More

    ಸುರಕ್ಷಿತವಾಗಿ ಬರಲಿದ್ದಾಳೆ ನಾರಾಯಣಪುರ ಗ್ರಾಮದ ವೈಷ್ಣವಿ ರೆಡ್ಡಿ

    ಬಸವಕಲ್ಯಾಣ: ಯೂಕ್ರೇನ್ ಯುದ್ಧಗ್ರಸ್ತ ಭೂಮಿಯಲ್ಲಿ ಸಿಲುಕಿರುವ ನಾರಾಯಣಪುರ ಗ್ರಾಮದ ವೈದ್ಯ ವಿದ್ಯಾರ್ಥಿನಿ ವೈಷ್ಣವಿ ರೆಡ್ಡಿ ನಿವಾಸಕ್ಕೆ ಗುರುವಾರ ಶಾಸಕ ಶರಣು ಸಲಗರ ಭೇಟಿ ನೀಡಿ ಪಾಲಕರಲ್ಲಿ ಧೈರ್ಯ ತುಂಬಿದರು.

    ಬುಧವಾರ ಬೆಳಗ್ಗೆ 11ಕ್ಕೆ ಮಾತನಾಡಿದ ವೈಷ್ಣವಿ, ಸುರಕ್ಷಿತವಾಗಿ ಬರುವುದಾಗಿ ಹೇಳಿದ್ದಾಳೆ. ಆದರೆ ನಂತರ ಅವಳ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಗಳ ಸುರಕ್ಷತೆ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಚಿಂತೆಯಾಗಿದೆ ಎಂದು ಪಾಲಕರು ಶಾಸಕರ ಮುಂದೆ ಅಳಲು ತೋಡಿಕೊಂಡರು.

    ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಲಗರ, ವೈಷ್ಣವಿರೆಡ್ಡಿ ಸುರಕ್ಷಿತವಾಗಿ ಮನೆಗೆ ಬರಲಿದ್ದಾಳೆ. ಆಕೆ ಬರುವಿಕೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ಆ ಆನಂದದ ಕ್ಷಣ ಹಂಚಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ ಎಂದರು.

    ಯೂಕ್ರೇನ್​ನಲ್ಲಿ ಸಿಲುಕಿರುವ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ವೈಷ್ಣವಿರೆಡ್ಡಿ ಸೇರಿ ಎಲ್ಲರೂ ಎರಡ್ಮೂರು ದಿನದಲ್ಲಿ ಮನೆ ಸೇರಲಿದ್ದಾರೆ ಎಂದು ಭರವಸೆ ನೀಡಿದರು.

    ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್ ಹುಡಗಿ, ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಯೋಜನಾ ಪ್ರಾಧಿಕಾರ ಸದಸ್ಯ ಜ್ಞಾನೇಶ್ವರ ಮುಳೆ, ಮಹಾಂತಯ್ಯ ಸ್ವಾಮಿ, ರವಿ ಸ್ವಾಮಿ, ಸುಭಾಷ ರೇಕುಳಗೆ ಇತರರಿದ್ದರು.

    ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ: ಯೂಕ್ರೇನ್ನಲ್ಲಿ ಸಿಲುಕಿರುವ ವೈಷ್ಣವಿರೆಡ್ಡಿ ಮೊಬೈಲ್ ಮೂಲಕ ಮನೆಯವರ ಸಂಪರ್ಕದಲ್ಲಿದ್ದು, ಬುಧವಾರ ಬೆಳಗ್ಗೆ ಮಾತನಾಡಿದ್ದಳು. ನೀವು ಹೆದರಬೇಡಿ, ಸುರಕ್ಷಿತವಾಗಿ ಊರಿಗೆ ಬರುತ್ತೇನೆ ಎಂದು ತಂದೆಗೆ ಹೇಳಿದ್ದಳು. ಆದರೆ ನಂತರದಲ್ಲಿ ಆಕೆ ಮೊಬೈಲ್ ಸಂಪರ್ಕಕ್ಕೆ ಸಿಗದಿರುವುದು ಪಾಲಕರ ಚಿಂತೆ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts