More

    ಸಾಗುವಳಿ ಜಮೀನು ಅಕ್ರಮ ಹಂಚಿಕೆ ಆರೋಪ -ಕಾನೂನುಕ್ರಮಕ್ಕೆ ಒತ್ತಾಯ

    ದಾವಣಗೆರೆ: ಹೊರವಲಯದ ಕಾರ್ಖಾನೆಯೊಂದಕ್ಕೆ ಕಾನೂನುಬಾಹಿರವಾಗಿ ಬಗರ್‌ಹುಕುಂ ಸಾಗುವಳಿ ಜಮೀನನ್ನು ಭೋಗ್ಯಕ್ಕೆ ನೀಡಲಾಗಿದೆ ಎಂದು ಆರೋಪಿಸಿರುವ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
    ದಾವಣಗೆರೆ ತಾಲೂಕಿನ ಹಾಲುವರ್ತಿ ಗ್ರಾಮದ ಹೊಸ ಬಡಾವಣೆಯ ಸರ್ವೇ ನಂ.55 ರಲ್ಲಿ ಹಾಲಮ್ಮ, ಅನಸೂಯಮ್ಮ ಎಂಬುವರು 20 ವರ್ಷದಿಂದ ಸಾಗುವಳಿ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. ಹಿಂದಿನ ಜಿಲ್ಲಾಧಿಕಾರಿ 2018ರಲ್ಲಿ ಅದನ್ನು ಕಾನೂನುಬಾಹಿರವಾಗಿ ಲೀಸ್‌ಗೆ ನೀಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಜಾಗದ ಅನುಭವದಾರರಿಗೆ ನೋಟಿಸ್ ಹಾಗೂ ಸಾರ್ವಜನಿಕ ಪ್ರಕಟಣೆ ನೀಡಬೇಕು. ಅದನ್ನು ಪಾಲಿಸದೆ ಭೋಗ್ಯಕ್ಕೆ ನೀಡಲಾಗಿದೆ. ಈ ನಡುವೆ ಸಾಗುವಳಿ ಮಾಡುತ್ತಿದ್ದವರನ್ನು ಒಕ್ಕಲೆಬ್ಬಿಸಿ ಕಿರುಕುಳ ನೀಡಲಾಗಿದೆ ಎಂದು ಹೇಳಿದರು.
    ರೈತಸಂಘದ ಮುಖಂಡ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ, ಜಿಲ್ಲಾಡಳಿತ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಮುಖಂಡರಾದ ಎಸ್. ರಾಜಪ್ಪ, ಎಸ್. ಟಿ. ಪರಮೇಶ್ವರಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ಕೊಗ್ಗನೂರು ಹನುಮಂತಪ್ಪ, ಅನಸೂಯಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts