More

    ಸಾಗರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ

    ಸಾಗರ: ಮಂಗನ ಕಾಯಿಲೆಯಿಂದ ಮೃತಪಟ್ಟ ತುಮರಿ ಗ್ರಾಪಂ ವ್ಯಾಪ್ತಿಯ ಸೀಗೆಮಕ್ಕಿ ಹೂವಮ್ಮ ಅವರ ಮನೆಗೆ ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಈ ವೇಳೆ ಕಾಗೋಡು ಎದುರು ಅಳಲು ತೋಡಿಕೊಂಡ ಹೂವಮ್ಮ ಅವರ ಪುತ್ರ ಧರ್ಮಪ್ಪ, ನನ್ನ ತಾಯಿಯನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿದಾಗ ಸರಿಯಾದ ಕಾಳಜಿ ತೋರಲಿಲ್ಲ. ಜ್ವರ ಹೆಚ್ಚಾಗಿ ಎರಡು ದಿನಗಳಾದ ಮೇಲೆ ಮಣಿಪಾಲ್​ಗೆ ತುರ್ತು ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಟಿಎಚ್​ಒ ಡಾ. ಮುನಿವೆಂಕಟರಾಜು ಸೂಚಿಸಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿದ ಮೇಲೆ ಈ ಪ್ರಯತ್ನ ಮಾಡಲಾಯಿತು ಎಂದು ಅಳಲು ತೋಡಿಕೊಂಡರು.

    ಆಗ ಸ್ಥಳದಲ್ಲಿದ್ದ ಕೆಎಫ್​ಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿರಣ್ ಅವರಿಗೆ, ಇವರಿಂದ ಲಿಖಿತ ದೂರು ಪಡೆದು ಪರಿಶೀಲಿಸಿ ಎಂದು ಕಾಗೋಡು ತಿಳಿಸಿದರು.

    ಲಸಿಕೆ ಪಡೆಯಲು ಬರಲ್ಲ: ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಈ ಗ್ರಾಮದಲ್ಲಿ 450 ಜನರಿದ್ದು ಅವರಲ್ಲಿ 400 ಜನ ರೋಗನಿರೋಧಕ ಚುಚ್ಚುಮದ್ದು ತೆಗೆದುಕೊಂಡಿಲ್ಲ. ಅವರಿಗೆ ಕೆಎಫ್​ಡಿ ಇಂಜೆಕ್ಷನ್ ಎಂದರೆ ಭಾರಿ ಭಯವಿದೆ. ಇದು ಇಲ್ಲಿನ ಪ್ರಮುಖ ಸಮಸ್ಯೆ ಎಂದರು.

    20 ಮನೆಗೆ ಒಂದು ತಂಡವನ್ನು ಮಾಡಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ. ಸೋಮವಾರ 50 ಜನರಿಗೆ ರೋಗನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಜನರಲ್ಲಿರುವ ಭಯವನ್ನು ತೆಗೆದು ಹಾಕುವಲ್ಲಿ ಆರೋಗ್ಯ ಇಲಾಖೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಬಟೂರು ದೇವರಾಜು, ತಿಮ್ಮಪ್ಪ ಹುರುಳಿ, ಗಣೇಶ, ಹೂವಮ್ಮನ ಪತಿ ತಿಮ್ಮಾನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts