More

    ಸಾಮಾಜಿಕ ಅಂತರ ಕಾಪಾಡದ ಸಾರ್ವಜನಿಕರು

    ನರೇಗಲ್ಲ: ‘ಮಹಾಮಾರಿ ಕರೊನಾಗೆ ಕಡಿವಾಣ ಹಾಕಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಅಧಿಕಾರಿಗಳು, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಪಟ್ಟಣದ ಜನ ಮಾತ್ರ ಅದನ್ನು ಇನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

    ಬೆಳಗ್ಗೆ 7ಗಂಟೆಯಿಂದ 9ಗಂಟೆಯವರೆಗೆ ದಿನಸಿ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಕಿರಾಣಿ, ಔಷಧ ಅಂಗಡಿ, ಪೆಟ್ರೋಲ್ ಬಂಕ್, ಜನರಲ್ ಸ್ಟೋರ್, ಪಡಿತರ ವಿತರಣೆ ಕೇಂದ್ರ, ತರಕಾರಿ ಅಂಗಡಿಗಳ ಮುಂದೆ ಜನರು ಅಕ್ಕಪಕ್ಕವೇ ನಿಂತು ಖರೀದಿಸುತ್ತಿದ್ದಾರೆ. ಅಂಗಡಿಗಳ ಮುಂದೆ ಮಾರ್ಕ್ ಮಾಡಿದ ಪ.ಪಂ. ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡುತ್ತಿರುವ ಬಗ್ಗೆ ಗಮನ ಹರಿಸುತ್ತಿಲ್ಲ. ಪ.ಪಂ. ವ್ಯಾಪ್ತಿಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ ವಿತರಿಸಲಾಗುತ್ತಿದೆ. ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಕ್ಕಳಿಗೆ ಆಹಾರ ವಿತರಿಸಲಾಗುತ್ತಿದೆ.

    ನರೇಗಲ್ಲ ಪಟ್ಟಣದ ಎಲ್ಲ ವ್ಯಾಪರಸ್ಥರಿಗೆ ಈಗಾಗಲೇ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ. ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಅಹಾರ ಸಾಮಗ್ರಿಗಳ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ವ್ಯಾಪರಸ್ಥರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಅದನ್ನು ಉಲ್ಲಂಘಿಸಿದ ವ್ಯಾಪಾರಸ್ಥರ ಲೈಸನ್ಸ್ ರದ್ದು ಮಾಡಲಾಗುತ್ತದೆ.
    | ರಾಮಚಂದ್ರಪ್ಪ ಕಜ್ಜಿ
    ಆರೋಗ್ಯ ನಿರೀಕ್ಷಕರು, ಪ.ಪಂ ನರೇಗಲ್ಲ

    ಹೈಪೋಕ್ಲೋರೈಡ್ ಔಷಧ ಸಿಂಪಡಣೆ

    ನರಗುಂದ: ಕರೊನಾ ವೈರಸ್ ಹರಡದಂತೆ ಅಗ್ನಿಶಾಮಕ, ಪುರಸಭೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಹೈಪೋಕ್ಲೋರೈಡ್ ಔಷಧ ಸಿಂಪಡಣೆ ಮಾಡಲಾಯಿತು. ಹಾಲಭಾವಿಕೆರೆ, ಅರ್ಭಾಣ, ಸವದತ್ತಿ ರಸ್ತೆ, ದಂಡಾಪೂರ, ಕಸಬಾ, ಬಸ್ ನಿಲ್ದಾಣ, ಹಗೇದಕಟ್ಟಿ ಓಣಿ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಪ್ರಮುಖ ಬೀದಿಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು. ಅಗ್ನಿ ಶಾಮಕ ಠಾಣಾಧಿಕಾರಿ ಸಂದೀಪ ಬಸರಗಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ಅಧಿಕಾರಿ ಪ್ರೀತಿ ಗವಿಮಠ, ಡಿ.ಆರ್. ಜೋರಂ, ರಾಚಪ್ಪ ಕೆರೂರ ಸೇರಿ ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಪೌರ ಕಾರ್ವಿುಕರು ಇದ್ದರು.

    ಕಲಾಕೃತಿ ಮೂಲಕ ಕರೊನಾ ಜಾಗೃತಿ

    ನರಗುಂದ: ಕರೊನ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್​ಡೌನ್ ಆಗಿರುವಾಗ ರಸ್ತೆಗಿಳಿಯುವ ಸಾರ್ವಜನಿಕರಿಗೆ ಕರೊನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಪಟ್ಟಣದ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಕರೊನಾ ಸಂದೇಶವುಳ್ಳ ಚಿತ್ರ ಕಲಾಕೃತಿಗಳನ್ನು ಬಿಡಿಸುತ್ತಿದ್ದಾರೆ. ಆ ಮೂಲಕ ತಾಲೂಕಿನ ಎಲ್ಲ ಸಾರ್ವಜನಿಕರಿಗೆ ವಿಶೇಷ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ಪಟ್ಟಣದ ನಾಗರಾಜ ಚಿತ್ರಗಾರ ಹಾಗೂ ಅಂಗವಿಕಲ ದಾದಾ ಹಯಾತ್ ಎಂಬ ಇಬ್ಬರು ಕಲಾವಿದರ ಸಹಾಯದೊಂದಿಗೆ ‘ನಾನು ಕರೊನಾ ಎಚ್ಚರ. ಪಾಪಿ ಈ ಕರೊನಾ, ಅದಕ್ಕೆ ಮನೆಯಲ್ಲಿರೋಣ. ಬೀದಿಗೆ ಬಂದ್ರೆ ನೀನು, ನಿನ್ನ ಮನೆಗೆ ಬರುವೆ ನಾನು. ಮನೆಯಲ್ಲಿ ಇರೋಣ ಕರೊನಾ ಓಡಿಸೋಣ ಎಂಬ ವಿವಿಧ ಎಚ್ಚರಿಕೆಯ ಸಂದೇಶಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts