More

    ಸೈಕಲ್ ಬಳಸಿ, ಪರಿಸರ ಮಾಲಿನ್ಯ ನಿಯಂತ್ರಿಸಿ – ಶಿವನಕೆರೆ ಬಸವಲಿಂಗಪ್ಪ ಹೇಳಿಕೆ

    ದಾವಣಗೆರೆ: ಸೈಕಲ್ ಬಳಕೆಯಿಂದ ಪರಿಸರ ಮಾಲಿನ್ಯ ನಿಯಂತ್ರಿಸಬಹುದು. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.
    ಕರುಣಾ ಜೀವ ಕಲ್ಯಾಣ ಟ್ರಸ್ಟಿನಿಂದ ಹಮ್ಮಿಕೊಂಡಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ
    ಮಾತನಾಡಿದರು.
    ಕೆಲವು ದಶಕಗಳ ಹಿಂದೆ ಸೈಕಲ್ ಹಲವು ವಿಧಗಳಲ್ಲಿ ಜೀವನದ ಅವಿಭಾಜ್ಯ ಅಂಗವಾಗಿತ್ತು. ಈಗದು ಅಳಿವಿನಂಚಿಗೆ ಬಂದಿದೆ.
    ಬಡವರಿಗೆ ಈಗಾಗಲೇ 32 ಸೈಕಲ್ ಗಳನ್ನು ಟ್ರಸ್ಟಿನ ವತಿಯಿಂದ ನೀಡಲಾಗಿದೆ. ಇನ್ನೂ 200 ಸೈಕಲ್ ಗಳನ್ನು ಕೊಡುವ ಗುರಿಯಿದೆ. ಇದು ಸದುಪಯೋಗ ಆಗಬೇಕು ಎಂದರು.
    ಶ್ರೀಮಂತರ ಕಾಯಿಲೆಗಳಾಗಿದ್ದ ಬಿ.ಪಿ., ಶುಗರ್ ಇತ್ತಿಒಚೆಗೆ ಬಡವರಲ್ಲೂ ಹೆಚ್ಚಾಗುತ್ತಿವೆ. ದೈಹಿಕ ಶ್ರಮವಿಲ್ಲದ ಜೀವನ ಶೈಲಿ, ಅನಾರೋಗ್ಯಕರ ಆಹಾರ ಸೇವನೆ, ಬಡವರಾದರೂ ಪೆಟ್ರೋಲ್ ವಾಹನಗಳನ್ನು ಬಳಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು.
    ಬೈಕ್ ಇತರೆ ದ್ವಿಚಕ್ರವಾಹನ ಬಳಕೆಯಿಂದ ಹಣ ವ್ಯಯವಾಗಲಿದೆ. ಜತೆಗೆ ಜನರು ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಸೈಕಲ್ ಬಳಸಿದಲ್ಲಿ ಬಡವರು ಆರ್ಥಿಕ ಸಬಲರಾಗುವುದರ ಜತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಎನ್.ಮಲ್ಲಿಕಾರ್ಜುನ್ ಮಾತನಾಡಿ ಬಡವರ ಜತೆಗೆ ಶ್ರೀಮಂತರು ಹೆಚ್ಚಾಗಿ ಸೈಕಲ್ ಗಳನ್ನು ಬಳಸಬೇಕಾಗಿದೆ. ದಿನಕ್ಕೆ 30 ನಿಮಿಷ ವೇಗವಾಗಿ ಸೈಕಲ್
    ಓಡಿಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
    ಎ.ಎಂ. ಕೊಟ್ರೇಶ್ವರ್ ಮಾತನಾಡಿ ಸೈಕಲ್ ಸವಾರಿ ಉತ್ತಮ ಆರೋಗ್ಯಕ್ಕೆ ರಹದಾರಿಯಾಗಿದೆ. ಮನುಷ್ಯನ ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಎಂದರು.
    ನಿರ್ದೇಶಕ ಬಸವರಾಜ್ ಒಡೆಯರ್ ಮಾತನಾಡಿದರು.
    ಮಂಜುಳಾ ಬಸವಲಿಂಗಪ್ಪ ಸ್ವಾಗತಿಸಿದರು. ಎನ್.ಪಿ.ಜಯಣ್ಣ ವಂದಿಸಿದರು. ಪ್ರೊ. ಎಂ. ಬಸವರಾಜ್, ಮಲ್ಲಾಬಾದಿ ಬಸವರಾಜ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts