More

    ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ

    ಗುತ್ತಲ: ಪಟ್ಟಣದಲ್ಲಿ ವಾಸಿಸುತ್ತಿದ್ದ ಜನರು ಕೋವಿಡ್​ನಿಂದ ಗ್ರಾಮೀಣ ಪ್ರದೇಶಕ್ಕೆ ಬಂದಿರುವುದರಿಂದ ಈ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.

    ಸಮೀಪದ ನೆಗಳೂರ ಗ್ರಾಮದ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೊ›ಜೆಕ್ಟರ್ ಕೊಡುಗೆ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮುಂದಿನ ವರ್ಷದಿಂದ ಗ್ರಾಮದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಲಾಗುವುದು. ಶೈಕ್ಷಣಿಕ ಕಾರ್ಯಕ್ಕೆ ಪ್ರೊಜೆಕ್ಟರ್, ಟಿವಿ, ಮೊಬೈಲ್ ಹೀಗೆ ಅನೇಕ ಸಾಧನಗಳು ಬೇಕಾಗುತ್ತವೆ. ಅಂತಹ ಒಂದು ಪ್ರೊಜೆಕ್ಟರ್ ಸಾಧನವನ್ನು ಯುಪಿಎಲ್ ಅಡ್ವಾಂಟಾ ಸೀಡ್ಸ್ ಕಂಪನಿ ನೀಡಿದೆ. ಇದರಿಂದ ಅನೇಕ ಬಡಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.

    ಯುಪಿಎಲ್ ಅಡ್ವಾಂಟಾ ಸೀಡ್ಸಕಂಪನಿ ವ್ಯವಸ್ಥಾಪಕ ಶ್ರೀಕಾಂತ ಕೆ.ಎಸ್. ಮಾತನಾಡಿ, ಪ್ರತಿ ವ್ಯಕ್ತಿ ದುಡಿಮೆಯಲ್ಲಿ ಧಾರ್ವಿುಕ, ಸಾಮಾಜಿಕ ಕೆಲಸಕ್ಕೆ ಸ್ವಲ್ಪ ಹಣ ನೀಡುತ್ತಾನೆ. ಹಾಗೆಯೇ ನಮ್ಮ ಕಂಪನಿ ಶೇ. 2ರಷ್ಟು ಹಣವನ್ನು ಸಾಮಾಜಿಕ, ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತದೆ. ಈ ವರ್ಷ ಹಾವೇರಿ ತಾಲೂಕಿನ ನೆಗಳೂರ, ಬಸಾಪುರ ಶಾಲೆಗೆ ಪೊ›ಜೆಕ್ಟರ್, ಮೈಲಾರ ಗ್ರಾಮದ ಶಾಲೆಗೆ ಸೈಂಟಿಪಿಕ್ ಲ್ಯಾಬ್ ಒದಗಿಸಲಾಗಿತ್ತಿದೆ. ಈ ವರ್ಷದಲ್ಲಿ ಮಾವು, ತೆಂಗು, ಲಿಂಬು ಸೇರಿ 2000 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ತಿಳಿಸಬೇಕಾಗಿದೆ ಎಂದರು.

    ಶಾಲೆಗೆ ಸ್ಯಾನಿಟೈಸರ್ ಸಿಂಪಡಣೆ ಯಂತ್ರವನ್ನು ನಾಗರಾಜ ಸನದಿ ನೀಡಿದರು. ಎಪಿಎಂಸಿ ಸದಸ್ಯ ಕೆ.ಎಂ. ಮೈದೂರ, ಅಡ್ವಾಂಟಾ ಸೀಡ್ಸ್ ಕಂಪನಿ ರಾಣೆಬೆನ್ನೂರ ಶಾಖೆ ವ್ಯವಸ್ಥಾಪಕ ಗೌಡಪ್ಪಗೌಡ ಎಸ್., ಮುಖ್ಯ ಶಿಕ್ಷಕರಾದ ವಿ.ವಿ. ಕಮತರ, ಜೆ.ಸಿ. ಚುರ್ಚಿ, ಎಸ್​ಡಿಎಂಸಿ ಅಧ್ಯಕ್ಷ ಶಿವಾನಂದ ಮಡಿವಾಳರ, ಈರಯ್ಯ ಹಿರೇಮಠ, ಕೋಟೆಪ್ಪ ದೊಡ್ಡಣ್ಣನವರ, ಯುಪಿಎಲ್ ಕಂಪನಿ ಸಿಬ್ಬಂದಿ ಇದ್ದರು. ಎಂ.ಎಚ್. ಬೆಳವಿಗಿ ನಿರೂಪಿಸಿದರು. ಎಸ್.ಜಿ. ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts