More

    ಸಹಸ್ರ ದಾಟಿದ ಕರೊನಾ ಸೋಂಕಿತರ ಸಂಖ್ಯೆ

    ಕಾರವಾರ: ಜಿಲ್ಲೆಯಲ್ಲಿ ಶನಿವಾರ ಕರೊನಾ ಸೋಂಕಿತರ ಸಂಖ್ಯೆ ಸ್ಪೋಟಗೊಂಡಿದೆ. ಇದೇ ಮೊದಲ ಬಾರಿಗೆ ಒಂದೇ ದಿನ 100ಕ್ಕೂ ಅಧಿಕ ಪ್ರಕರಣಗಳು ಖಚಿತವಾಗಿವೆ. ಮತ್ತೆ 115 ಜನರಿಗೆ ಕರೊನಾ ಇರುವುದು ಶನಿವಾರ ದೃಢಪಟ್ಟಿದೆ. ಜಿಲ್ಲೆಯ ಒಟ್ಟಾರೆ ಕರೊನಾ ಖಚಿತವಾದವರ ಸಂಖ್ಯೆ ಸಾವಿರ ದಾಟಿದೆ. ದಾಂಡೇಲಿ, ಹಳಿಯಾಳ ತಾಲೂಕುಗಳಲ್ಲಿ ಆತಂಕಕಾರಿ ಸಂಖ್ಯೆ ಕಂಡುಬಂದಿದೆ.

    ದಾಂಡೇಲಿ ಹಾಗೂ ಹಳಿಯಾಳ ತಾಲೂಕಿನಲ್ಲಿ ಒಟ್ಟು 52, ಕಾರವಾರದಲ್ಲಿ 11, ಅಂಕೋಲಾ 8, ಶಿರಸಿ 7, ಭಟ್ಕಳ, ಕುಮಟಾ ಹಾಗೂ ಮುಂಡಗೋಡಿನಲ್ಲಿ ತಲಾ 9, ಹೊನ್ನಾವರದಲ್ಲಿ 6, ಯಲ್ಲಾಪುರದಲ್ಲಿ 1, ಸಿದ್ದಾಪುರದಲ್ಲಿ 3 ಜನರಿಗೆ ಕರೊನಾ ಇರುವುದು ಖಚಿತವಾಗಿದೆ.

    ದಾಂಡೇಲಿಯು ದಿನದಿಂದ ದಿನಕ್ಕೆ ಕರೊನಾ ಹಾಟ್ ಸ್ಪಾಟ್ ಆಗಿ ಆಗಿ ಬದಲಾಗುತ್ತಿದೆ. ಇಲ್ಲಿನ ನಗರ ಪ್ರದೇಶವೊಂದರಲ್ಲೇ ಇದುವರೆಗೆ 100 ಜನರಿಗೆ ಸೋಂಕು ತಗುಲಿದೆ. ಶನಿವಾರ ಸರ್ಕಾರಿ ಆಸ್ಪತ್ರೆ ವಸತಿಗೃಹದ ಇಬ್ಬರಿಗೆ, ವನಶ್ರೀನ ನಗರ, ಹಳೆಯ ದಾಂಡೇಲಿ, ಓಲ್ಡ್ ಸ್ಟಾಫ್ ಕ್ವಾರ್ಟರ್ಸ್ ಮುಂತಾದೆಡೆಯವರಿಗೆ ಸೋಂಕು ಖಚಿತವಾಗಿದೆ. ಆಲೂರು ಗ್ರಾಪಂ ವ್ಯಾಪ್ತಿಗೂ ಸೋಂಕು ನುಗ್ಗಿದೆ. ದಾಂಡೇಲಿಯಲ್ಲಿ ಇದುವರೆಗೆ 1926 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದ್ದು, 1665 ಜನರ ವರದಿ ಬಂದಿದೆ. ಇನ್ನೂ 262 ಜನರ ವರದಿ ಬಾಕಿ ಇದೆ. 1579 ಜನರಿಗೆ ನೆಗೆಟಿವ್ ವರದಿ ಬಂದಿದ್ದು, 106 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

    ಕುಮಟಾದಲ್ಲಿ ನೆಹರು ನಗರಕ್ಕೆ ಅಮೆರಿಕದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಹಾಗೂ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಖಾಸಗಿ ವೈದ್ಯರ ಸಂಪರ್ಕಕ್ಕೆ ಬಂದ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಆಶಾ ಕಾರ್ಯಕರ್ತೆಗೆ ವೈರಾಣು
    ಆರೋಗ್ಯ ಸಮೀಕ್ಷೆಗಾಗಿ ಶ್ರಮಿಸುತ್ತಿದ್ದ ಹಳಿಯಾಳ ತೇರಗಾಂವ ಗ್ರಾಮದ 49 ವರ್ಷದ ಆಶಾ ಕಾರ್ಯಕರ್ತೆಗೆ ಕರೊನಾ ಇರುವುದು ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಇದೇ ಗ್ರಾಮದ ಇನ್ನೊಬ್ಬ ಕಾರ್ಯಕರ್ತೆಯಲ್ಲೂ ರೋಗ ಖಚಿತವಾಗಿತ್ತು. ಧಾರವಾಡ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಖಾಜಿ ಗಲ್ಲಿಯ ಸಿಬ್ಬಂದಿ, ಹೊಸೂರು, ಸಂಕನಕೊಪ್ಪ, ಬಸವಳ್ಳಿ, ಅಜಗಾಂವ, ತಟ್ಟಿಗೆರೆ, ಬೆಳವಟಗಿ, ಕಾಳಗಿನಕೊಪ್ಪ, ಯಡೋಗಾ ಹೀಗೆ ಎಲ್ಲೆಡೆ ಕರೊನಾ ದೃಢಪಟ್ಟಿದೆ. ಕೋವಿಡ್ ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದ ದಾಂಡೇಲಿಯ ಒಬ್ಬ ವ್ಯಕ್ತಿ ಗುಣವಾಗಿದ್ದು, ಆರೋಗ್ಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಮುಂಡಗೋಡ ಪಟ್ಟಣದ ನೆಹರು ನಗರ, ಬಸವನಬೀದಿ, ಕುಂಬಾರಗಟ್ಟಿಯ ಒಟ್ಟು ನಾಲ್ವರಿಗೆ ಕಾತೂರಿಗೆ ಬೆಂಗಳೂರಿನಿಂದ ಬಂದ ವ್ಯಕ್ತಿಗೆ, ಇಂದೂರಿನ ಒಬ್ಬ ವ್ಯಕ್ತಿಗೆ. ಗೊಮಾಂಗ್ ಎಜುಕೇಶನ್ ನ್ಯೂ ಡಿಬೇಟ್ ಹೌಸ್ ಟಿಬೆಟಿಯನ್ ಕಾಲನಿಗೆಯ ವ್ಯಕ್ತಿಗೆ, ಗೋವಾದಿಂದ ಬಂದ ಪಟ್ಟಣದ ಇಂದಿರಾ ನಗರದ ಮಹಿಳೆಗೆ ಕರೊನಾ ಪಾಸಿಟಿವ್ ಬಂದಿದೆ.

    ನೌಕಾನೆಲೆ, ಕೈಗಾಕ್ಕೂ ಆತಂಕ
    ಕಾರವಾರ ಕದಂಬ ನೌಕಾನೆಲೆ ಹಾಗೂ ಕೈಗಾ ಯೋಜನಾ ಪ್ರದೇಶಗಳಿಗೂ ಕರೊನಾ ಲಗ್ಗೆ ಇಟ್ಟಿದೆ. ಕದಂಬ ನೌಕಾನೆಲೆ ಪ್ರದೇಶದಲ್ಲಿ ಒಬ್ಬರಿಗೆ, ಮಲ್ಲಾಪುರದ ಕೈಗಾ ಟೌನ್​ಶಿಪ್​ನಲ್ಲಿ ಇನ್ನೊಬ್ಬರಿಗೆ ಸೋಂಕು ತಗಲಿದೆ. ಅಲ್ಲದೆ, ಚೆಂಡಿಯಾ ಹಾಗೂ ಅಸ್ನೋಟಿಯಲ್ಲಿ ತಲಾ ಒಬ್ಬರಿಗೆ ರೊಗ ದೃಢಪಟ್ಟಿದೆ. ನಗರದ ಕಾಜುಬಾಗದಲ್ಲಿ 3, ಕೆಎಚ್​ಬಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ಎಂಜಿ ರಸ್ತೆ, ಕಾಲರುದ್ರೇಶ್ವರ ದೇವಸ್ಥಾನ ಸಮೀಪ ಒಬ್ಬರಿಗೆ ಕರೊನಾ ಖಚಿತವಾಗಿದೆ. ಸಿದ್ದಾಪುರದ ಹಾರ್ಸಿಕಟ್ಟಾದ ಓಣಿತೋಟ, ಹರಕನಹಳ್ಳಿ, ಆಡುಕಟ್ಟಾದಲ್ಲಿ ಬೆಂಗಳೂರಿನಿಂದ ಆಗಮಿಸಿದ ತಲಾ ಒಬ್ಬರಿಗೆ ಸೋಂಕು ಖಚಿತವಾಗಿದೆ.

    ಕ್ಯಾನ್ಸರ್ ರೋಗಿಯೂ ಕರೊನಾ ಮುಕ್ತ
    ಅನ್ನನಾಳದ ಕ್ಯಾನ್ಸರ್​ನಿಂದ ಬಳಲುತ್ತಿದ್ದ 46 ವರ್ಷದ ಮಹಿಳೆಗೆ ಕರೊನಾ ತಗುಲಿತ್ತು. ಕಾರವಾರದ ಕ್ರಿಮ್್ಸ ಆಸ್ಪತ್ರೆಯ ವೈದ್ಯರು ಚಿಕಿತ್ಸೆ, ವಿಶೇಷ ಕಾಳಜಿ ವಹಿಸಿದ್ದು, ಅವರೂ ಕರೊನಾ ಮುಕ್ತರಾಗಿದ್ದಾರೆ. ನಗರದ 86 ವರ್ಷದ ವೃದ್ಧೆ ಗಂಭೀರ ಸ್ಥಿತಿಯಲ್ಲಿ ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರೂ ಅವರಿಗೂ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶಿರಸಿಯ 43 ವರ್ಷದ ವ್ಯಕ್ತಿಯೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೂ ಅವರೂ ಗುಣ ಹೊಂದಿದ್ದಾರೆ. ಮೂವರನ್ನೂ ಶನಿವಾರ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಕಾರವಾರದ ಮೂಲದ 70 ವರ್ಷದ ವೃದ್ಧ ಸೇರಿ ಆರು ಜನರನ್ನು ಬಿಡುಗಡೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts