More

    ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ

    ನುಗ್ಗೇಹಳ್ಳಿ: ಸಾವಯವ ಸಿರಿಧಾನ್ಯಗಳು ಹಾಗೂ ತೆಂಗಿನ ಎಣ್ಣೆ ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ತಿಳಿಸಿದರು.

    ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ ತೆಂಗಿನ ಎಣ್ಣೆಗೆ ಭಾರಿ ಬೇಡಿಕೆ ಇದ್ದು, ಇದನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಂಗಡಿಗಳಲ್ಲಿ ಮಾರುವ ಎಣ್ಣೆಗಳ ಉಪಯೋಗ ಕಡಿಮೆ ಮಾಡಿ ತೆಂಗಿನ ಎಣ್ಣೆ ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿ ಜತೆಗೆ ತೆಂಗಿನ ಬೆಳೆಗೂ ಹೆಚ್ಚು ಲಾಭ ಬರುತ್ತದೆ ಎಂದು ತಿಳಿಸಿದರು.

    ನಿವೃತ್ತ ಶಿಕ್ಷಣಾಧಿಕಾರಿ ಎನ್. ಜೆ. ಸೋಮನಾಥ್, ಎನ್.ಎಸ್. ಪ್ರಕಾಶ್, ಮೆಡಿಕಲ್ ಪವಿತ್ರಾ ಸಂತೋಷ್, ಎನ್.ಡಿ.ಗೌತಮ್, ಎನ್.ಎಸ್.ಗಿರೀಶ್, ಪ್ರವೀಣ್, ನಾರಾಯಣ್, ರಾಜೇಶ್ವರಿ ಶಂಕರ್, ಮಂಜುಳಾ ಗಂಗಾಧರ್, ರಾಜಣ್ಣ, ಶಶಿಕಲಾ ದೇವರಾಜ್, ಮಹದೇವಮ್ಮ ಶಂಕರ್, ಕಮಲಮ್ಮ ಬೆಟ್ಟಯ್ಯ, ಛಾಯಾ ಕೃಷ್ಣ, ಜಿತೇಂದ್ರ, ಮಂಜಣ್ಣ, ತ್ರಿನೇಶ್, ದೇವರಾಜ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts