More

    ಸ್ವಾತಂತ್ರೃ ಹೋರಾಟದಲ್ಲಿ ಹುತಾತ್ಮ ದೇಶಭಕ್ತರನ್ನು ಸ್ಮರಿಸಿ

    ಬಸವಕಲ್ಯಾಣ: ಸ್ವಾತಂತ್ರೃ ಹೋರಾಟದಲ್ಲಿ ಹುತಾತ್ಮರಾದ ದೇಶಭಕ್ತರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ಇಲ್ಲಿಯ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃದ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳು ಶಿಕ್ಷಣದ ಜತೆಗೆ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಹುಲಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಪಾಟೀಲ್ ಮಾತನಾಡಿ, ವಿದ್ಯಾಥರ್ಿಗಳು ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಅಭ್ಯಾಸ ಮಾಡಬೇಕು. ಅಂದಾಗ ಮಾತ್ರ ಜೀವನಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

    ಪಿಯು ಕಾಲೇಜು ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಅಕ್ಕಣ್ಣಾ ಮಾತನಾಡಿ, ಸ್ವಾತಂತ್ರೃ ಸಂಗ್ರಾಮದಲ್ಲಿ ಹೋರಾಡಿದ ದೇಶ ಭಕ್ತರ ಜೀವನ ಚರಿತ್ರೆ ಮತ್ತು ಆತ್ಮಚರಿತ್ರೆಗಳನ್ನು ಓದುವುದರ ಮೂಲಕ ಜೀವನದಲ್ಲಿ ಪ್ರೇರಣೆ ಪಡೆಯಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣಾ ಮಾತನಾಡಿ, ವಿದ್ಯಾಥರ್ಿಗಳು ಜೀವನದಲ್ಲಿ ಜ್ಞಾನಾರ್ಜನೆಗೆ ಪ್ರಾಧಾನ್ಯತೆ ಕೊಡುವ ಜತೆಗೆ ದೇಶದ ಇತಿಹಾಸವನ್ನು, ಸಾಧಕರ ಬಗ್ಗೆ ತಿಳಿದುಕೊಂಡು ಗೌರವಿಸಬೇಕು ಎಂದರು.

    ನಿವೃತ್ತ ಉಪನ್ಯಾಸಕ ಎಸ್.ಜಿ. ಹುಡೇದ ಉಪನ್ಯಾಸ ನೀಡಿದರು. ಬೇಲೂರ ಸಕರ್ಾರಿ ಪ್ರೌಢ ಶಾಲೆ ಮುಖ್ಯಗುರು ಶರಣಬಸಪ್ಪ ಬಿರಾದಾರ, ಉಪನ್ಯಾಸಕರಾದ ಶ್ರೀನಿವಾಸ ಸಿಂಧೆ, ಬಲಭೀಮ ಪಾಟೀಲ್, ಇಫರ್ಾನ್ ಪಟೇಲ್, ವಿಶಾಲ ಗಾಯಕವಾಡ, ಪ್ರಭು, ತ್ರಿಲೋಚನ ಪಂಚಾಳ, ಸುಷ್ಮಾ ವಾತಡೆ, ಶಿಲ್ಪಾ, ಕಾವೇರಿ ಶೀಲವಂತ, ಸಂಗೀತಾ ಅಕ್ಕಣ್ಣಾ, ಗೀತಾ ಇದ್ದರು.

    ವೀರಭದ್ರ ಮತ್ತು ಭವಾನಿ ನಿರೂಪಣೆ ಮಾಡಿದರು. ಆನಂದ ಚಾಕೂರೆ ವಂದಿಸಿದರು. ಪಿಯುಸಿ ದ್ವಿತೀಯ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ದೇಶ ಭಕ್ತಿಗೀತೆ ಹಾಗೂ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts