More

    ಸೋದೆ ಮಠಕ್ಕೆ ‘ಸೂರ್ಯ ಶಕ್ತಿ’

    ಶಿರಸಿ: ಗುರುಪೀಠದ ಮೂಲಕ ಭಕ್ತರಿಗೆ ಅಧ್ಯಾತ್ಮ ಶಿಕ್ಷಣ ನೀಡುತ್ತಿರುವ ಧಾರ್ವಿುಕ ಕೇಂದ್ರವೊಂದು ಇದೀಗ ಪರಿಸರ ಪೂರಕ ಸೌಲಭ್ಯ ಅಳವಡಿಸಿಕೊಂಡು ಮಾದರಿಯಾಗಿದೆ.

    ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ತಾಲೂಕಿನ ಸೋದೆ ವಾದಿರಾಜ ಮಠದಲ್ಲಿ ಸೌರ ವಿದ್ಯುತ್ ಅಳವಡಿಕೆ ಮಾಡುವ ಮೂಲಕ ವಿದ್ಯುತ್ ಸ್ವಾವಲಂಬನೆ ಸಾಧಿಸಲಾಗಿದೆ.

    ಮಠಕ್ಕೆ ಸೂರ್ಯ ಶಕ್ತಿ: ಮಠಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸಿ ವಾಸ್ತವ್ಯ ಹೂಡಿ ದೇವರ ಹಾಗೂ ಶ್ರೀಗಳ ದರ್ಶನ ಮಾಡುತ್ತಾರೆ. ಭಕ್ತರಿಗಾಗಿ ಇರುವ ಯಾತ್ರಿ ನಿವಾಸ, ಹಾಗೂ ಮಠದ ಇತರ ಕಡೆ ವಿದ್ಯುತ್ ಅವಲಂಬನೆ ಅಗತ್ಯವಾಗಿತ್ತು. ಗ್ರಾಮೀಣ ಭಾಗದಲ್ಲಿ ಮಠ ಇರುವ ಕಾರಣ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿತ್ತು. ವಿದ್ಯುತ್ ಕೈ ಕೊಟ್ಟಾಗ ಜನರೇಟರ್ ಬಳಸಲಾಗುತ್ತಿತ್ತು. ಹೀಗಾಗಿ ಭಕ್ತಸ್ನೇಹಿ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಹಣವೂ ವೆಚ್ಚವಾಗುತ್ತಿತ್ತು. ಇದನ್ನು ತಡೆಯುವ ಉದ್ದೇಶದಿಂದ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರು ನವೀಕರಿಸಬಲ್ಲ ಇಂಧನ ಬಳಕೆಗೆ ಒಲವು ತೋರಿದ ಪರಿಣಾಮ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಯಾಗಿದೆ.

    30 ಕಿ.ವ್ಯಾಟ್ ಸಾಮರ್ಥ್ಯ: ನಾಡಿನ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಅಂಗ ಸಂಸ್ಥೆ ಆಂಟ್ರಿಕ್ಸ್ ಕಾಪೋರೇಶನ್ ಲಿಮಿಟೆಡ್​ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ 30 ಕಿಲೋ ವ್ಯಾಟ್ ಸಾಮರ್ಥ್ಯದ ಈ ಘಟಕ ನಿರ್ವಣವಾಗಿದೆ. ಉತ್ಕೃಷ್ಟ ಗುಣಮಟ್ಟದ ಸೌರ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇರ್ನÌರ್ ಉಪಯೋಗಿಸಿ, ವೈಜ್ಞಾನಿಕವಾಗಿ ಮಠದ ವಿದ್ಯುತ್ ಬಳಕೆಯನ್ನು ಅಧ್ಯಯನ ಮಾಡಿ ಘಟಕ ಸ್ಥಾಪಿಸಲಾಗಿದೆ.

    ಪ್ರಸ್ತುತ ಮಠದ ಎಲ್ಲ ರೀತಿಯ ವಿದ್ಯುತ್ ಬಳಕೆಯನ್ನು ಈ ಸೌರ ಘಟಕವೇ ಪೂರೈಸುತ್ತಿದೆ. ಇದರೊಂದಿಗೆ ಮಠದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಅಡುಗೆಯಲ್ಲಿ ಸೌದೆಯ ಉಪಯೋಗ ತಗ್ಗಿಸುವ ಉದ್ದೇಶದಿಂದ ಅಳವಡಿಸಿರುವ 600 ಲೀ. ಸಾಮರ್ಥ್ಯದ ಸೋಲಾರ್ ತಂತ್ರಜ್ಞಾನಾಧಾರಿತ ಬಿಸಿನೀರಿನ ಘಟಕ ಸ್ಥಾಪಿಸಲಾಗಿದೆ. ಆ ಮೂಲಕ ಮಠದ ಪರಿಸರ ಪೂರಕ ನಡೆ ಸಮಾಜಕ್ಕೆ ಮಾದರಿಯಾಗಿದೆ.

    ಕೇಂದ್ರ ಸರ್ಕಾರವು ಪರಿಸರ ನವೀಕರಿಸಬಲ್ಲ ಇಂಧನ ಮೂಲಗಳಾದ ಸೌರ ಶಕ್ತಿಯ ಬಳಕೆಗೆ ಉತ್ತೇಜನ ನೀಡುತ್ತಿದೆ. ಅದನ್ನು ಮಠದಲ್ಲಿ ಅಳವಡಿಸಿರುವುದು ಉತ್ತಮ ನಡೆಯಾಗಿದೆ.

    – ವಿದ್ಯಾಧರ ಉಪಾಧ್ಯಾಯ ಉಡುಪಿ- ಮಠದ ಭಕ್ತ

    ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಇಂಧನ ಮೂಲಗಳನ್ನು ತ್ಯಜಿಸುವ ಜತೆಗೆ ಪರಿಸರ ಸಹ್ಯ ಮರು ನವೀಕರಿಸಬಲ್ಲ ಇಂಧನವಾದ ಸೌರ ಶಕ್ತಿಯ ಬಳಕೆಗೆ ಉತ್ತೇಜನ ನೀಡಿದರೆ ಪರಿಸರ ಸಂರಕ್ಷಣೆಯೂ ಆಗುತ್ತದೆ. ಜತೆಗೆ ಆರ್ಥಿಕ ಹೊರೆ ಇಳಿಯುತ್ತದೆ.

    – ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ- ವಾದಿರಾಜ ಮಠ

    ಶ್ರೀಗಳಿಂದ ಚಾಲನೆ: ಮಠದಲ್ಲಿ ಅಳವಡಿಸಿರುವ ಸೋಲಾರ್ ಘಟಕಕ್ಕೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು. ಈ ವೇಳೆ ಇಸ್ರೋದ ಪ್ರಾಧ್ಯಾಪಕ ಡಾ. ಪಿ.ಜಿ.ದಿವಾಕರ, ಇಸ್ರೋದ ಸಿಇಪಿಒ ನಿರ್ದೇಶಕ ಭೀಮರಾಜಪ್ಪ, ಆಂಟ್ರಿಕ್ಸ್ ಕಾಪೋರೇಷನ್ ಲಿಮಿಟೆಡ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts