ನೆರವು: ಇಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಬದುಕುತ್ತಿದ್ದ ಹಕ್ಕಿಪಕ್ಕಿ ಜನಾಂಗದ ಬಡವರು ಸ್ಥಳೀಯ ಶಾಸಕ ದಿನಕರ ಶೆಟ್ಟಿ ಅವರ ನೆರವಿನಿಂದ ಮರಳಿ ತಮ್ಮ ಊರು ಸೇರಿದ್ದಾರೆ. ಉದ್ಯೋಗ ಇಲ್ಲದೆ ತೀವ್ರ ಹೊಟ್ಟಪಾಡಿನ ತೊಂದರೆಯಲ್ಲಿದ್ದ ಇಂತಹ 80 ಜನ ಲಾಕ್​ಡೌನ್ ಆರಂಭವಾದಾಗಿನಿಂದ ತಮ್ಮ ಹುಟ್ಟು ಜಿಲ್ಲೆ ಶಿವಮೊಗ್ಗ ಮತ್ತು ದಾವಣಗೆರೆಗೆ ಹೋಗಲು ಅನುವು ಮಾಡಿಕೊಡಲು ವಿನಂತಿಸಿದ್ದರು. ಬುಧವಾರ ಇವರಿಗಾಗಿ ತಾಲೂಕಾಡಳಿತ ಎರಡು ವಿಶೇಷ ಸರ್ಕಾರಿ ಬಸ್ ವ್ಯವಸ್ಥೆ ಮಾಡಿ ಇದಕ್ಕಾಗಿ 20 ಸಾವಿರ ರೂ. ಸಂದಾಯಿಸಲು ತಿಳಿಸಿತ್ತು. ಆದರೆ ಹಣವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಇವರ ವಿಷಯ ತಿಳಿದ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸಂರ್ಪಸಿ ಸರ್ಕಾರದಿಂದ ಉಚಿತ ಬಸ್ ವ್ಯವಸ್ಥೆ ಮಾಡಿ ಕಡುಬಡವರಾದ ಹಕ್ಕಿಪಕ್ಕಿ ಜನಾಂಗದವರ ಅಭಿನಂದನೆಗೆ ಪಾತ್ರರಾದರು.

    ಈ ವೇಳೆ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ, ಪಂಚಾಯತಿ ಉಪಾಧ್ಯಕ್ಷ ಶೇಖರ ನಾಯ್ಕ, ತಾಪಂ ಸದಸ್ಯ ಮಹೇಶ ಶೆಟ್ಟಿ,ಪಿಎಸ್​ಐ ನವೀನ ನಾಯ್ಕ, ಪಿಡಿಒ ವಿನಯಕುಮಾರ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

    419 ಜನ ಹಳಿಯಾಳಕ್ಕೆ ಆಗಮನ: ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಈವರೆಗೆ ತಾಲೂಕಿಗೆ 419 ಜನರು ಆಗಮಿಸಿದ್ದು ಅವರ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ತಿಳಿಸಿದ್ದಾರೆ.

    ಮಿನಿ ವಿಧಾನ ಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾಲೂಕಿಗೆ ಆಗಮಿಸುವರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿಅವರನ್ನು ಕ್ವಾರಂಟೈನ್​ಗೆ ಒಳಪಡಿಸುವ ಕುರಿತು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ನೀಡಲಾಗಿದೆ. ಕ್ವಾರಂಟೈನ್​ನಲ್ಲಿರುವರ ಮೇಲೆ ನಿಗಾವಹಿಸುವುದು. ಕಾಲ ಕಾಲಕ್ಕೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಈಗಾಗಲೇ ತಾಲೂಕಿನಲ್ಲಿ ಕ್ವಾರಂಟೈನ್ ಆಪ್ ಆರಂಭಿಸಿ ಅದರಲ್ಲಿ 288 ಜನರನ್ನು ಸೇರಿಸಲಾಗಿದೆ. ಅದರಲ್ಲಿ ಪಟ್ಟಣ ಹಾಗೂ ಗಾಮೀಣ ಭಾಗವೆಂದು ವಿಂಗಡಿಸಿ ನಿಗಾ ಇಡುವ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಲಾಗಿದೆ. ತಾಲೂಕಿಗೆ ಹೊರಗಡೆಯಿಂದ ಆಗಮಿಸುವವರ ಕುರಿತು ಸಾರ್ವಜನಿಕರು ತಾಲೂಕಾಡಳಿತದ ಗಮನಕ್ಕೆ ತರಬೇಕು. ಸಹಾಯವಾಣಿ 08284-220134 ಕರೆ ಮಾಡಿ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.

    ಲಾಕ್ ಡೌನ್-3 ಆರಂಭಗೊಂಡ ನಂತರ ಈವರೆಗೆ ಮಾಸ್ಕ ಧರಿಸದವರು ಮತ್ತು ಪರಸ್ಪರ ಅಂತರ ಕಾಡಾಡದೇ ಇರುವವರಿಂದ 14,600 ರೂ. ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts