More

    ಸಹಕಾರ ತತ್ವದಿಂದ ದೇಶದ ಅಭಿವೃದ್ಧಿ

    ಚಿಕ್ಕಮಗಳೂರು: ಕೃಷಿ, ಔದ್ಯೋಗಿಕ, ವ್ಯಾಪಾರ, ಶಿಕ್ಷಣ, ಕೈಗಾರಿಕೆಗಳು, ಸ್ವಯಂ ಉದ್ಯೋಗಗಳೆಲ್ಲವೂ ಸಹಕಾರ ವ್ಯಾಪ್ತಿಯಡಿ ಬಂದು ಅಭಿವೃದ್ಧಿಯಾದರೆ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಅಧ್ಯಕ್ಷ ಜಿ.ನಂಜೇಗೌಡ ಹೇಳಿದರು.

    ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದರು.  ಸಹಕಾರ ಇಲಾಖೆಯಲ್ಲಿ ಆವಿಷ್ಕಾರಗಳಾಗಿ 118 ವರ್ಷಗಳಲ್ಲಿ ಸಹಕಾರ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ದೇಶದಲ್ಲಿ ಶೇ.100ಕ್ಕೆ 70 ರಷ್ಟು ಕೃಷಿಕರು ಸಣ್ಣ ಹಿಡುವಳಿಗಳನ್ನು ಒಗ್ಗೂಡಿಸಿ ಇಸ್ರೇಲ್ ಮಾದರಿಯಲ್ಲಿ ದೊಡ್ಡ ಹಿಡುವಳಿಯಾಗಿಸಿ ಯಾಂತ್ರೀಕರಣ ಕೃಷಿ ಮಾಡಿದರೆ ದೇಶದ ಪ್ರಗತಿಗೆ ಪೂರಕವಾಗುತ್ತದೆ. ಯಾವುದೇ ಸಂಸ್ಥೆ ಬೆಳಯಬೇಕಾದರೆ ಕೃಷಿ ಕ್ಷೇತ್ರ ಅಗತ್ಯ ಎಂದರು.

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತತ್ವದ ಬುನಾದಿ ಮೇಲೆ ಕಟ್ಟಿರುವುದೇ ಸಹಕಾರ ಕ್ಷೇತ್ರ. ಸಹಕಾರ ಕ್ಷೇತ್ರ ಕೃಷಿಯಲ್ಲಿ ದೊಡ್ಡ ಬದಲಾವಣೆ ತಂದಿದೆ. ದೇಶಕ್ಕೆ ಆಹಾರ ಪೂರೈಕೆ ಮಾಡುವ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಬಡ್ಡಿ ರಹಿತ ಸಾಲ ನೀಡುವ ಮೂಲಕ ಪ್ರಗತಿ ಸಾಧಿಸಿದೆ. ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯಾದ ನಂತರ ಪ್ರತಿಯೊಂದೂ ಯಾಂತ್ರೀಕರಣವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts