More

    ಸಿಯುಕೆ ಕುಲಪತಿ ಹುದ್ದೆಗೆ ಲಾಬಿ

    ಜಯತೀರ್ಥ ಪಾಟೀಲ ಕಲಬುರಗಿ
    ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ನೇಮಕ ಪ್ರಕ್ರಿಯೆ ಶುರುವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಲಾಬಿ ನಡೆದಿದೆ. ಅರ್ಜಿ ಹಾಕಿರುವ ಅನೇಕರು ರಾಜ್ಯ, ರಾಷ್ಟ್ರಮಟ್ಟದ ಸಚಿವರು, ಹಿರಿಯ ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆ.
    ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅವರ ಐದು ವರ್ಷದ ಅವಧಿ ಪೂರ್ಣಗೊಂಡ ಬಳಿಕ ವಿಸ್ತರಣೆ ಮಾಡಲಾಗಿದೆ. ಆದರೆ ಪ್ರೊ.ಮಹೇಶ್ವರಯ್ಯ ನವೆಂಬರ್ 14ಕ್ಕೆ 70 ವರ್ಷ ಪೂರೈಸುತ್ತಿದ್ದು, ನಂತರ ಅಧಿಕಾರದಲ್ಲಿ ಮುಂದುವರಿಯಲು ಆಗುವುದಿಲ್ಲ. ಹೀಗಾಗಿ ಹೊಸ ಕುಲಪತಿಯನ್ನು ನೇಮಕ ಮಾಡಬೇಕಾಗಿದೆ.
    349 ಜನರ ಅರ್ಜಿ ಸಲ್ಲಿಕೆ
    ಈ ವಿವಿ ಕುಲಪತಿ ಹುದ್ದೆಗೆ ಕಲ್ಯಾಣ ಕರ್ನಾಟಕದವರೂ ಸೇರಿ ಸುಮಾರು 349 ಪ್ರಾಧ್ಯಾಪಕರು ಅರ್ಜಿ ಹಾಕಿದ್ದಾರೆ. ಜತೆಗೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಬಹುದಾದ ಮಂತ್ರಿಗಳನ್ನು ಭೇಟಿ ಮಾಡಿ ನೇಮಕಕ್ಕೆ ಲಾಬಿ ಶುರು ಮಾಡಿದ್ದಾರೆ.
    ಕುಲಪತಿ ನೇಮಕಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ಒಬ್ಬರು, ಕೇಂದ್ರ ಎಂಎಚ್ಆರ್ಡಿಯಿಂದ ಒಬ್ಬರು ಸೇರಿ ಐವರನ್ನು ಒಳಗೊಂಡ ಶೋಧನಾ ಸಮಿತಿಗೆ ಕುಲಪತಿ ನೇತೃತ್ವದ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆ ಸೇರಿ ಮೂವರ ಹೆಸರು ಶಿಫಾರಸು ಮಾಡಿದೆ.
    ಅರ್ಜಿ ಪರಿಶೀಲನೆ
    ಶೋಧನಾ ಸಮಿತಿ ಸೆಪ್ಟೆಂಬರ್ 23ರಂದು ಸಭೆ ಸೇರಿ 349 ಅರ್ಜಿಗಳನ್ನು ಪರಿಶೀಲಿಸಿದೆ. ಅದರಲ್ಲಿ ಶಾರ್ಟಲಿಸ್ಟ್ ಮಾಡಿದ 15 ಜನರ ಸಂದರ್ಶನ (ಇಂಟಾ್ರೃಕ್ಷನ್) 7ರಂದು ನಿಗದಿಯಾಗಿದೆ. 15 ಜನರಲ್ಲಿ ಅಂತಿಮವಾಗಿ ಐವರನ್ನು ಆಯ್ಕೆ ಮಾಡಲಿರುವ ಸಮಿತಿ, ನಂತರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಶಿಫಾರಸು ಮಾಡಲಿದೆ.

    ಹೆಚ್ಚಿದ ಆಂಧ್ರಪ್ರದೇಶವರ ಒತ್ತಡ
    ಮೈಸೂರು ವಿವಿಯ ಇಬ್ಬರು, ಆಂಧ್ರಪ್ರದೇಶದ ಇಬ್ಬರ ಹೆಸರು ರೇಸ್ನಲ್ಲಿದೆ. ಆಂಧ್ರಪ್ರದೇಶದ ಎರಡು ಕನರ್ಾಟಕ ಕೇಂದ್ರೀಯ ವಿವಿಗಳಿಗೆ ಕನರ್ಾಟಕದವರನ್ನು ನೇಮಕ ಮಾಡಲಾಗಿದ್ದು, ಈಗ ಕನರ್ಾಟಕದಲ್ಲಿ ನಮಗೆ ಅವಕಾಶ ಕೊಡಿ ಎಂದು ಅಲ್ಲಿನವರು ಒತ್ತಡ ಹೇರುತ್ತಿದ್ದಾರೆ ಎಂದು ಗೊತ್ತಾಗಿದೆ. ಜತೆಗೆ ಅಜರ್ಿ ಹಾಕಿರುವ ಕಲ್ಯಾಣ ಕನರ್ಾಟಕ ಭಾಗದವರೂ ಒತ್ತಡ ಹೇರುವಲ್ಲಿ ಹಿಂದಿ ಬಿದ್ದಿಲ್ಲ.

    ಹೊಸ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ರಚನೆಯಾಗಿದೆ. ವಿವಿಯಿಂದ ಎಕ್ಸಿಕ್ಯೂಟಿವ್ ಕೌನ್ಸಿಲ್ ಪ್ರತಿನಿಧಿಗಳಾಗಿ ಮೂವರು ಸಮಿತಿಯಲ್ಲಿದ್ದಾರೆ. ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದಿದೆ. ನವೆಂಬರ್ 14ಕ್ಕೆ ತಮ್ಮ ಅವಧಿ ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಪ್ರಕ್ರಿಯೆ ಪೂರ್ಣಗೊಂಡು ಹೊಸ ಕುಲಪತಿ ನೇಮಕ ಮಾಡುವ ನಿರೀಕ್ಷೆ ಇದೆ.
    | ಪ್ರೊ.ಎಚ್.ಎಂ.ಮಹೇಶ್ವರಯ್ಯ
    ಸಿಯುಕೆ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts