More

    ಸ್ಯಾಟ್ಸ್​ನಲ್ಲಿ ದಾಖಲಾತಿ ಅಪ್​ಲೋಡ್

    ಶಿರಸಿ: ವಿದ್ಯಾರ್ಥಿಗಳ ದಾಖಲಾತಿ ಮತ್ತು ದಾಖಲಾತಿಯನ್ನು ಸ್ಯಾಟ್ಸ್​ನಲ್ಲಿ (ಸ್ಟುಡೆಂಟ್ಸ್ ಅಚೀವ್​ವೆುಂಟ್ ಟ್ರ್ಯಾಕಿಂಗ್ ಸಿಸ್ಟಂ) ಅಪ್​ಲೋಡ್ ಮಾಡುವಲ್ಲಿ ಶೇಕಡಾ ನೂರರ ಪ್ರಗತಿ ಸಾಧಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿ ಶಿರಸಿ ಶೈಕ್ಷಣಿಕ ಜಿಲ್ಲೆ ಹೊರಹೊಮ್ಮಿದೆ.

    ಕಳೆದ ವರ್ಷದ ದಾಖಲಾತಿ: 1,10,759 ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ವರ್ಷದ ಗುರಿಯಾಗಿ ನಿಗದಿಪಡಿಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಂಡವನ್ನು ಕಾರ್ಯಮಗ್ನಗೊಳಿಸಿದ್ದರು. ಒಟ್ಟು 1,10,828 ವಿದ್ಯಾರ್ಥಿಗಳನ್ನು ದಾಖಲಿಸುವ ಮೂಲಕ ಶೇ.100.06 ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತವರ ತಂಡ, ಎಲ್ಲ ಮುಖ್ಯ ಶಿಕ್ಷಕರು ಮತ್ತು ಜಿಲ್ಲಾ ಸಂಯೋಜಕರು ಶ್ರಮಿಸಿದ್ದರು.

    2019-20ರಲ್ಲಿ ಅಕ್ಷರ ದಾಸೋಹದ ಸ್ವಯಂಚಾಲಿತ ಅನುಸರಣಾ ಪದ್ದತಿಯಲ್ಲಿ (ಎಎಂಎಸ್) ಸಂದೇಶ ದಾಖಲಿಸುವಲ್ಲಿ ನೂರರ ಪ್ರಗತಿ ಸಾಧಿಸಿದ ಏಕಮಾತ್ರ ಜಿಲ್ಲೆ ಶಿರಸಿಯಾಗಿತ್ತು. 2021ರಲ್ಲಿ ಜವಾಹರ ನವೋದಯ ವಿದ್ಯಾಲಯ ಸಮಿತಿಯ ಆಯ್ಕೆ ಪರೀಕ್ಷೆಗಳಿಗೆ ಹೈದರಾಬಾದ್ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ದಾಖಲಿಸಿರುವುದು ಮತ್ತೊಂದು ಹೆಮ್ಮೆಯಾಗಿದೆ. ಅದೇ ರೀತಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ದಾಖಲಾತಿಯನ್ನು ಸ್ಯಾಟ್ಸ್​ನಲ್ಲಿ ಅಪ್​ಲೋಡ್ ಮಾಡುವಲ್ಲಿ ಕೂಡ ಗುರಿ ಪೂರ್ಣಗೊಳಿಸಲಾಗಿದೆ.

    | ದಿವಾಕರ ಶೆಟ್ಟಿ ಡಿಡಿಪಿಐ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts