More

    ಸಾರವಾಡದಲ್ಲಿ ಬಿಜೆಪಿ ಪ್ರಶಿಕ್ಷಣ ವರ್ಗದ ಶಿಬಿರ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಬಬಲೇಶ್ವರ ತಾಲೂಕಿನ ಸಾರವಾಡದ ಈಶ್ವರ ದೇವಸ್ಥಾನದಲ್ಲಿ ಭಾನುವಾರ ಬಿಜೆಪಿ ಪ್ರಶಿಕ್ಷಣ ವರ್ಗದ ಶಿಬಿರ ನಡೆಯಿತು.
    ಉದ್ಘಾಟನೆ ನೆರವೇರಿಸಿದ ವಿಜುಗೌಡ ಎಸ್. ಪಾಟೀಲ ಮಾತನಾಡಿ, ಭಾರತೀಯ ಜನತಾ ಪಕ್ಷ ‘ಪ್ರಬಲ ನಾಯಕತ್ವ, ಸಿದ್ಧಾಂತ ಹಾಗೂ ಕಾರ್ಯಕರ್ತರು’ ಎಂಬ ಈ ಮೂರು ಅಂಶಗಳ ಮೇಲೆ ನಿಂತಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಹೀಗಾಗಿ ಪ್ರಬಲ ಕಾರ್ಯಕರ್ತರ ಪಡೆ ರಚಿಸುವ ನಿಟ್ಟಿನಲ್ಲಿ ಪಕ್ಷ ರೂಪು ರೇಷೆ ಸಿದ್ಧಪಡಿಸಿದೆ ಎಂದರು.
    2015ರ ಏಪ್ರಿಲ್‌ನ ಅಂಕಿ-ಅಂಶದಂತೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದವರ ಸಂಖ್ಯೆ10 ಕೋಟಿ ದಾಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದು ಮತ್ತಷ್ಟು ಏರಿದೆ. ಹೀಗಾಗಿ ಜಗತ್ತಿನಲ್ಲೇ ಅತಿದೊಡ್ಡ ಪಕ್ಷ ಎಂಬ ಖ್ಯಾತಿ ಪಡೆದಿದೆ. 2015ಕ್ಕೆ ಮೊದಲು ಚೀನಾದ ಕಮ್ಯುನಿಷ್ಟ್ ಪಕ್ಷವೇ ಅತಿದೊಡ್ಡ ಪಕ್ಷವಾಗಿತ್ತು. ಡಾ.ಶ್ಯಾಮಪ್ರಸಾದ ಮುಖರ್ಜಿಯಂಥ ಅನೇಕ ಹಿರಿಯರ ತ್ಯಾಗ ಬಲಿದಾನಗಳ ಜೊತೆ ಪಂಡಿತ ದೀನದಯಾಳ ಉಪಾಧ್ಯಾಯ, ಬಲರಾಜ್ ಮದೋಕ್, ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಅವರಂಥ ಅನೇಕ ದೂರ ದೃಷ್ಟಿಯುಳ್ಳ ನಾಯಕ ಪರಿಶ್ರಮದ ಫಲವಾಗಿ ಬಿಜೆಪಿ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
    ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ಮಂಡಲ ಅಧ್ಯಕ್ಷ ವಿಠಲ ಕಿರಸೂರ, ಸಂತೋಷ ಕುರದಡ್ಡಿ, ಶಿವು ದಳವಾಯಿ, ಈರಣ್ಣ ಶಿರಮಗೊಂಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts