More

    ಸರ್ಕಾರಿ ಸೌಲಭ್ಯಕ್ಕಾಗಿ ಹೋರಾಟ ಅನಿವಾರ್ಯ

    ಚಿತ್ರದುರ್ಗ: ಸಮಾಜದ ಬೆಳವಣಿಗೆಗೆ ಸಂಘಟನೆ ಎಷ್ಟು ಮುಖ್ಯವೋ ಸರ್ಕಾರದ ಸೌಲಭ್ಯ ಪಡೆಯಲು ಹೋರಾಟ ಕೂಡ ಅನಿವಾರ್ಯ ಎಂದು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಲಹೆ ನೀಡಿದರು.

    ಸವಿತಾ ಸಮಾಜದ ಜಿಲ್ಲಾ, ತಾಲೂಕು, ಮಹಿಳಾ, ಯುವ, ಕಲಾವಿದರ, ವಿದ್ಯಾರ್ಥಿ ಘಟಕದಿಂದ ತರಾಸು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ, ಭಾರತರತ್ನ ಕರ್ಪೂರಿ ಠಾಕೂರ್ ಜನ್ಮ ಶತಮಾನೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.

    ವೇದಗಳ ಕಾಲ, ರಾಜರ ಆಸ್ಥಾನ ಸೇರಿ ಸಂಗೀತ ಸೇವೆಯಲ್ಲೂ ಸವಿತಾ ಸಮುದಾಯ ಹೆಸರಾಗಿದೆ. ಇನ್ನಿತರೆ ಸಮಾಜಕ್ಕೆ ಉತ್ತಮ ಸೇವೆಯೊಂದಿಗೆ ಮಾದರಿಯಾಗಿದೆ ಎಂದರು.

    ಕಾಂಗ್ರೆಸ್ ಮುಖಂಡ ಕೆ.ಸಿ.ನಾಗರಾಜು ಮಾತನಾಡಿ, ಸಣ್ಣ ಸಮುದಾಯಗಳ ಕಡೆ ಯಾರೂ ಗಮನ ಹರಿಸಲಾರರು. ಹೀಗಾಗಿ ಸಂಘಟಿತರಾಗಲು ಮುಂದಾಗಿ. ಎಸ್ಸಿ ಮೀಸಲಾತಿ ಪಟ್ಟಿಗೆ ಸೇರಲು ಪ್ರಯತ್ನಿಸಿ. ಸಮಾಜದ ಕೆಲಸ ತುಂಬಾ ಜಾಗರೂಕತೆಯಿಂದ ಮಾಡಿ. ಅಗತ್ಯ ಸಹಕಾರ ನೀಡಲು ಸಿದ್ಧ ಎಂದು ಭರವಸೆ ನೀಡಿದರು.

    ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮಡಿವಾಳ -ಸವಿತಾ ಎರಡೂ ಕಾಯಕ ಸಮಾಜಗಳಾಗಿವೆ. ನಿಮ್ಮ ಕುಲಕಸುಬನ್ನೇ ಮೇಲ್ವರ್ಗದವರು ಹೆಸರು ಬದಲಿಸಿಕೊಂಡು ಹೈಜಾಕ್ ಮಾಡುತ್ತಿವೆ. ಇದರ ಕುರಿತು ಮೊದಲು ಗಮನಹರಿಸಿ. ಚಿಕ್ಕ ಸಮುದಾಯ ಗುರುತಿಸಿ ಸರ್ಕಾರ ವಿವಿಧ ಸೌಲಭ್ಯ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಮಾತನಾಡಿ, ನಗರ, ಪಟ್ಟಣ, ಗ್ರಾಮೀಣ ಎನ್ನದೇ ಮೂರು ಭಾಗಗಳಲ್ಲೂ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು. ವಿವಿಧ ನಿಗಮ ಮಂಡಳಿಗಳಲ್ಲಿ ನಾಮ ನಿರ್ದೇಶನ ಮಾಡುವ ಮೂಲಕ ಸಣ್ಣ ಸಮಾಜದವರನ್ನು ಸರ್ಕಾರ ಗುರುತಿಸಬೇಕಿದೆ ಎಂದು ಒತ್ತಾಯಿಸಿದರು.

    ಮೆರವಣಿಗೆ: ಸವಿತಾ ಮಹರ್ಷಿ ಜಯಂತಿ, ಭಾರತರತ್ನ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಏಕನಾಥೇಶ್ವರಿ ದೇವಿ ಪಾದದ ಗುಡಿ ಮುಂಭಾಗ ಭಾವಚಿತ್ರ ಮೆರವಣಿಗೆಗೆ ಚಾಲನೆ ದೊರೆಯಿತು. ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ, ಶಿಕ್ಷಕರ ಭವನ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಂಚರಿಸಿ ರಂಗಮಂದಿರ ತಲುಪಿತು.

    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಶ್ವಕರ್ಮ ಸಮಾಜದ ಮುಖಂಡ ಪ್ರಸನ್ನಕುಮಾರ್, ಸವಿತಾ ಸಮಾಜದ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಲಿಂಗರಾಜು, ಮುಖಂಡರಾದ ಸಂಪಿಗೆ ತಿಪ್ಪೇಸ್ವಾಮಿ, ವೇಣುಗೋಪಾಲ್, ಬಾಲು, ಶ್ರೀನಿವಾಸ್, ನರಸಿಂಹ, ರಾಜಣ್ಣ, ಚಲಪತಿ, ಕುಮಾರ್, ಕೃಷ್ಣಮೂರ್ತಿ, ಬಸವರಾಜು, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts