More

    ಕೋಟಿ ಸಂಪಾದಿಸಿದರೂ ನೋಟು ತಿನ್ನಲಾಗದು

    ರಿಪ್ಪನ್‌ಪೇಟೆ: ಚಿನ್ನಕ್ಕಿಂತ ಅನ್ನಕ್ಕೆ ಬೆಲೆ ಹೆಚ್ಚು. ಏಕೆಂದರೆ ಚಿನ್ನವಿಲ್ಲದೆ ದಿನ ಕಳೆಯಬಹುದು ಆದರೆ ಅನ್ನವಿಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ ಎಂದು ಮಳಲಿ ಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಎಳ್ಳಮಾವಾಸ್ಯೆ ಅಂಗವಾಗಿ ಗವಟೂರು ಹೊಳೆಸಿದ್ಧೇಶ್ವರ ದೇವಸ್ಥಾನ ಸಮಿತಿ ಹಮ್ಮಿಕೊಂಡಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಾವಿರ ಜನ ಇದ್ದರೂ ಸಾವನ್ನು ನಿಲ್ಲಿಸಲಾಗದು. ಕೋಟಿ ಸಂಪಾದಿಸಿದರೂ ನೋಟು ತಿನ್ನಲಾಗದು. ಆದ್ದರಿಂದ ಬದುಕಿ ಬಾಳಲು ಪ್ರತಿಯೊಬ್ಬರಿಗೂ ಅನ್ನ ಎಷ್ಟು ಮುಖ್ಯವೋ, ಅಷ್ಟೇ ಒಳ್ಳೆಯ ಮಾತು ಮುಖ್ಯ. ಒಳ್ಳೆಯತನ ಒಂದೇ ನಾವು ಉಳಿಸಿಟ್ಟು ಹೋಗುವ ಬೆಲೆಕಟ್ಟಲಾಗದ ಆಸ್ತಿ. ಹಾಗಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಆದೇಶಿಸಿದ್ದು ಧರ್ಮ ಒಂದೇ ಶಾಶ್ವತ. ಆದ್ದರಿಂದ ಧರ್ಮದ ತಳಹದಿಯ ಮೇಲೆ ಜೀವನವನ್ನು ನಡೆಸುವುದು ಬಹುಮುಖ್ಯಎಂದರು.
    ಜ್ಞಾನ ಕೊಡುವ ಶ್ರೀಗುರು, ಅನ್ನ ನೀಡುವ ರೈತ ಪ್ರತಿಯೊಬ್ಬರಿಗೂ ಅವಶ್ಯ. ಗುರು-ಹಿರಿಯರು, ತಂದೆ-ತಾಯಿರನ್ನು ಗೌರವಿಸಿ,ಬಾಳುವುದೇ ನಿಜವಾದ ಜೀವನ ಎಂದರು.
    ಸಮಿತಿಯ ಅಧ್ಯಕ್ಷ ಉಲ್ಲಾಸ, ಪ್ರಮುಖರಾದ ದುಂಡರಾಜಪ್ಪ ಗೌಡ, ಕೃಷ್ಣಯ್ಯ ಶೆಟ್ಟಿ, ಹುಸೇನ್‌ಸಾಬ್, ಮಲ್ಲಿಕಾರ್ಜುನ, ವಸಂತ, ರಾಘವೇಂದ್ರ, ಶ್ರೀಧರ ಇತರರಿದ್ದರು.
    ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ಕೊಳವಂಕ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts