More

    ಸಿಸಿ ರಸ್ತೆ ಕೆಲಸಕ್ಕೆ ಯುಜಿಡಿ ಅಡ್ಡಿ

    ಹುಬ್ಬಳ್ಳಿ: ಸಿಆರ್​ಎಫ್ ಅನುದಾನದಡಿ ಹುಬ್ಬಳ್ಳಿ ನೀಲಿಜಿನ್ ರೋಡ್​ನಲ್ಲಿ ಬಹುದಿನಗಳ ನಂತರ ಪ್ರಾರಂಭಗೊಂಡಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ನಿರ್ವಿುಸುತ್ತಿರುವ ಒಳಚರಂಡಿ (ಯುಜಿಡಿ)ಯ ನಿಧಾನಗತಿ ಕೆಲಸ ಅಡ್ಡಿ ಉಂಟು ಮಾಡತೊಡಗಿದೆ.

    ನೀಲಿಜಿನ್ ರಸ್ತೆಯ ಕರ್ಣಾಟಕ ಬ್ಯಾಂಕ್​ನಿಂದ ತಿರುಮಲ ಸೆಂಟರ್ ಬದಿಯಲ್ಲಿ 400 ಮೀ. ಉದ್ದದ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಪಾಲಿಕೆ ಕೈಗೊಂಡಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕಾಮಗಾರಿ ಇದೀಗ ಶಿಂಧೆ ಕಾಂಪ್ಲೆಕ್ಸ್​ವರೆಗೆ ಬಂದಿದೆ.

    ಮತ್ತೊಂದು ಬದಿಯಲ್ಲಿ ಲೋಕೋಪ ಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಸಿಮೆಂಟ್ ರಸ್ತೆ ಕಾಮಗಾರಿ ಕೈಗೊಂಡಿದೆ. ಒಟ್ಟು 11 ತಿಂಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ಈಗಾಗಲೇ 2 ತಿಂಗಳು ಕಳೆದಿವೆ. ಈ ಅವಧಿಯಲ್ಲಿ ಚನ್ನಮ್ಮ ವೃತ್ತದಿಂದ ಕರ್ಣಾಟಕ ಬ್ಯಾಂಕ್​ವರೆಗಿನ ಬಲಬದಿಯ ಒಂದು ಭಾಗದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

    ಸಿಸಿ ರಸ್ತೆ ನಿರ್ವಣಕ್ಕೆ ಪಿಡಬ್ಲ್ಯುಡಿ ಎನ್​ಎಚ್ ವಿಭಾಗದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರೂ, ಒಳಚರಂಡಿ ನಿರ್ಮಾಣ ಕಾಮಗಾರಿ ಬಾಕಿ ಇರುವುದು ಅಡ್ಡಿಯಾಗಿದೆ.

    ಇಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಗೊತ್ತಿದ್ದರೂ ಪಾಲಿಕೆ ಒಳಚರಂಡಿ ನಿರ್ವಣಕ್ಕೆ 3 ತಿಂಗಳ ಅವಧಿ ನೀಡಿದೆ. ಒಂದು ವಾರದಲ್ಲಿ ಒಳಚರಂಡಿ ನಿರ್ವಣದ ಇನ್ನುಳಿದ ಕಾಮಗಾರಿ ಪೂರ್ಣಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ. ಆದರೆ, ಇದು ಕಷ್ಟಸಾಧ್ಯ. ಒಳಚರಂಡಿ ನಿರ್ವಣಕ್ಕಾಗಿ ತೋಡಿರುವ ತಗ್ಗುಗಳನ್ನು ಅವಸರದಲ್ಲಿ ಕೇವಲ ಮಣ್ಣಿನಿಂದ ಮುಚ್ಚಿದರೆ ಮೇಲ್ಮೈ ಪೊಳ್ಳಾಗುತ್ತದೆ. ಅದರ ಮೇಲೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದಲ್ಲಿ ಕುಸಿಯುವ ಸಾಧ್ಯತೆ ಇರುತ್ತದೆ.

    ಒಳಚರಂಡಿ ಕಾಮಗಾರಿ ಗುಣಮಟ್ಟದ್ದಾಗಿರಬೇಕಂದರೆ ಇನ್ನೂ ಹೆಚ್ಚಿನ ಅವಧಿ ಬೇಕಾಗಬಹುದು. ಹೀಗಾಗಿ ಒಳಚರಂಡಿ ಕಾಮಗಾರಿಯನ್ನು ಅವಸರದಲ್ಲಿ ಪೂರ್ಣಗೊಳಿಸಬೇಕೊ ಅಥವಾ ಗುಣಮಟ್ಟದಿಂದ ನಿರ್ವಿುಸಬೇಕೊ ಎಂಬ ಗೊಂದಲ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರದ್ದು. ಸಿಸಿ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳುವ ಮುಂಚೆಯೇ ಒಳಚರಂಡಿ ನಿರ್ವಣದ ಕೆಲಸ ಪೂರ್ಣಗೊಳಿಸದ ಪಾಲಿಕೆಗೆ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಹಿಡಿಶಾಪ ಹಾಕುವಂತಾಗಿದೆ.

    ಪರ್ಯಾಯ ಮಾರ್ಗ: ನೀಲಿಜಿನ್ ರಸ್ತೆಯ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಾಟನ್​ವಾರ್ಕೆಟ್​ನ ಸಾಂಸ್ಕೃತಿಕ ಭವನದಿಂದ ಶಾರದಾ ಹೋಟೆಲ್​ವರೆಗಿನ ರಸ್ತೆಯ ಕಾಂಕ್ರೀಟಿಕರಣವನ್ನಾದರೂ ಮಾಡಿ ಮುಗಿಸೋಣ ಎಂದು ಪಿಡಬ್ಲ್ಯುಡಿ ಎನ್​ಎಚ್ ವಿಭಾಗದ ಅಧಿಕಾರಿಗಳು ಚಿಂತಿಸಿದ್ದಾರೆ. ಸಿಸಿ ರಸ್ತೆ ಕಾಮಗಾರಿಗೆ ಈಗಾಗಲೇ ಸಂಗ್ರಹಿಸಿರುವ ಕಚ್ಚಾ ಸಾಮಗ್ರಿಯನ್ನು ಇಟ್ಟುಕೊಂಡು ಕೂರುವಂತಿಲ್ಲ. ಹಾಗಾಗಿ ಸಾಂಸ್ಕೃತಿಕ ಭವನದ ರಸ್ತೆಯಲ್ಲಿನ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ತೋರಿಸುವಂತೆ ಪೊಲೀಸ್ ಆಯುಕ್ತರನ್ನು ಕೋರಿದ್ದಾರೆ. ಆಯುಕ್ತರು ಫೆ. 8ರಂದು ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ, ಪರ್ಯಾಯ ಮಾರ್ಗ ಸೂಚಿಸಲಿದ್ದಾರೆ. ನಂತರ ಈ ಮಾರ್ಗದಲ್ಲಿ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲಿದೆ.

    ನೀಲಿಜಿನ್ ರಸ್ತೆಯಲ್ಲಿ ಒಂದು ವಾರದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಇಲ್ಲಿನ ಒಂದು ಬದಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಬಹುದು. | ಆನಂದಕುಮಾರ ಝುಳಕಿ ಪಾಲಿಕೆ ವಲಯ 5ರ ಸಹಾಯಕ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts