More

    ಸೌಲಭ್ಯಕ್ಕಾಗಿ ಹೋರಾಟ ಅನಿವಾರ್ಯ

    ಕಬ್ಬೂರ, ಬೆಳಗಾವಿ: ಉಪ್ಪಾರ ಸಮಾಜಕ್ಕೆ ಮೀಸಲಾತಿ ಸೇರಿ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಲು ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಗಿರೀಶ ಉಪ್ಪಾರ ಹೇಳಿದರು.

    ಸಮೀಪದ ಜಾಗನೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಪ್ಪಾರ ಸಮಾಜ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಉಪ್ಪಾರ ಸಮಾಜ ಹಿಂದುಳಿದಿದೆ. ನಿಗಮದಿಂದ ದೊರೆಯುವ ಸಕಲ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
    ಮಹಿಳಾ ಉಪ್ಪಾರ ಸಂಘದ ಅಧ್ಯಕ್ಷ ಕಮಲಾ ಜೇಡರ ಮಾತನಾಡಿ, ಉಪ್ಪಾರ ಸಮಾಜದ ಹೆಣ್ಣು ಮಕ್ಕಳು ಜಾಗೃತರಾಗಬೇಕು. ಪ್ರತಿ ಕ್ಷೇತ್ರದಲ್ಲೂ ನಾವಿದ್ದೇವೆ. ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತಿಳಿದು ಮುನ್ನುಗ್ಗಬೇಕು ಎಂದರು.

    ಡಾ. ಪುರುಷೋತ್ತಮಾನಂದಪುರಿ ಶ್ರೀಗಳು ಸಮಾವೇಶಕ್ಕೆ ಚಾಲನೆ ನೀಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಈ ನಾಡಿನಲ್ಲಿ ಜನಜಾಗೃತಿ ಯಾತ್ರೆ ನಡೆಸಲಾಗುತ್ತಿದೆ. ಉಪ್ಪಾರ ಸಮಾಜ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕಾದರೆ ಮೊದಲು ಸಮಾಜದ ಇತಿಹಾಸವನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

    ಉಪಾಧ್ಯಕ್ಷ ಅರ್ಜುನ ನಾಯಿಕವಾಡಿ, ಭರಮಣ್ಣ ಉಪ್ಪಾರ ಮಾತನಾಡಿದರು. ಕಟಕಬಾವಿಯ ಅಭಿನವ ಧರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಶಿವರಾಯಿ ಸನದಿ, ಉಪಾಧ್ಯಕ್ಷ ಲಕ್ಷ್ಮಣ ಹಣಮನ್ನವರ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ರಬಕವಿ, ಉಪಾಧ್ಯಕ್ಷ ರಾಮಪ್ಪ ಪುಕಾಟೆ, ಮುತ್ತೆಪ್ಪ ಹಣಮನ್ನವರ, ಪಾಂಡುರಂಗ ಹಣಮನ್ನವರ, ಮಾರುತಿ ಹಮ್ಮಾರ, ಪರಸಪ್ಪ ಹಣಮನ್ನವರ, ಪರಸಪ್ಪ ಕರಿಕಟ್ಟಿ, ಭೀಮರಾವ ಪೆಡ್ಡಾರೆ, ಬಸವರಾಜ ಐಯಟ್ಟಿ, ರವಿ ಉಪ್ಪಾರ, ಲಕ್ಷ್ಮಣ ಹಣಮನ್ನವರ, ಸಿದ್ದು ಖಿಂಡಿ, ರವಿ ಅಲಗೂರೆ ಒದ್ದರು. ಲಕ್ಷ್ಮಣ ಮಂಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚಂದ್ರಿಕಾ ರಮೇಶ ಮಂಗಿ ಮತ್ತು ರಮೇಶ ಮಂಗಿ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಸಚಿವ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts