More

    ಸುಟ್ಟು ಕರಕಲಾದ ಭತ್ತದ ಬೆಳೆ !

    ಶಿರಸಿ: ರೈತನೊಬ್ಬ ಕಣ್ತಪ್ಪಿನಿಂದ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ ತಾಲೂಕಿನ ಮರಗುಂಡಿಯಲ್ಲಿ ಎರಡೂವರೆ ಎಕರೆ ಭತ್ತದ ಬೆಳೆ ಸುಟ್ಟು ಕರಕಲಾಗಿದ್ದು, ವರ್ಷದ ತುತ್ತಿನ ಚೀಲಕ್ಕೆ ಬರೆ ಬಿದ್ದಂತಾಗಿದೆ.

    ತಾಲೂಕಿನ ಹಲಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂಡಿಯ ದತ್ತು ಉಳ್ಳಪ್ಪ ನಾಯ್ಕ ಎಂಬುವವರು ಕಣ್ತಪ್ಪಿನಿಂದಾಗಿ ಕಳೆನಾಶಕ ಸಿಂಪಡಿಸಿದ ಕಾರಣ ಫಸಲಿಗೆ ಬರುತ್ತಿದ್ದ ಭತ್ತದ ಬೆಳೆ ಕಳೆದುಕೊಂಡಿದ್ದಾರೆ. ಬಡ ಕೃಷಿಕನಾಗಿರುವ ಇವರಿಗೆ ಎರಡೂವರೆ ಎಕರೆ ಗದ್ದೆ ಬಿಟ್ಟರೆ ಬೇರೆನೂ ಇಲ್ಲ. ಇದರಲ್ಲಿಯೇ ವರ್ಷದ ತುತ್ತಿನ ಚೀಲ ತುಂಬುತಿತ್ತು. ಓದು ಬರಹ ಗೊತ್ತಿಲ್ಲದ ಈತ ಔಷಧ ಎಂದು ಕಳೆನಾಶಕ ಸಿಂಪಡಣೆ ಮಾಡಿದ್ದು, ಮಾರನೆ ದಿನದಿಂದಲೇ ಒಣಗಲು ಆರಂಭವಾದ ಭತ್ತದ ಸಸಿ ಇದೀಗ ಸಂಪೂರ್ಣ ಸುಟ್ಟಿದೆ. ಬರಲಿರುವ ದಿನಗಳಲ್ಲಿ ಜೀವನ ನಿರ್ವಹಣೆ ಹೇಗೆ ಮಾಡುವುದೆಂಬ ಚಿಂತೆ ಎದುರಾಗಿದೆ. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಸಾಕುವುದು ಹೇಗೆ ಎಂದು ರೈತ ದತ್ತು ನಾಯ್ಕ ಕಣ್ಣೀರಿಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts