More

    ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿದ ‘ದಂಡಿ’

    ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಸಾರುವ ಡಾ. ರಾಜಶೇಖರ್ ಮಠಪತಿ ಅವರ ಕಾದಂಬರಿ ಆಧಾರಿತ ‘ದಂಡಿ’ ಚಲನಚಿತ್ರದ ಮುಹೂರ್ತ ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ದೇವಸ್ಥಾನದಲ್ಲಿ ಗುರುವಾರ ನಡೆಯಿತು.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಸುಕ್ರಿ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

    ಚಿತ್ರದ ನಿರ್ದೇಶಕ ವಿಶಾಲ್ ರಾಜ್ ಮಾತನಾಡಿ, ದಂಡಿ ಕಾದಂಬರಿ ಓದುವಾಗ ಪ್ರತಿಯೊಬ್ಬರಲ್ಲಿ ಸ್ವತಂತ್ರ ಹೋರಾಟದ ಕಿಚ್ಚು ಹಚ್ಚಿಸಿದ ಅನುಭವ ಬಂತು. ಅಹಿಂಸಾ ಮಾರ್ಗದ ಹೋರಾಟವನ್ನು ಪರದೆ ಮೇಲೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯ ಶೇ. 90ರಷ್ಟು ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಣ ಮುಗಿಸುವ ಯೋಜನೆಯಿದೆ ಎಂದರು.

    ‘ದಂಡಿ’ ಚಿತ್ರದ ನಿರ್ವಪಕಿ ಉಷಾರಾಣಿ, ನಟ ಯುವಾನ್ ದೇವ್, ನಟಿ ಶಾಲಿನಿ ಭಟ್, ಕಲಾವಿದರಾದ ತಾರಾ, ಸುಚೇಂದ್ರ ಪ್ರಸಾದ, ದಾಮೋದರ ನಾಯ್ಕ, ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ, ಡಾ. ಶ್ರೀಪಾದ ಶೆಟ್ಟಿ, ಡಾ. ಎಸ್.ಡಿ. ಹೆಗಡೆ, ಶಿವರಾಜ ಮೇಸ್ತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts