More

    ಸುಂದರ ಕಲಾಕೃತಿಗಳ ಅನಾವರಣ

    ಕಲಬುರಗಿ: ಕಲಾವಿದರ ಕುಂಚದಿಂದ ಅರಳಿದ ಸುಂದರ ಕಲಾಕೃತಿಗಳ ನೋಟ ಕಣ್ಮನ ಸೆಳೆಯುವಂತಿತ್ತು. ರಂಗಮಂದಿರದಿಂದ ಮಹಾನಗರ ಪಾಲಿಕೆವರೆಗಿನ ರಸ್ತೆಯುದ್ದಕ್ಕೂ ಆಕರ್ಷಕ ಚಿತ್ರಗಳು ರಸ್ತೆ ಬದಿಗಿರುವ ನಮ್ಮನ್ನು ನಿಮ್ಮ ಮನೆಗೆ ಕೊಂಡೊಯ್ದು ಗೋಡೆ ಅಲಂಕಾರ ಹೆಚ್ಚಿಸಿಕೊಳ್ಳಿ ಎನ್ನುವಂತೆ ಕೈಬೀಸಿ ಕರೆಯವಂತಿದ್ದವು.
    ಎಲ್ಲಿ ನೋಡಿದರೂ ಬಣ್ಣ ಬಣ್ಣ್ಣದ ಚಿತ್ರಗಳು. ಪ್ರಕೃತಿ, ಪರಿಸರ, ವಿಜ್ಞಾನ, ದೇವತೆಗಳ, ಪ್ರಾಣಿ-ಪಕ್ಷಿ, ಸರೋವರ ಹೀಗೆ ವಿವಿಧ ರೀತಿಯ ಚಿತ್ರಗಳು ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದವು. ಕಲಾವಿದರ ಪ್ರತಿಭೆಗೆ ಚಿತ್ರಸಂತೆ ಉತ್ತಮ ವೇದಿಕೆಯೂ ಒದಗಿಸಿಕೊಟ್ಟಿತು.
    ಸಾರ್ವಜನಿಕ ಉದ್ಯಾನದಲ್ಲಿ ಭಾನುವಾರ ಬೆಳಗ್ಗೆ ಚಿತ್ರಸಂತೆಗೆ ಚಾಲನೆ ನೀಡಿದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಎಲ್ಲರೂ ಕಲಾಕೃತಿಗಳನ್ನು ಕೊಳ್ಳುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
    ಡಾ.ಎಸ್.ಎಂ. ಪಂಡಿತ ಅವರಂತಹ ಮಹಾನ್ ಕಲಾವಿದರನ್ನು ಕೊಟ್ಟ ಈ ಭಾಗದಲ್ಲಿ ಕಲಾವಿದರ ಕೊರತೆ ಇಲ್ಲ. ಕಲಾ ಪೋಷಕರ ಕೊರತೆಯಿಂದ ಕಲಾವಿದರು ಬೆಳೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಲಾಕೃತಿಗಳನ್ನು ಖರೀದಿಸುವ ಮೂಲಕ ಉದ್ಯಮಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಕಲೆಯನ್ನು ಪೋಷಿಸಬೇಕು ಎಂದು ಹಿರಿಯ ಚಿತ್ರಕಲಾವಿದ ಡಾ.ಎ.ಎಸ್.ಪಾಟೀಲ್ ಮನವಿ ಮಾಡಿದರು.
    ಎಚ್ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮುಖಂಡರಾದ ನರಸಿಂಹ ಮೆಂಡನ್, ನಟರಾಜ ಶಿಲ್ಪಿ, ಆನಯ್ಯ ಚೌಕಿಮಠ, ಎಂ.ಎಚ್. ಬೆಳಮಗಿ ಉಪಸ್ಥಿತರಿದ್ದರು. ಮಾರ್ತಂಡ ಶಾಸ್ತ್ರಿ ಸ್ವಾಗತಿಸಿದರು. ಪರಶುರಾಮ ವಂದಿಸಿದರು. ಎಚ್ಕೆಇ ಮಹಿಳಾ ಕಾಲೇಜಿನ ಪ್ರಾಚಾಯರ್ೆ ಸುಜಾತಾ ಬಿರಾದಾರ ನಿರೂಪಣೆ ಮಾಡಿದರು.
    ಎಚ್ಕೆಸಿಸಿಐ, ಗುಲ್ಬರ್ಗ ವಿವಿ, ಕೇಂದ್ರೀಯ ವಿವಿ, ವಿಕಾಸ ಅಕಾಡೆಮಿ, ಹೈದರಾಬಾದ್ ಕನರ್ಾಟಕ ಶಿಕ್ಷಣ ಸಂಸ್ಥೆ, ಚೈತನ್ಯಮಯಿ ಆಟರ್್ ಗ್ಯಾಲರಿ ಹಾಗೂ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಈ ಚಿತ್ರಸಂತೆ ಆಯೋಜಿಸಿವೆ. ಕಲ್ಯಾಣ ಕನರ್ಾಟಕ ಹೊರತುಪಡಿಸಿ ಇತರ ಜಿಲ್ಲೆಗಳ ಚಿತ್ರ ಕಲಾವಿದರೂ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ವಿಶೇಷ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts