More

    ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ

    ಭದ್ರಾವತಿ: ಹಿರಿಯೂರು ಗ್ರಾಮ ಠಾಣಾ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ತಾಪಂ ಕಚೇರಿ ಮುಂಭಾಗ ಹಿರಿಯೂರು ಗ್ರಾಮಾಭಿವೃದ್ಧಿ ಹೋರಾಟ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು, ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
    ಕಳೆದ 3 ವರ್ಷಗಳಿಂದ ಹಳೇ ಹಿರಿಯೂರು ಗ್ರಾಮ ಠಾಣಾ ಜಾಗವನ್ನು ಬಡವರಿಗೆ ಕೊಡಿ ಎಂದು ಅ„ಕಾರಿಗಳು ಹಾಗೂ ರಾಜಕಾರಣಿಗಳ ಬಳಿ ಕೇಳಿದರೂ ಇದುವರೆಗೂ ಯಾರು ನಮಗೆ ಸ್ಪಂದಿಸದೆ ತಾತ್ಸಾರ ಮನೋಭಾವ ತೋರುತ್ತಿದ್ದಾರೆ. ಅಲ್ಲದೆ ಅ„ಕಾರಿಗಳು ಸಹ ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದೆ ರಾಜಕಾರಣಿಗಳು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಕೇವಲ 4 ಕುಟುಂಬಗಳ ರಕ್ಷಣೆ ಮಾಡುವ ಉದ್ದೇಶದಿಂದ 400 ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಒತ್ತುವರಿ ಮಾಡಿರುವ ಗ್ರಾಮಠಾಣಾ ಜÁಗವನ್ನು ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಮಾಡುತ್ತಿರುವ ನಮ್ಮ ಹೋರಾಟಕ್ಕೆ ಕೂಡಲೇ ಅ„ಕಾರಿಗಳು ಸ್ಪಂದಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
    ಹಿರಿಯೂರು ಪಿಡಿಒ ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಕ್ರಮದ ಬಗ್ಗೆ ಸಂಘಟನೆಗಳು ದಾಖಲೆ ಸಮೇತ ಮೇಲ„ಕಾರಿಗಳ ಗಮನಕ್ಕೆ ತಂದರೂ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲ. ಭ್ರಷ್ಟರನು ರಕ್ಷಿಸುವ ಕೆಲಸ ಮೇಲಾ„ಕಾರಿಗಳಿಂದ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ. ಬಡವರಿಗೆ ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
    ಪ್ರಮುಖರಾದ ಕೆ.ಟಿ.ಪ್ರಸನ್ನ. ಬಿ.ರವಿ, ಸತ್ಯನಾರಾಯಣ ರಾವ್ ಬೋಸ್ಲೆ, ಎಚ್.ಎಂ.ಪುಟ್ಟಪ್ಪ, ಅಜಯ್, ಮಂಜುನಾಥ್, ವಿಶ್ವನಾಥ್, ಹೊನ್ನಪ್ಪ, ಜಯಮ್ಮ, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts