More

    ಸುಳ್ಳು ಹೇಳಿದವನ ಮೇಲೆ ದೂರು

    ಮುಳಗುಂದ: ಸ್ವಂತ ಮನೆಯಿದ್ದರೂ ಸುಳ್ಳು ಹೇಳಿ ಸರ್ಕಾರಿ ಗಾಂವಠಾಣಾ ಜಾಗ ಪಡೆಯಲು ಯತ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಪ.ಪಂ. ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

    ಗ್ರಾಮದ ಸುರೇಶ ಆದರಹಳ್ಳಿ ಅವರಿಗೆ ಸ್ವಂತ ಮನೆಯಿದ್ದರೂ ಗಾಂವಠಾಣಾ ಜಾಗ ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ‘ಪ.ಪಂ.ನವರು ನಿವೇಶನ ನೀಡುತ್ತಿಲ್ಲ, ಹೀಗಾಗಿ ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ದಯಾಮರಣ ನೀಡಿ’ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

    ಈ ಹಿನ್ನೆಲೆಯಲ್ಲಿ ಸಿಪಿಐ ರವಿ ಕಪ್ಪತ್ತನವರ ಹಾಗೂ ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಬರುವ ವಿಷಯ ತಿಳಿದು ಸುರೇಶ ಆದರಹಳ್ಳಿ ಕುಟುಂಬದವರು ಗ್ರಾಮದಿಂದ ಪರಾರಿಯಾದರು ಎಂದು ತಿಳಿದುಬಂದಿದೆ.

    ಸುರೇಶ ಆದರಹಳ್ಳಿ ಅವರಿಗೆ ಸ್ವಂತ ಮನೆಯಿದ್ದು, ಶಿಥಿಲಾವಸ್ಥೆಯಲ್ಲಿದೆ. ಅದನ್ನು ಬಿಟ್ಟು ಬೇರೆ ಗಾಂವಠಾಣಾ ಜಾಗವನ್ನು ನೀಡುವಂತೆ ಪ.ಪಂ. ಮುಖ್ಯಾಧಿಕಾರಿಗೆ ಈ ಹಿಂದೆಯೇ ಮನವಿ ನೀಡಿದ್ದರು. ಆದರೆ, ಸ್ವಂತ ಮನೆಯಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಈ ಅರ್ಜಿಯನ್ನು ತಳ್ಳಿ ಹಾಕಿದ್ದರು. ಕೊಳಚೆ ಪ್ರದೇಶ ಅಭಿವೃದ್ಧಿ ನಿಗಮದಿಂದ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿದ್ದರು. ಆದರೆ, ಪ.ಪಂ.ನವರು ತನಗೆ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿ ಸುರೇಶ ಆದರಹಳ್ಳಿ ರಾಜ್ಯಪಾಲರಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರು.

    ಸುರೇಶ ಆದರಹಳ್ಳಿ ದಯಾಮರಣ ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಗ್ರಾಮದಲ್ಲಿ ಇವರಿಗೆ ಸ್ವಂತ ಮನೆಯಿದೆ. ಆದರೂ ಸರ್ಕಾರಿ ಗಾಂವಠಾಣಾ ಜಾಗಕ್ಕಾಗಿ ಸುಳ್ಳು ಚೆಕಬಂದಿ ಹಾಕಿ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ವಂಚನೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.
    | ಎಂ.ಎಸ್. ಬೆಂತೂರ, ಮುಖ್ಯಾಧಿಕಾರಿ, ಪಪಂ, ಮುಳಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts