More

    ಸಾವಿರ ಗಡಿಯತ್ತ ಕರೊನಾ ಪ್ರಕರಣ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ತನ್ನ ವೇಗವನ್ನು ಹೆಚ್ಚಿಸುತ್ತಿದ್ದು, ಶುಕ್ರವಾರ 56 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 35 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ.

    ಶುಕ್ರವಾರದ ಸೋಂಕಿತರಲ್ಲಿ 6 ಜನ ಪೊಲೀಸರು, ಓರ್ವ ಕೆಎಸ್​ಆರ್​ಟಿಸಿ ಚಾಲಕರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 991 ಜನರಿಗೆ ಸೋಂಕು ಖಚಿತವಾಗಿದ್ದು, 557 ಜನರು ಸೋಂಕಿನಿಂದ ಗುಣವಾಗಿದ್ದಾರೆ. 27 ಜನರು ಮೃತಪಟ್ಟಿದ್ದಾರೆ. 407 ಪ್ರಕರಣಗಳು ಸಕ್ರಿಯವಾಗಿವೆ. ಹಾವೇರಿ ತಾಲೂಕಿನ ಇಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

    ಹಾವೇರಿ ನಗರದ ಪುರದ ಓಣಿ, ಶಿವಾಜಿನಗರದಲ್ಲಿ ತಲಾ ಮೂವರಿಗೆ, ಬಸವೇಶ್ವರ ನಗರದ ಬಿ ಬ್ಲಾಕ್ 8ನೇ ಕ್ರಾಸ್, ರಜಪೂತ ಗಲ್ಲಿ, ಅಶ್ವಿನಿನಗರದಲ್ಲಿನ ಎಎಸ್​ಐ ಸೇರಿ ತಲಾ ಇಬ್ಬರಿಗೆ, ಎಂ.ಜಿ. ರಸ್ತೆ, ಇಜಾರಿಲಕಮಾಪುರ ಹಾಗೂ ಮೇಲಿನಪೇಟೆಯ ಟ್ರಾಫಿಕ್ ಪೊಲೀಸ್, ವಿದ್ಯಾನಗರದ ಕೆಎಸ್​ಆರ್​ಟಿಸಿ ಚಾಲಕ, ನಾಗೇಂದ್ರನಮಟ್ಟಿ, ಬಾವಿಕಟ್ಟಿ ಓಣಿಯ ತಲಾ ಒಬ್ಬರಿಗೆ, ಕೋಳೂರ, ಅಗಡಿ ಗ್ರಾಮದಲ್ಲಿ ಇಬ್ಬರಿಗೆ, ಕಾಟೇನಹಳ್ಳಿ ಗ್ರಾಮದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

    ಹಿರೇಕೆರೂರ ಪಟ್ಟಣದ ಬಸವೇಶ್ವರ ನಗರದ 1ನೇ ಕ್ರಾಸ್​ನಲ್ಲಿಯ 7 ಜನರಿಗೆ, ಮಾಸೂರ ಗ್ರಾಮದ ಮೂವರಿಗೆ, ಹಂಸಭಾವಿ, ರಟ್ಟಿಹಳ್ಳಿ, ಶಿರಗಂಬಿ, ಗುಡ್ಡದಮಾದಾಪುರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ರಾಣೆಬೆನ್ನೂರ ನಗರದ ಕೆಎಚ್​ಡಿಸಿ ಕಾಲನಿ, ವಿನಾಯಕ ನಗರ, ಗಣೇಶ ನಗರ, ಸರ್ಕಾರಿ ಆಸ್ಪತ್ರೆ ವಸತಿಗೃಹ, ತಾಲೂಕಿನ ಕೋಟಿಹಾಳ, ಹಲಗೇರಿ, ಮೈದೂರ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

    ಸವಣೂರ ಪಟ್ಟಣದ ಹಾವಣಗಿ ಪ್ಲಾಟ್, ದುಂಡಿಪೇಟೆಯ ತಲಾ ಇಬ್ಬರಿಗೆ, ಅಂಬೇಡ್ಕರ ನಗರ, ಲಾಲಸಾಕಟ್ಟಿ, ತಾಲೂಕಿನ ಮಂಟಗಣಿ ಗ್ರಾಮದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಶಿಗ್ಗಾಂವಿ ತಾಲೂಕು ಗಂಗಿಬಾವಿಯ ಕೆಎಸ್​ಆರ್​ಪಿಯ ಮೂವರು ಪೊಲೀಸ್ ಸಿಬ್ಬಂದಿ, ಶಿಗ್ಗಾಂವಿ ಪಟ್ಟಣದ ಕುಂಬಾರ ಓಣಿ ಹಾಗೂ ಬಂಕಾಪುರ ಶಾಬಜಾರ್​ನ ಒಬ್ಬರಿಗೆ ಸೋಂಕು ತಗುಲಿದೆ.

    ಕೃಷಿ ಸಚಿವರ ಪತ್ನಿ, ಅಳಿಯನಿಗೂ ಸೋಂಕು

    ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಹಿರೇಕೆರೂರ ನಿವಾಸದಲ್ಲಿ ವಾಸವಾಗಿರುವ ಅವರ ಪತ್ನಿ, ಅಳಿಯ ಸೇರಿ ಅವರ ಮನೆಯ ಸಿಬ್ಬಂದಿ ಸೇರಿ 5 ಜನರಿಗೆ ಪಾಸಿಟಿವ್ ಬಂದಿದೆ ಎಂದು ಬಿ.ಸಿ. ಪಾಟೀಲ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಆದರೆ, ಶುಕ್ರವಾರದ ಜಿಲ್ಲಾ ಬುಲೆಟಿನ್​ನಲ್ಲಿ ಅವರಿಗೆ ಪಾಸಿಟಿವ್ ಬಂದಿರುವ ಮಾಹಿತಿ ಪ್ರಕಟವಾಗಿಲ್ಲ.

    ಜುಲೈನಲ್ಲಿ 873 ಜನರಿಗೆ ಸೋಂಕು ದೃಢ

    ಜಿಲ್ಲೆಯಲ್ಲಿ ಕರೊನಾ ಹರಡುವಿಕೆ ಜುಲೈ ತಿಂಗಳಿನಿಂದ ವೇಗ ಪಡೆದುಕೊಂಡಿದ್ದು, 31 ದಿನಗಳಲ್ಲಿ ಬರೋಬ್ಬರಿ 873 ಜನರಿಗೆ ಸೋಂಕು ಖಚಿತವಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ 389 ಜನರಿಗೆ ಸೋಂಕು ತಗುಲಿದೆ. ಸರಾಸರಿ ಪ್ರತಿದಿನಕ್ಕೆ 48 ಜನರಿಗೆ ಸೋಂಕು ದೃಢಪಟ್ಟಿದೆ. ಜೂನ್ ತಿಂಗಳಾಂತ್ಯದವರೆಗೆ ಜಿಲ್ಲೆಯಲ್ಲಿ 118 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದವು. ಜುಲೈನಲ್ಲಿ 25 ಜನರು ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 407 ದಾಟಿದೆ. ತಿಂಗಳ ಅವಧಿಯಲ್ಲಿ 873 ಜನರಿಗೆ ಸೋಂಕು ಹರಡಿ 532 ಜನರ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts