More

    ಸೆಸ್ಕ್ ಕಚೇರಿಗೆ ರೈತರ ಮುತ್ತಿಗೆ

    ಆಲೂರು: ತಾಲೂಕಿನ ಗ್ರಾಮೀಣ ಪ್ರದೇಶಗಳಾದ ದಡದಳ್ಳಿ, ಚೌಲ್ಗೆರೆ ಹಾಗೂ ಬ್ಯಾಡರಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ಬೇಸತ್ತು ರೈತರು ಸೆಸ್ಕ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ದಿನಕ್ಕೆ ಎರಡು ಗಂಟೆ ವಿದ್ಯುತ್ ಕೊಟ್ಟರೆ ಅದರಲ್ಲಿ ಐದಾರು ಬಾರಿ ತೆಗೆಯುತ್ತಾರೆ. ದಿನಕ್ಕೆ ಒಂದು ಗಂಟೆಯೂ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮದ ಹಿರಿಯ ಮುಖಂಡ ಡಿ.ಎಸ್.ಜಯಣ್ಣ ಮಾತನಾಡಿ, ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಬೆಳೆಗಳಿಗೆ ನೀರುಣಿಸಲು ತೊಂದರೆ ಅನುಭವಿಸವಂತಾಗಿದೆ. ಓವರ್ ಲೋಡ್‌ನಿಂದ ಟ್ರಾನ್ಸ್‌ಫಾರ್ಮ್ ಸುಟ್ಟು ಹೋಗುತ್ತಿದೆ. ನಿತ್ಯ ಎರಡರಿಂದ ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ತಾಲೂಕಿಗೆ ಹೆಚ್ಚುವರಿ ವಿದ್ಯುತ್ ವಿತರಣಾ ಕೇಂದ್ರದ ಅವಶ್ಯಕತೆ ಇದ್ದು, ಕ್ಷೇತ್ರದ ಶಾಸಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಪಾಳ್ಯ ಶಾಖೆಯ ಕಿರಿಯ ಇಂಜಿನಿಯರ್ ಆಗಮಿಸಿ, ವಿದ್ಯುತ್ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಕೊಡಲೇ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಬಗೆಹರಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಭೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ, ರೈತರಾದ ದಡದಹಳ್ಳಿ ಗ್ರಾಮದ ಮಧು, ಮಧುಚಂದ್ರ, ಮಹೇಶ್, ನವೀನ್, ಮಂಜುನಾಥ್, ದೊರೆಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts