More

    ಸುಳ್ಳು ದಾಖಲೆ ತೋರಿಸಿ ಮನೆ ನಿರ್ಮಿಸಿಕೊಳ್ಳಲು ಕಿರಿಕ್

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೀಡಿದ್ದ ಭೂಮಿಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಬಡ ಜನತೆ ಮನೆ ಕಟ್ಟಿಕೊಳ್ಳಲಾಗದೆ ಗೋಳಾಡುವಂಥ ಸ್ಥಿತಿ ನಿರ್ಮಾಣವಾಗಿದೆ.


    ಗುರುಮಠಕಲ್ ತಾಲೂಕಿನ ತೆಲಂಗಾಣ ಗಡಿಗೆ ಅಂಟಿಕೊಂಡಿರುವ ಜೈಗ್ರಾಮ ಗ್ರಾಮದಲ್ಲಿ ಅರ್ಹ ಬಡ ಫಲಾನುಭವಿಗಳನ್ನು ಗುರುತಿಸಿ ಜನತಾ ಮನೆ ಯೋಜನೆಯಡಿ 1975-76ರಲ್ಲಿ ಸಕರ್ಾರ 6.38 ಎಕರೆ ಖಾಸಗಿ ಜಮೀನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿತ್ತು. ಅಲ್ಲಿಂದ ಫಲಾನುಭವಿಗಳು ತಮ್ಮ ಆಸ್ತಿ ತೆರಿಗೆಯನ್ನು ಗ್ರಾಮ ಪಂಚಾಯಿತಿಯಲ್ಲಿ ಪಾವತಿಸುತ್ತ ಬಂದಿದ್ದಾರೆ. ಆದರೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿವೇಶನಗಳ ಮೂಲ ದಾಖಲೆಗಳು ಸಿಗದಿರುವುದು ಕೆಲವರಿಗೆ ವರವಾಗಿ ಪರಿಣಮಿಸಿದೆ.

    ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಜಮೀನು ತಮ್ಮ ಹೆಸರಿಗಿದ್ದು, ಯಾವ ಕಾರಣಕ್ಕೂ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಫಲಾನುಭವಿಗಳು ಅಳಲು ತೋಡಿಕೊಂಡಿದ್ದಾರೆ. ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆ 2016ರಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಗಡಿ ವಿಸ್ತರಣೆಯಾದ ಪ್ರದೇಶ ಒಳಗೊಂಡಂತೆ ಹೊಸದಾಗಿ ಗ್ರಾಮಠಾಣಾ ಮರು ನಿಗದಿಪಡಿಸಲು ಜಂಟಿ ಸುತ್ತೋಲೆ ಹೊರಡಿಸಿತ್ತು.

    ಆದರೆ ಜೈಗ್ರಾಮ ಗ್ರಾಪಂನಲ್ಲಿ ವಾರ್ಡ್​ ಮತ್ತು ಗ್ರಾಮ ಸಭೆಗಳಲ್ಲಿ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಪಿಡಿಒ ಚಚರ್ಿಸಿ ತಾಲೂಕು ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ ಈ ಯಾವ ಕ್ರಮಗಳನ್ನು ಅನುಸರಿಸದ ಕಾರಣ ಸದ್ಯ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ.

    ಬಹುತೇಕ ಮುಗ್ಧರು ಹಾಗೂ ಅನಕ್ಷರಸ್ಥರೇ ವಾಸಿಸುತ್ತಿರುವ ಜೈಗ್ರಾಮದಲ್ಲಿ ಅಧಿಕಾರಿಗಳು ಮತ್ತು ಕೆಲ ಪಟ್ಟಭದ್ರರು ಜನರನ್ನು ವಂಚಿಸುತ್ತಿರುವುದು ಕಂಡು ಬಂದಿದೆ. ಸಕರ್ಾರ ಹಂಚಿಕೆ ಮಾಡಿದ ನಿವೇಶನದಲ್ಲಿ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳುವುದನ್ನೇ ಹೊಂಚು ಹಾಕುವ ಕೆಲವರು, ಕಾಮಗಾರಿ ಅರ್ಧಕ್ಕೆ ಬಂದ ತಕ್ಷಣ ಮಾಲೀಕರಿಗೆ ಬೆದರಿಕೆ ಒಡ್ಡುವುದು, ಸುಳ್ಳು ದಾಖಲೆ ತೋರಿಸಿ ಕಾಮಗಾರಿ ನಿಲ್ಲಿಸುತ್ತಿದ್ದು, ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.

    ಇದು ಕೇವಲ ಜೈಗ್ರಾಮವೊಂದರ ಕಥೆಯಲ್ಲ, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಸಕರ್ಾರದ ಸುತ್ತೋಲೆಯಂತೆ ಸಮರ್ಪಕ ಅನುಷ್ಠಾನಗೊಳಿಸಿ ಕ್ರಮ ಕೈಗೊಳ್ಳುವುದು ಜರೂರಿ ಎನಿಸಿದೆ.

    ಗುರುಮಠಕಲ್ ತಹಸಿಲ್ನಲ್ಲಿ ಗೋಲ್ಮಾಲ್
    ಶೇ.90 ತೆಲುಗು ಭಾಷೆ ಪ್ರಭಾವಕ್ಕೆ ಒಳಗಾಗುತ್ತಿರುವ ಗುರುಮಠಕಲ್ ತಹಸಿಲ್ ಕಚೇರಿಯಲ್ಲಿ ದಲ್ಲಾಳಿಗಳ ದಬರ್ಾರ್ ಹೆಚ್ಚಾಗುತ್ತಿದೆ. ಜೈಗ್ರಾಮನ ಈ ಸಮಸ್ಯೆ ಹಿಡಿದು ನೊಂದವರು ತಹಸಿಲ್ ಕಚೇರಿ ಬಾಗಿಲು ತಟ್ಟಿದರೆ, ಕೆಲ ಕೆಳಹಂತದ ಅಧಿಕಾರಿಗಳು ಬೆದರಿಕೆ ಹಾಕಿ ಕಳಿಸಿದ್ದಾರೆ. ಸರ್ವೇ ನಂ.270 ಸಮಸ್ಯೆ ಅಜರ್ಿ ನೀಡಿದರೆ ಸ್ವೀಕೃತಿ ನೀಡದೆ ವಾಪಸ್ ಕಳಿಸಿದ್ದಾರೆ (ಇದಕ್ಕೆ ಸಂಬಂಧಿಸಿದ ದಾಖಲೆಗಳು ವಿಜಯವಾಣಿಗೆ ಲಭ್ಯ).

    ಗ್ರಾಪಂನಲ್ಲಿ ದಾಖಲೆಗಳು ಅಲಭ್ಯ
    ಜೈಗ್ರಾಮ ಗ್ರಾಮದಲ್ಲಿ 1975-76ರಲ್ಲಿ ಸರ್ಕಾರ 6.38 ಎಕರೆ ಖಾಸಗಿ ಜಮೀನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದ ಜನತಾ ಮನೆಗಳ ದಾಖಲೆಗಳು ಗ್ರಾಪಂನಲ್ಲಿ ಲಭ್ಯವಿಲ್ಲ ಎಂದು ಸ್ವತಃ ಪಿಡಿಒ ಸೈಯದ್ ಅಲಿ ನೀಡಿದ ಹೇಳಿಕೆ ಅಚ್ಚರಿ ಜತೆಗೆ ಅನುಮಾನ ಮೂಡಿಸಿದೆ. ನಿವೇಶನದ ತೆರಿಗೆಯನ್ನು ಫಲಾನುಭವಿಗಳು ಪಾವತಿಸುತ್ತಲೇ ಬಂದಿದ್ದಾರೆ. ಆದರೆ ದಾಖಲೆಗಳು ಇಲ್ಲದ ಕಾರಣ ಜನ ಪರೇಶಾನ್ ಆಗುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts