More

    ಸರ್ವಜ್ಞರ ವಚನಗಳು ಸರ್ವಕಾಲಿಕ ಸತ್ಯ


    ಯಾದಗಿರಿ: ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಮಕ್ಕಳು, ಯುವಜನಾಂಗ ಹಾಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಹೇಳಿದರು.

    ಸೋಮವಾರ ನಗರದ ಜಿಲ್ಲಾ ಕಸಾಪ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತ್ರಿಪದಿ ಕವಿ ಸರ್ವಜ್ಞರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞರು ಬಳಸದ ಪದವಿಲ್ಲ ಎಂಬ ನಾಣ್ನುಡಿಯಂತೆ, ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮನೆ ಮಾಡಿದ್ದ ಅನಿಷ್ಠ ಪದ್ಧತಿಗಳ ದಮನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

    ಕವಿ ಸರ್ವಜ್ಞನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯಾತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆ. ಸರಳ, ಸಜ್ಜನಿಕೆ ಹಾಗೂ ಆದರ್ಶ ಗುಣಗಳನ್ನು ಹೊಂದಿದ್ದ ಸರ್ವಜ್ಞ ಸುಂದರ ಹಾಗೂ ಆದರ್ಶ ಸಮಾಜ ನಿಮರ್ಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದರು.

    ಉಪನ್ಯಾಸಕ ಗುರುಪ್ರಸಾದ್ ವೈದ್ಯ ಮಾತನಾಡಿ, 2 ಸಾವಿರಕ್ಕೂ ಅಕ ತ್ರಿಪದಿಗಳನ್ನು ಬರೆದು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಅಪರ್ಿಸುವ ಮೂಲಕ ದಾರ್ಶನಿಕರ ಸಾಲಿನಲ್ಲಿ ನಿಂತವರು ಸರ್ವಜ್ಞರು. ಕೋಟಿ ವಿಧ್ಯೆಗಿಂತ ಮೇಟಿ ವಿಧ್ಯೆ ಮೇಲು ಎಂಬ ಅವರ ನುಡಿಗಳು ಇಂದು ಎಲ್ಲರ ಮನದಾಳದಲ್ಲಿ ನೆಲೆಸಿದೆ ಎಂದ ಅವರು, ಗುರು-ಹಿರಿಯರಿಗೆ ಸ್ಮರಿಸುವ, ಪೂಜಿಸುವ ನಡೆಯು ಯುವ ಪೀಳಿಗೆ ಮರೆಯುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯು ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಎಲ್ಲರೂ ಅರಿತು ಬದುಕಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts