More

    ಸ್ವಸಹಾಯ ಗುಂಪುಗಳಿಗೆ 500 ಕೋಟಿ ರೂ. ಸಾಲ

    ಬೀದರ್: ಸಾಮಾಜಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗೆ ಕಾರಣವಾಗಿರುವ ಸ್ವಸಹಾಯ ಗುಂಪು(ಎಸ್ಎಚ್ಜಿ)ಗಳಿಗೆ ಇನ್ನಷ್ಟು ಸಾಲ ಸೌಲಭ್ಯ ಕಲ್ಪಿಸುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

    ನಗರದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಶಾರದಾ ರೂಡಸೆಟ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಬುರಗಿಯ ಕನರ್ಾಟಕ ಇನ್ಸ್ಟಿಟ್ಯೂಟ್ ಆ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ನ ಅಂಕಪಟ್ಟಿ ಮತ್ತು ಪ್ರಶಸ್ತಿ ವಿತರಣೆ, ಸ್ವಸಹಾಯ ಗುಂಪುಗಳಿಗೆ ಜಮಖಾನೆ, ಪಿಕೆಪಿಎಸ್ಗಳಿಗೆ ಸೋಲಾರ್ ಸಿಸ್ಟಂ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷ ಎಸ್ಎಚ್ಜಿಗಳಿಗೆ 300 ಕೋಟಿ ರೂ. ಸಾಲ ನೀಡಲಾಗಿತ್ತು. ಈ ವರ್ಷ 500 ಕೋಟಿ ರೂ. ಸಾಲ ನೀಡಲಾಗುವುದು ಎಂದು ಘೋಷಿಸಿದರು.

    ಸ್ವಸಹಾಯ ಸಂಘಗಳ ಸದಸ್ಯರು ಬಸಣ್ಣನವರ ಕಾಯಕ ತತ್ವ ಪಾಲಿಸುತ್ತ, ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ದಿ.ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ಬ್ಯಾಂಕಿನಿಂದ ಸ್ವಸಹಾಯ ಸಂಘಗಳ ಚಳವಳಿ ಗಟ್ಟಿಗೊಳಿಸುವ ಕಾರ್ಯ ಮುಂದುವರಿಸಿದೆ. ಸ್ವಸಹಾಯ ಸಂಘಗಳ ಬೆಳವಣಿಗೆ ವೇಗ ಹೆಚ್ಚಿಸಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು, ಕಿರು ಹಣಕಾಸು ವಿಭಾಗದ ಅಧಿಕಾರಿಗಳು ಒಟ್ಟಾಗಿ ಶ್ರಮಿಸಬೇಕು. 500 ಕೋಟಿ ರೂ. ಸಾಲದ ಗುರಿ ಸಾಧಿಸಬೇಕು. ಸಾಲ ಸದ್ಬಳಕೆಯಾಗಿ, ಸದಸ್ಯರ ಬದುಕು ಬದಲಾಗುವುದರ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.

    ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪರಮೇಶ್ವರ ಮುಗಟೆ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಕೆಐಸಿಎಂ ಪ್ರಾಚಾರ್ಯ ರಾಜೇಶ ಯಾವಗಲ್, ಡಿಸಿಸಿ ಬ್ಯಾಂಕ್ ಸಿಇಒ ಮಲ್ಲಿಕಾಜರ್ುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠಲರಡ್ಡಿ ಯಡಮಲ್ಲೆ, ಚೆನ್ನಬಸಯ್ಯ ಸ್ವಾಮಿ ಇತರರಿದ್ದರು. ಉಮಾದೇವಿ ಚಿಲ್ಲಗರ್ಿ ನಿರೂಪಣೆ ಮಾಡಿದರು. ಅನೀಲಕುಮಾರ ಪಾಟೀಲ್ ವಂದಿಸಿದರು. ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಬ್ಯಾಂಕ್ ಉಳಿಯಲ್ಲ ಅಂದಿದ್ದರು…: ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು 1996ರಲ್ಲಿ ಮೊದಲ ಬಾರಿ ಮಹಿಳಾ ಸ್ವಸಹಾಯ ಸಂಘಕ್ಕೆ 75,000 ರೂ. ಸಾಲ ನೀಡಿದ್ದರು. ಯಾವುದೇ ಖಾತರಿ ಇಲ್ಲದೆ ಸಾಲ ನೀಡಿದ್ದಕ್ಕೆ ಕೆಲವರು ಟೀಕಿಸಿದ್ದರು. ಬ್ಯಾಂಕ್ ಉಳಿಯಲ್ಲ ಎಂದೂ ಹೇಳಿದ್ದರು. ಆದರೆ, ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವ ಛಲಗಾರರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿಯವರು ಹೊಸ ಇತಿಹಾಸಕ್ಕೆ ಕಾರಣರಾದರು ಎಂದು ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ಸ್ವಸಹಾಯ ಸಂಘಗಳ ರಚನೆ, ಬ್ಯಾಂಕ್ ಸಂಪರ್ಕ, ಸಾಲ ಸೌಲಭ್ಯ, ತರಬೇತಿ ಮುಂತಾದವುಗಳ ಮೂಲಕ ಬ್ಯಾಂಕ್ ರಾಷ್ಟ್ರದ ಗಮನ ಸೆಳೆದಿದೆೆ. ಇದರ ಹಿಂದಿರುವ ಪ್ರೇರಣಾ ಶಕ್ತಿಯೇ ಗುರುಪಾದಪ್ಪ ನಾಗಮಾರಪಳ್ಳಿ ಎಂದು ಸ್ಮರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts