More

    ಸೇವಾಲಾಲ್ ಮಹಾರಾಜ ಪವಾಡ ಪುರುಷ

    ಕಲಬುರಗಿ: ಬಂಜಾರ ಸಮುದಾಯದ ಶಕ್ತಿ ದೇವರಾದ ಸಂತ ಸೇವಾಲಾಲ್ ಮಹಾರಾಜ ಪವಾಡ ಪುರುಷರಾಗಿದ್ದರು ಎಂದು ಮಾಜಿ ಸಚಿವ, ಸಂತ ಶ್ರೀ ಸೇವಾಲಾಲ್ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ರೇವುನಾಯಕ ಬೆಳಮಗಿ ಹೇಳಿದರು.
    ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸಂತಶ್ರೀ ಸೇವಾಲಾಲ್ ಮಹಾರಾಜ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸರ್ಕಾರದಿಂದ ಸೇವಾಲಾಲ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ. ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಗೊಬ್ಬೂರು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಡಾ.ಎನ್.ಎಸ್. ಜಾಧವ್ ವಿಶೇಷ ಉಪನ್ಯಾಸ ನೀಡಿದರು. ಮುಗುಳನಾಗಾಂವ ಶ್ರೀ ಜೇಮಸಿಂಗ್ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಸುಭಾಷ ರಾಠೋಡ್, ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ ಆನಂದ ಚವ್ಹಾಣ್, ಪಾಣೆಗಾಂವ್ ಶ್ರೀ ಶಂಕರ ಮಹಾರಾಜ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ್ ಉಪಸ್ಥಿತರಿದ್ದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ನೆಹರು ಗಂಜ್ನ ನಗರೇಶ್ವರ ಬಾಲವಿಕಾಸ ಮಂದಿರದಿಂದ ಆರಂಭಗೊಂಡ ವಿವಿಧ ಜಾನಪದ ಕಲಾ ತಂಡಗಳನ್ನು ಒಳಗೊಂಡ ಸಂತ ಸೇವಾಲಾಲ್ ಮಹಾರಾಜ ಭಾವಚಿತ್ರದ ಭವ್ಯ ಮೆರವಣಿಗೆ ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದ ಮೂಲಕ ಪಂಡಿತ ರಂಗಮಂದಿರಕ್ಕೆ ಆಗಮಿಸಿ ಕೊನೆಗೊಂಡಿತು.

    ಭೂಮಿ ಮೇಲಿರುವ ಪ್ರತಿಯೊಂದು ವಸ್ತುವಿಗೂ ಜೀವ ಇದೆ ಎಂಬುದು ಸಂತ ಸೇವಾಲಾಲ್ ಮಹಾರಾಜ ಸಿದ್ಧಾಂತ. ಶಿವಾರಾಧನೆ ಕೈಗೊಳ್ಳುವ ಮೂಲಕ ಸೇವಾಲಾಲ್ ಮಹಾರಾಜ ಪವಾಡ ಪುರುಷರಾಗಿ ಹೊರಹೊಮ್ಮಿದರು.
    | ರಾಮಚಂದ್ರ ಗಡಾದೆ
    ಸಹಾಯಕ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts