More

    ಸಿಎಎ ಯಾವುದೇ ಧರ್ಮ ವಿರೋಧಿಯಲ್ಲ

    ಅಫಜಲಪುರ: ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸರ್ಕಾರ ಸಿಎಎ, ಎನ್ಆರ್ಸಿ ಕಾಯ್ದೆ ಜಾರಿಗೆ ತಂದಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
    ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ ಮತ್ತು ತಾಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಈ ಹಿಂದೆ ಕಾಂಗ್ರೆಸ್ ಜಾರಿಗೆ ತರಲು ಮುಂದಾಗಿತ್ತು. ವಿಪರ್ಯಾಸವೆಂದರೆ ಇಂದು ಕಾಂಗ್ರೆಸ್ ಪಕ್ಷವೇ ಈ ಕಾಯ್ದೆಗಳನ್ನು ವಿರೋಧಿಸುತ್ತಿದೆ ಎಂದು ಛೇಡಿಸಿದರು.
    ಸಿಎಎ ಯಾವುದೇ ಧರ್ಮದ ವಿರೋಧಿಯಲ್ಲ. ಬಿಜೆಪಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಮತಬ್ಯಾಂಕ್ಗಾಗಿ ತಪ್ಪು ಮಾಹಿತಿ ನೀಡುತ್ತಿವೆ. ಈ ಬಗ್ಗೆ ಕಿವಿಗೊಡಬೇಡಿ. ಸರ್ವಧರ್ಮಗಳ ಹಿತವೇ ಬಿಜೆಪಿಯ ಧ್ಯೇಯವಾಗಿದೆ ಎಂದರು.
    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ದೇಶದಲ್ಲಿನ ನುಸುಳುಕೋರರನ್ನು ಹೊರ ಹಾಕುವುದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸಿ ಎಂದು ನೂತನ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.
    ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ತಾಲೂಕು ಅಧ್ಯಕ್ಷ ಶೈಲೇಶ ಗುಣಾರಿ, ಎಪಿಎಂಸಿ ಅಧ್ಯಕ್ಷ ರಾಮಣ್ಣ ನಾಯಕೋಡಿ, ಪ್ರಮುಖರಾದ ವಿದ್ಯಾಸಾಗರ ಕುಲಕಣರ್ಿ, ಅವ್ವಣ್ಣ ಮ್ಯಾಕೇರಿ, ದಿವ್ಯಾ ಹಾಗರಗಿ, ಮಳೇಂದ್ರ ಡಾಂಗೆ, ಗುರುಬಾಳ ಜಕಾಪುರ, ಪ್ರಭುಲಿಂಗ ದೇವತ್ಕಲ್ ಅಶೋಕ ಬಗಲಿ, ಸಿದ್ದಯ್ಯ ಆಕಾಶಮಠ, ಶ್ರೀಶೈಲ ಬಳೂರಗಿ, ಚಂದಮ್ಮ ಪಾಟೀಲ್, ಪ್ರಭಾವತಿ ಮೇತ್ರಿ, ಅಪ್ಪಾಶ ಬುರಲಿ, ಧಾನು ಫತಾಟೆ, ಸುನೀಲ್ ಶೆಟ್ಟಿ, ಭೀಮಾಶಂಕರ ಪೂಜಾರಿ, ಚನ್ನಬಸು ನಾವಿ, ಶರಣು ಪದಕಿ ಇತರರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts